ನೌಕಾಪಡೆ 8 ಮಾಜಿ ಸಿಬ್ಬಂದಿಯ ಮರಣದಂಡನೆಗೆ ವಿರೋಧ – ಭಾರತದ ಮನವಿ ಸ್ವೀಕರಿಸಿದ ಕತಾರ್

Public TV
1 Min Read
Indian Fishermen pakistan jail

ನವದೆಹಲಿ: ಗೂಢಾಚಾರದ ಆರೋಪದ ಮೇಲೆ ಕಳೆದ ತಿಂಗಳು ಶಿಕ್ಷೆಗೆ ಗುರಿಯಾಗಿದ್ದ 8 ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಗೆ (Ex-Navy Personnel) ಮರಣದಂಡನೆ ವಿಧಿಸುವುದರ ವಿರುದ್ಧ ಭಾರತ (India) ಸಲ್ಲಿಸಿದ್ದ ಮೇಲ್ಮನವಿಯನ್ನು ಕತಾರ್ (Qatar) ನ್ಯಾಯಾಲಯ ಸ್ವೀಕರಿಸಿದೆ.

ಭಾರತದ ನೌಕಾಪಡೆಯ 8 ಮಾಜಿ ಸಿಬ್ಬಂದಿಗೆ ಮರಣದಂಡನೆ ವಿಧಿಸಿರುವುದನ್ನು ವಿರೋಧಿಸಿ ಭಾರತ ಸಲ್ಲಿಸಿದ ಮೇಲ್ಮನವಿಯನ್ನು ಕತಾರ್ ನ್ಯಾಯಾಲಯ ಪರಿಶೀಲಿಸಿದ ನಂತರ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ.

indian navy

ವರದಿಗಳ ಪ್ರಕಾರ ಗೂಢಾಚಾರಿಕೆ ಆರೋಪದ ಮೇಲೆ ಕತಾರ್‌ನ ಗುಪ್ತಚರ ಸಂಸ್ಥೆಯು 2022ರ ಆಗಸ್ಟ್‌ನಲ್ಲಿ ಭಾರತದ ನೌಕಾಪಡೆ 8 ಮಾಜಿ ಸಿಬ್ಬಂದಿಯನ್ನು ಬಂಧಿಸಿತು. ಆದರೆ ಕತಾರ್‌ನ ಅಧಿಕಾರಿಗಳು ಅವರ ವಿರುದ್ಧದ ಆರೋಪಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಅವರ ಜಾಮೀನು ಅರ್ಜಿಗಳನ್ನು ಹಲವಾರು ಬಾರಿ ತಿರಸ್ಕರಿಸಲಾಗಿತ್ತು. ಕಳೆದ ತಿಂಗಳು ಅವರ ವಿರುದ್ಧದ ತೀರ್ಪನ್ನು ಕತಾರ್‌ನ ಪ್ರಥಮ ನಿದರ್ಶನದ ನ್ಯಾಯಾಲಯವು ಪ್ರಕಟಿಸಿತು. ಇದನ್ನೂ ಓದಿ: ಇಸ್ರೇಲ್-ಹಮಾಸ್ ನಡ್ವೆ ಇಂದಿನಿಂದ ಕದನ ವಿರಾಮ – 13 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಸಿದ್ಧತೆ

ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಸಂಜೀವ್ ಗುಪ್ತಾ, ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್ ಮತ್ತು ನಾವಿಕ ರಾಗೇಶ್ ಗೋಪಕುಮಾರ್ ಬಂಧಿತ ಭಾರತೀಯ ನೌಕಾಪಡೆಯ ಮಾಜಿ ಯೋಧರು.

ಎಲ್ಲಾ ಮಾಜಿ ನೌಕಾಪಡೆಯ ಅಧಿಕಾರಿಗಳು ಭಾರತೀಯ ನೌಕಾಪಡೆಯಲ್ಲಿ 20 ವರ್ಷಗಳವರೆಗಿನ ವಿಶಿಷ್ಟ ಸೇವಾ ದಾಖಲೆಯನ್ನು ಹೊಂದಿದ್ದಾರೆ ಮತ್ತು ಪಡೆಯಲ್ಲಿ ಬೋಧಕರನ್ನು ಒಳಗೊಂಡಂತೆ ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ತಾಂತ್ರಿಕ ಅಡಚಣೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದವರ ರಕ್ಷಣೆ ವಿಳಂಬ

Share This Article