ಬೆಂಗಳೂರು: 25 ನಿಮಿಷ ಜಾಹೀರಾತು (Advertisement) ಪ್ರಕಟಿಸಿ ಸಮಯ ವ್ಯರ್ಥ ಮಾಡಿದ್ದಕ್ಕೆ ಪಿವಿಆರ್-ಐನಾಕ್ಸ್ (PVR- INOX) ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಸಿನಿಮಾ ಅಭಿಮಾನಿಗೆ ಜಯ ಸಿಕ್ಕಿದೆ.
ಸಿನಿಮಾ ಅಭಿಮಾನಿಯ ವಾದವನ್ನು ಪುರಸ್ಕರಿಸಿದ ಗ್ರಾಹಕ ನ್ಯಾಯಾಲಯ (Consumer Court) ಸಮಯವನ್ನು ಹಣವೆಂದು ಪರಿಗಣಿಸಿ ದೂರುದಾರರಿಂದ ಉಂಟಾದ ನಷ್ಟವನ್ನು ಸರಿದೂಗಿಸಲು PVR ಸಿನಿಮಾಸ್ ಮತ್ತು INOXಗೆ 1.20 ಲಕ್ಷ ರೂ. ದಂಡವನ್ನು ವಿಧಿಸಿ ಆದೇಶ ಪ್ರಕಟಿಸಿದೆ.
Advertisement
ಏನಿದು ಪ್ರಕರಣ?
ಬೆಂಗಳೂರಿನ ಅಭಿಷೇಕ್ 2023 ರಲ್ಲಿ ಶ್ಯಾಮ್ ಬಹದ್ದೂರ್ ಸಿನಿಮಾ ವೀಕ್ಷಿಸಲು ಬುಕ್‌ಮೈಶೋ (BookmyShow) ಮೂಲಕ 3 ಟಿಕೆಟ್ ಖರೀದಿಸಿದ್ದರು. ಸಂಜೆ 4:05ಕ್ಕೆ ನಿಗದಿಯಾಗಿದ್ದ ಸಿನಿಮಾ ಸಂಜೆ 6:30ಕ್ಕೆ ಮುಗಿಯಬೇಕಿತ್ತು. ಆದರೆ ಸಿನಿಮಾ ಪ್ರದರ್ಶನ 4:05ಕ್ಕೆ ಆರಂಭವಾಗುವ ಬದಲು ಸಂಜೆ 4:30ಕ್ಕೆ ಆರಂಭವಾಗಿದೆ.
Advertisement
Advertisement
Advertisement
ಸುಮಾರು 30 ನಿಮಿಷಗಳ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದರಿಂದ ನಾನು ನಿಗದಿ ಪಡಿಸಿದ ಕೆಲಸಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಇದರಿಂದ ನನಗೆ ನಷ್ಟವಾಗಿದೆ ಎಂದು ಕೋರಿ ಅಭಿಷೇಕ್ ದೂರು ನೀಡಿದ್ದರು. ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಅನಗತ್ಯ ಲಾಭ ಪಡೆಯಲು ಪ್ರದರ್ಶನದ ಸಮಯವನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ಕೋರ್ಟ್‌ನಲ್ಲಿ ವಾದಿಸಿದ್ದರು.
ಇಂದಿನ ಕಾಲದಲ್ಲಿ ಸಮಯವನ್ನು ಹಣವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರ ಸಮಯವು ಬಹಳ ಅಮೂಲ್ಯವಾಗಿದೆ. ಇತರರ ಸಮಯ ಮತ್ತು ಹಣದಿಂದ ಲಾಭ ಪಡೆಯುವ ಹಕ್ಕು ಯಾರಿಗೂ ಇಲ್ಲ. ಸುಮ್ಮನೆ ಕುಳಿತು ಥಿಯೇಟರ್‌ನಲ್ಲಿ ಪ್ರಸಾರವಾಗುವ ಎಲ್ಲವನ್ನೂ 25-30 ನಿಮಿಷಗ ವೀಕ್ಷಿಸುವುದು ಕಡಿಮೆಯಲ್ಲ. ಬಿಗಿಯಾದ ವೇಳಾಪಟ್ಟಿಯೊಂದಿಗೆ ಕಾರ್ಯನಿರತ ಜನರಿಗೆ ಅನಗತ್ಯ ಜಾಹೀರಾತುಗಳನ್ನು ನೋಡುವುದು ಕಷ್ಟ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಅಂತಿಮವಾಗಿ ಅನ್ಯಾಯದ ವ್ಯಾಪಾರ ಪದ್ಧತಿ ಮತ್ತು ದೂರುದಾರರ ಸಮಯ ವ್ಯರ್ಥ ಮಾಡಿದ್ದಕ್ಕಾಗಿ 20,000 ರೂ., ಮಾನಸಿಕ ಯಾತನೆಗಾಗಿ 8,000 ರೂ. ದಂಡ ಮತ್ತು ಗ್ರಾಹಕ ಕಲ್ಯಾಣ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ಠೇವಣಿ ಇಡುವಂತೆ ನಿರ್ದೇಶಿಸಿದೆ. ಆದೇಶದ ದಿನಾಂಕದಿಂದ 30 ದಿನಗಳಲ್ಲಿ ಮೊತ್ತವನ್ನು ಪಾವತಿಸುವಂತೆ ಗಡುವು ನೀಡಿದೆ.
ಬುಕ್‌ಮೈಶೋ ಟಿಕೆಟ್ ಬುಕ್ಕಿಂಗ್ ವೇದಿಕೆಯಾಗಿರುವುದರಿಂದ ಮತ್ತು ಜಾಹೀರಾತುಗಳ ಸ್ಟ್ರೀಮಿಂಗ್ ಸಮಯದ ಮೇಲೆ ಯಾವುದೇ ನಿಯಂತ್ರಣವನ್ನು ಹೊಂದಿರದ ಕಾರಣ ಈ ಪ್ರಕರಣದಲ್ಲಿ ಬಾಧ್ಯಸ್ಥವಾಗುವುದಿಲ್ಲ ಎಂದು ಹೇಳಿತು.
ತಮ್ಮ ಪ್ರತಿವಾದದಲ್ಲಿ PVR ಸಿನಿಮಾಸ್ ಮತ್ತು INOX, ಕಾನೂನಿನ ಅಡಿಯಲ್ಲಿ ಜಾಗೃತಿ ಮೂಡಿಸಲು ಕೆಲವು ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು (PSA) ಪ್ರದರ್ಶಿಸಿದ್ದೇವೆ ಎಂದ ಹೇಳಿತ್ತು.
ಈ ವೇಳೆ ಕೋರ್ಟ್ ಸಿನಿಮಾ ಪ್ರಾರಂಭವಾಗುವ 10 ನಿಮಿಷಗಳ ಮೊದಲು ಮತ್ತು ಚಲನಚಿತ್ರ ಪ್ಯಾಕೇಜ್‌ನ ದ್ವಿತೀಯಾರ್ಧದ ಪ್ರಾರಂಭದ ಮೊದಲು ಮಧ್ಯಂತರ ಅವಧಿಯಲ್ಲಿ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಪ್ರದರ್ಶಿಸಬೇಕು ಎಂದು ಸೂಚಿಸಿದೆ.