ಬೀದರ್: ಕೇಂದ್ರ ಸರ್ಕಾರದಿಂದಲ್ಲೇ ಬಸವ ಜಯಂತಿ ಆಚರಣೆಗೆ ಪ್ರಯತ್ನ ಮಾಡುತ್ತೆನೆ ಎಂದು ಕೇಂದ್ರ ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಸಚಿವ ಜಿ.ಕಿಶನ್ ರೆಡ್ಡಿ (Kisan Reddy) ಬಸವಕಲ್ಯಾಣದಲ್ಲಿ ಭರವಸೆ ನೀಡಿದ್ದಾರೆ.
ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ವಂತಿಯಿಂದ ಬಸವಕಲ್ಯಾಣದಲ್ಲಿ ನಡೆದ 43ನೇಯ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದಾರೆ. ಬಸವಣ್ಣ (Basavanna) ನವರು ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ್ದು ಇಂಥಾ ಮಹಾನ್ ವ್ಯಕ್ತಿ ಜಯಂತಿಯನ್ನು ಕೇಂದ್ರದಲ್ಲೇ ಆಚರಣೆ ಮಾಡಲು ಪ್ರಯತ್ನ ಮಾಡುತ್ತೇವೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಬುಲೆಟ್ ಸವಾರಿ – ವೀಡಿಯೋ ವೈರಲ್
Advertisement
Advertisement
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ಗಮಕ್ಕೆ ತಂದು ಮುಂಬರುವ ಅಕ್ಷಯ ತೃತೀಯ ದಿನವೇ ಬಸವ ಜಯಂತಿ ಆಚರಣೆಗೆ ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿಕೆ ನೀಡಿದ್ದು ಇಗಾ ಬಸವಣ್ಣ ಅನುಯಾಯಿಗಳಿಗೆ ಹರ್ಷ ತಂದಿದೆ.