ಜನಪ್ರಿಯ ಧಾರಾವಾಹಿ `ರಾಧಾ ಕೃಷ್ಣ’ (Radhakrishna) ಸೀರಿಯಲ್ನ ರಾಧೆ ಮಲ್ಲಿಕಾ ಸಿಂಗ್ (Mallika Singh) ಇದೀಗ ಸ್ಯಾಂಡಲ್ವುಡ್ಗೆ (Sandalwood) ಪಾದಾರ್ಪಣೆ ಮಾಡ್ತಿದ್ದಾರೆ. ಡಾ.ರಾಜ್ ಕುಟುಂಬದ ಕುಡಿ ವಿನಯ್ ರಾಜ್ಕುಮಾರ್ಗೆ (Vinay Rajkumar) ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
- Advertisement 2
ಕಿರುತೆರೆಯ ರಾಧೆಯಾಗಿ ಮನಗೆದ್ದಿದ್ದ ಚೆಲುವೆ ಮಲ್ಲಿಕಾ ಸಿಂಗ್ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಇದೀಗ ಹಿರಿತೆರೆಯಲ್ಲಿ ಮಿಂಚಲು ನಟಿ ಮಲ್ಲಿಕಾ ಸಿಂಗ್ ರೆಡಿಯಾಗಿದ್ದಾರೆ. ಸಿಂಪಲ್ ಸುನಿ (Simple Suni) ಮತ್ತು ವಿನಯ್ ರಾಜ್ಕುಮಾರ್ ಕಾಂಬಿನೇಷನ್ ಚಿತ್ರಕ್ಕೆ ರಾಧಾ (Radha) ಅಲಿಯಾಸ್ ಮಲ್ಲಿಕಾ ಸಿಂಗ್ ಆಯ್ಕೆಯಾಗಿದ್ದಾರೆ.
- Advertisement 3
ಇತ್ತೀಚಿಗಷ್ಟೇ ವಿನಯ್ ರಾಜ್ಕುಮಾರ್ ಹೊಸ ಸಿನಿಮಾಗೆ ಚಾಲನೆ ನೀಡಲಾಗಿತ್ತು. ಸಿಂಪಲ್ ಸುನಿ ನಿರ್ದೇಶನದ ಹೊಸ ಚಿತ್ರದಲ್ಲಿ ವಿನಯ್ಗೆ ಜೋಡಿಯಾಗಿ ತಮಿಳಿನ `ವಿಕ್ರಮ್’ ನಟಿ ಸ್ವಾತಿಷ್ಠ ಕೃಷ್ಣನ್ ನಟಿಸುವ ಬಗ್ಗೆ ಅನೌನ್ಸ್ ಮಾಡಲಾಗಿತ್ತು. ಈ ಬೆನ್ನಲ್ಲೇ ಈ ಚಿತ್ರಕ್ಕೆ ಹೊಸ ನಾಯಕಿಯ ಎಂಟ್ರಿಯಾಗಿದೆ. ಇದನ್ನೂ ಓದಿ: Exclusive- ರಕ್ಷಿತ್ ಶೆಟ್ಟಿ ಎಲ್ಲಿಯೂ ಕಾಣಿಸ್ತಿಲ್ಲ ಯಾಕೆ? ಅದಕ್ಕೊಂದು ಕಾರಣವಿದೆ
- Advertisement 4
ಈ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ಗೆ ಇಬ್ಬರು ನಾಯಕಿಯರು ಇರಲಿದ್ದಾರೆ. ಸ್ವಾತಿಷ್ಠ ಕೃಷ್ಣನ್- ಮಲ್ಲಿಕಾ ಸಿಂಗ್ ಇಬ್ಬರು ವಿನಯ್ ಜೊತೆ ಡ್ಯುಯೇಟ್ ಹಾಡಲಿದ್ದಾರೆ. ನಾಯಕಿ ಸ್ವಾತಿಷ್ಠ ಪತ್ರಕರ್ತೆ (Journalist) ಪಾತ್ರದಲ್ಲಿ ನಟಿಸುತ್ತಿದ್ದು, ಮಲ್ಲಿಕಾ ಕಾಶ್ಮೀರಿ ಹುಡುಗಿಯ ಪಾತ್ರಕ್ಕೆ ಜೀವತುಂಬಲಿದ್ದಾರೆ. ಇನ್ನೂ ಸಿಂಪಲ್ ಸುನಿ ನಿರ್ದೇಶನದ ಈ ಹೊಸ ಪ್ರೇಮ ಕಥೆಯಲ್ಲಿ ಈ ಮೂವರ ಜೋಡಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.