ಚಿಕ್ಕಬಳ್ಳಾಪುರ: ಕಾಂಗ್ರೆಸ್‍ನವರಿಗೆ (Congress) ಬಿಜೆಪಿ (BJP) ಸರ್ಕಾರದ ಸಾಧನೆ ಕಂಡು ಹೊಟ್ಟೆ ಉರಿಯಾಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ (Election) ಸೋತ ಬಳಿಕ ಕಾಂಗ್ರೆಸ್ ನಾಯಕರು ಯಾರೂ ಕೂಡ ರಾಜ್ಯದಲ್ಲಿ ಇರಲ್ಲ. ರಾಜ್ಯ ಬಿಟ್ಟು ಬೇರೆ ಬೇರೆ ಕಡೆ ಓಡಿ ಹೋಗುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಕಂದಾಯ ಸಚಿವ ಆರ್.ಆಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ.
Advertisement
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎ.ಕೆ ಗೊಲ್ಲಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಲುಮೆ ಪ್ರಕರಣವನ್ನು ಕಾಂಗ್ರೆಸ್ ಹೆಚ್ಚು ಪ್ರಚಾರ ಮಾಡುತ್ತಿದೆ. ಯಾಕೆ ಅಂದ್ರೆ ಎಸ್‍ಸಿ (SC), ಎಸ್‍ಟಿ (ST) ಸಮುದಾಯದವರಿಗೆ ಮೀಸಲಾತಿ ನೀಡಿದ್ದೇವೆ. ಏರ್‌ಪೋರ್ಟ್‌ನಲ್ಲಿ ಕೆಂಪೇಗೌಡರ ಪ್ರತಿಮೆ ಮಾಡಿದ್ದೇವೆ. ಇದರಿಂದ ಮುಂದೆಯೂ ಬಿಜೆಪಿ ಆಧಿಕಾರಕ್ಕೆ ಬರುತ್ತೆ ಅಂತ ಅವರ ತಲೆಗೆ ಹೋಗಿದೆ. ಆ ಕೋಪ ಹೊಟ್ಟೆ ಉರಿ ತಡೆಯಲಾರದೆ ದಿನಕ್ಕೊಂದು ಏನೇನೋ ವಿಷಯ ಪ್ರಸ್ತಾಪ ಮಾಡ್ತಿದ್ದಾರೆ. 2012 ರಿಂದ ಅವರು ಏನು ಮಾಡಿದ್ದಾರೆ ಅಂತ ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರದಿಂದಲ್ಲೇ ಬಸವ ಜಯಂತಿ ಆಚರಣೆಗೆ ಪ್ರಯತ್ನ ಮಾಡ್ತೀನಿ: ಕಿಶನ್ ರೆಡ್ಡಿ
Advertisement
Advertisement
ಈಗ ಬಹಳ ಜೋರು ಜೋರಾಗಿ ಕಾಂಗ್ರೆಸ್‍ನವರು ಮಾತನಾಡುತ್ತಿದ್ದಾರೆ. ಈ ದೇಶವನ್ನು 50 ವರ್ಷ ಆಳಿದ್ರು ಏನೇನು ಮಾಡಿದ್ರು ಅಂತ ಜನರಿಗೆ ಗೊತ್ತಿದೆ. ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡೋದೆ ನಮ್ಮ ಗುರಿ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಲಿದೆ. ಸೋತ ನಂತರ ಕಾಂಗ್ರೆಸ್ ನಾಯಕರು ಯಾರೂ ಕೂಡ ರಾಜ್ಯದಲ್ಲಿ ಇರಲ್ಲ. ರಾಜ್ಯ ಬಿಟ್ಟು ಬೇರೆ ಬೇರೆ ಕಡೆ ಓಡಿ ಹೋಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಮಂಗ್ಳೂರಲ್ಲಿ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಆರೋಪ – ಪ್ರಸಿದ್ಧ ವೈದ್ಯೆ, ಯುವಕನ ವಿರುದ್ಧ ದೂರು ದಾಖಲು
Advertisement
ಚಿಲುಮೆ ಸಂಸ್ಥೆಯಿಂದ ಮತದಾರರ ದತ್ತಾಂಶ ಕಳವು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ವಿರುದ್ಧ ಸುಮ್ಮನೆ ಅಪಾದನೆ ಮಾಡೋದು ಸರಿಯಲ್ಲ. 2012 ರಿಂದ ಅದೇ ಸಂಸ್ಥೆ ಕೆಲಸ ಮಾಡುತ್ತಿದೆ. ಆದ್ರೆ ಆಗ ಯಾರೂ ಬಾಯಿ ಬಿಚ್ಚಲಿಲ್ಲ ಈಗ ದೊಡ್ಡದಾಗಿ ಬಾಯಿ ಬಿಚ್ಚಿದ್ದಾರೆ. ಸಿಎಂ ಸೂಚನೆ ಮೇರೆಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಚುನಾವಣಾ ಆಯೋಗ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.