ಕತಾರ್: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (ಐಆರ್‌ಜಿಸಿ) ಗೂಢಚಾರರು ಎಂಬ ಶಂಕೆ ಮೇಲೆ 10 ಮಂದಿಯನ್ನು ಕತಾರ್‌ನಲ್ಲಿ ಬಂಧಿಸಲಾಗಿದೆ.
ದೇಶದ ನಿರ್ಣಾಯಕ ಮತ್ತು ಮಿಲಿಟರಿ ಮೂಲಸೌಕರ್ಯದ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸಲು ಏಳು ಶಂಕಿತರಿಗೆ ಬೇಹುಗಾರಿಕೆ ಕಾರ್ಯಾಚರಣೆಗಳನ್ನು ವಹಿಸಲಾಗಿತ್ತು. ಬೇಹುಗಾರಿಕೆ ಆರೋಪ ಹೊತ್ತಿರುವ ಇತರ ಮೂವರು ಡ್ರೋನ್‌ಗಳನ್ನು ನಿರ್ವಹಿಸುವಲ್ಲಿ ತರಬೇತಿ ಪಡೆದಿದ್ದರು ಎಂದು ವರದಿಯಾಗಿದೆ.
ತನಿಖೆಯ ಸಮಯದಲ್ಲಿ ಶಂಕಿತರು ಇರಾನಿನ ರೆವಲ್ಯೂಷನರಿ ಗಾರ್ಡ್‌ನೊಂದಿಗೆ ಸಂಪರ್ಕದಲ್ಲಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಬೇಹುಗಾರಿಕೆ ಮತ್ತು ವಿಧ್ವಂಸಕ ಕಾರ್ಯಾಚರಣೆಗಳನ್ನು ನಡೆಸಲು ಅವರನ್ನು ನಿಯೋಜಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಹಾರ್ಮೂಜ್ ಬಿಕ್ಕಟ್ಟಿನ ಬಗ್ಗೆ ದೊಡ್ಡ ನಿರ್ಧಾರ – ತೈಲ ಟ್ಯಾಂಕರ್‌ಗಳಿಗೆ ರಕ್ಷಣೆ ನೀಡುವಂತೆ ಟ್ರಂಪ್ ಆದೇಶ
ಏನಿದು ಐಆರ್‌ಜಿಸಿ..?
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‌ನ ಮೊದಲ ಸರ್ವೋಚ್ಚ ನಾಯಕ ರುಹೊಲ್ಲಾ ಖೊಮೇನಿ ಈ ಪಡೆಯನ್ನು ಸ್ಥಾಪಿಸಿದರು. ಕೇವಲ ದೇಶದ ಗಡಿ ಕಾಯುವುದು ಇದರ ಕೆಲಸವಲ್ಲ, ಬದಲಿಗೆ ಇರಾನ್‌ನ ಇಸ್ಲಾಮಿಕ್ ವ್ಯವಸ್ಥೆಯನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದು ತನ್ನದೇ ಆದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯನ್ನು ಹೊಂದಿದೆ. ಇದನ್ನೂ ಓದಿ: ಅಮೆರಿಕದ ದುಬಾರಿ ಶಸ್ತ್ರಾಸ್ತ್ರಗಳಿಗೆ ಇರಾನ್‌ನ ಅಗ್ಗದ ಡ್ರೋನ್‌ಗಳ ಸವಾಲು

