ಬೆಂಗಳೂರು: ಯಾವುದೇ ದೇಶದ್ರೋಹಿಯನ್ನು ಬಿಡೋದಿಲ್ಲ, ಮಟ್ಟ ಹಾಕುತ್ತೇವೆ. ಇನ್ನೂ ತನಿಖೆ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪೊಲೀಸರು ಸೂಚಿಸಿದ್ದಾರೆ. ಇನ್ನೂ ಬೆದರಿಕೆ ಇದೆ ಅನ್ನೋದು ಸತ್ಯಾಸತ್ಯತೆ ತಿಳಿದುಬಂದಿದೆ. ಇದರಲ್ಲಿ ಪಿಎಫ್‍ಐ ಭಾಗಿಯಾಗಿದೆಯಾ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ. ಈ ಬಗ್ಗೆ ಸಿಎಂ ಜೊತೆ ಇಂದು ಚರ್ಚೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
Advertisement
Advertisement
ಈಶ್ವರಪ್ಪಕೊಲೆ ಮಾಡಿಸಿದ್ದಾರೆ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ನಾನು ಗೃಹ ಸಚಿವನಾಗಿ ಆಗಿ ಈ ಹಿಂದೆ ಕೆಲಸ ಮಾಡಿದ್ದೇನೆ. ಪೊಲೀಸ್ ಎನ್ನುವುದು ಸ್ವಾತಂತ್ರ ಸಂಸ್ಥೆ. ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದೆ. ಹಲವಾರು ಜನ ಸಲಹೆ ಕೊಡುತ್ತಿದ್ದಾರೆ, ಕೊಟ್ಟ ಸಲಹೆ ಗೌರವಯುತವಾಗಿ ತೆಗೆದುಕೊಳ್ಳುತ್ತೇವೆ. ಅಂತಿಮವಾಗಿ ಸಿಎಂ ಕ್ರಮ ಕೈಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಹರ್ಷನ ಕೊಲೆ ರಾಜಕೀಯ ಪ್ರೇರಿತವೋ ಎಂಬ ಆಯಾಮದಲ್ಲಿ ತನಿಖೆ: ಆರಗ ಜ್ಞಾನೇಂದ್ರ
Advertisement
Advertisement
ಶಿವಮೊಗ್ಗ ಕೊಲೆ ಕುರಿತಾಗಿ ಒಬ್ಬೊಬ್ಬ ಸಚಿವರು ಒಂದೊಂದು ಹೇಳಿಕೆ ಕೊಡುತ್ತಿರುವುದು ಗಮನಕ್ಕೆ ಬಂದಿದೆ. ಅವರೆಲ್ಲರ ಜೊತೆ ಚರ್ಚೆ ಮಾಡುತ್ತೇನೆ. ಸಿಎಂ ಜೊತೆ ಮಾತನಾಡುತ್ತೇನೆ. ಅವರೇ ಸುಪ್ರೀಂ ಎಂದ ಅವರು, ಡಿ.ಕೆ ಶಿವಕುಮಾರ್ ಹಾಗೂ ಈಶ್ವರಪ್ಪ ಅವರ ನಡುವೆ ವೈಯಕ್ತಿಕ ಜಗಳ ನಡೆದಿದೆ. ಅಧಿವೇಶನ ಕೂಡ ಇದೇ ವಿಚಾರಕ್ಕೆ ನಿಂತಿರೋದು. ವೈಯಕ್ತಿಕ ಟೀಕೆಗೆ ಗುರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹೆಣದ ಮೇಲೆ ರಾಜಕೀಯ ಮಾಡುವ ಅಭ್ಯಾಸ ಕಾಂಗ್ರೆಸ್ಸಿಗಿಲ್ಲ: ಬಿ.ಕೆ.ಹರಿಪ್ರಸಾದ್
ಶಿವಮೊಗ್ಗ ಪ್ರಕರಣದಲ್ಲಿ ಕೂಡ ಹೀಗೆ ಮುಂದುವರಿದಿದೆ. ಜೆಡಿಎಸ್ ಕೂಡ ಸದನ ನಡೆಸಲು ಧರಣಿ ಮಾಡಿದೆ. ಚರ್ಚೆ ಮಾಡಿದರೆ ಈಶ್ವರಪ್ಪ ಅವರ ಮೇಲೆ ಆರೋಪ ಮಾಡಿರುವ ಬಗ್ಗೆ ಚರ್ಚೆ ಮಾಡಬಹುದಿತ್ತು. ಸ್ಪೀಕರ್ ಹಾಗೂ ಯಡಿಯೂರಪ್ಪ ಅವರ ಜೊತೆ ನಾನೂ ಹೋಗಿ ಸಂಧಾನ ಮಾಡಿದೆ. ಆದರೆ ಮೊಂಡಾಟ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅವರು ಕಿಡಿಕಾರಿದರು.