ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಬಿಗ್ಬಾಶ್ ಲೀಗ್ನಲ್ಲಿ ಭಾರತದ ರಾಧಾ ಯಾದವ್ ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿಯುವ ಮೂಲಕ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದ್ದಾರೆ.
ಸಿಡ್ನಿ ಸಿಕ್ಸರ್ಸ್ ಮತ್ತು ಬ್ರಿಸ್ಬೇನ್ ನಡುವಿನ ಪಂದ್ಯದಲ್ಲಿ ಮಿಲನ್ ಡು ಪ್ರೀಜ್ ಪಾಯಿಂಟ್ ಮೇಲೆ ಬಾಲ್ನ್ನು ಬೌಂಡರಿ ಗಟ್ಟಲು ಪ್ರಯತ್ನಿಸಿದರು. ಈ ವೇಳೆ ಪಾಯಿಂಟ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಧಾ ಯಾದವ್ ಚಂಗನೆ ಹಾರಿ ಒಂದೇ ಕೈಯಲ್ಲಿ ಅದ್ಭುತವಾದ ಕ್ಯಾಚ್ ಹಿಡಿದರು. ಇದನ್ನು ಕಂಡ ಅಭಿಮಾನಿಗಳು ಆಶ್ಚರ್ಯಚಕಿತರಾದರು. ತಂಡ ಸಹ ಆಟಗಾರ್ತಿಯರು ಯಾದವ್ ಕ್ಯಾಚ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಟಿ20 ವಿಶ್ವಕಪ್ #BoycottPakistan ಬಿಸಿಬಿಸಿ ಚರ್ಚೆ
As we pause for a drink at Blundstone Arena, can we just marvel at this catch from Radha Yadav one more time? @CommBank | #WBBL07 pic.twitter.com/q2a81D85Yl
— cricket.com.au (@cricketcomau) October 17, 2021
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ಬಾಶ್ ಲೀಗ್ನಲ್ಲಿ ಭಾರತದ 8 ಮಂದಿ ಆಟಗಾರ್ತಿಯರು ಆಡುತ್ತಿದ್ದು, ಅವರು ಪ್ರತಿನಿಧಿಸುತ್ತಿರುವ ತಂಡದ ಪರವಾಗಿ ಭರ್ಜರಿ ಪ್ರದರ್ಶನ ಕೊಡುವ ಮೂಲಕ ವಿಶ್ವ ಕ್ರಿಕೆಟ್ನ ಗಮನಸೆಳೆಯುತ್ತಿದ್ದಾರೆ. ಇದನ್ನೂ ಓದಿ: ಚಾಂಪಿಯನ್ ಆಟಗಾರರಿಗಿಲ್ಲ T20 ವಿಶ್ವಕಪ್ ಆಡುವ ಅದೃಷ್ಟ