ನೆಲಮಂಗಲ: ನಕಲಿ ನಂದಿನಿ ತುಪ್ಪದ ಜಾಲದ ಹಿನ್ನೆಲೆಯಲ್ಲಿ ಖಾಸಗಿ ಗೋದಾಮಿನ ಮೇಲೆ ಆಹಾರ ಸಂರಕ್ಷಣಾ ಇಲಾಖೆ ಹಾಗೂ ಕೆಎಂಎಫ್ ಅಧಿಕಾರಿಗಳ ತಂಡ ಮತ್ತು ಮಾದನಾಯಕನಹಳ್ಳಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.
ಆಹಾರ ಸಂರಕ್ಷಣಾ ಇಲಾಖೆ ಹಾಗೂ ಪೊಲೀಸರು ನಕಲಿ ತುಪ್ಪದ ಜಾಲದ ಮೇಲೆ ತನಿಖೆ ಚುರುಕುಗೊಳಿಸಿದ್ದು, ಇಂದು ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಮಾಕಳಿ ಬಳಿಯ ಖಾಸಗಿ ಗೋದಾಮಿನ ಮೇಲೆ, ಖಚಿತ ಮಾಹಿತಿ ಆಧರಿಸಿ ದಿಢೀರ್ ದಾಳಿ ನಡೆಸಿದರು. ಇದನ್ನೂ ಓದಿ: ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಎಸ್‍ಟಿಎಸ್ ಸೂಚನೆ
Advertisement
Advertisement
ಖಾಸಗಿ ಗೋದಾಮಿನಲ್ಲಿ ಸಂಗ್ರಹವಾಗಿದ್ದ ನಕಲಿ ನಂದಿನಿ ತುಪ್ಪವನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಖಾಸಗಿ ಗೋದಾಮಿನಲ್ಲಿ ಸಂಗ್ರಹವಾಗಿದ್ದ, ನಂದಿನಿ ತುಪ್ಪ ಕೆಎಂಎಫ್ ನ ನಂದಿನಿ ತುಪ್ಪವನ್ನೇ ಹೋಲುವ ನಕಲಿ ತುಪ್ಪವಾಗಿದ್ದು, ಸುಮಾರು 15 ಲಕ್ಷ ಮೌಲ್ಯದ, ನಕಲಿ ತುಪ್ಪವನ್ನು ಅಧಿಕಾರಿಗಳ ತಂಡ ವಶ ಪಡಿಸಿಕೊಂಡಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ
Advertisement
Advertisement
ಇನ್ನೂ ಮೈಸೂರಿನಲ್ಲಿ ಬಯಲಾಗಿದ್ದ ನಕಲಿ ತುಪ್ಪ ರಾಜ್ಯದ ಮೂಲೆ ಮೂಲೆಗಳಲ್ಲಿ ಸರಬರಾಜು ಆಗಿರುವುದು ಸದ್ಯ ಕಂಡು ಬರುತ್ತಿದೆ. ಈ ಜಾಲವನ್ನು ಪತ್ತೆ ಹಚ್ಚುವುದು ಅಕ್ಷರಶಃ ಕೆಎಂಎಫ್ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.