ರಶ್ಮಿಕಾ ಮಂದಣ್ಣ ಕೈಬಿಟ್ಟ ಸಿನಿಮಾಗೆ ಶ್ರೀಲೀಲಾ ಎಂಟ್ರಿ

Public TV
2 Min Read
sreeleela 1 2

ಟಾಲಿವುಡ್‌ನಲ್ಲಿ ಕನ್ನಡದ ನಟಿಮಣಿಯರಿಗೆ ಜಟಾಪಟಿ ಶುರುವಾಗಿದೆ. ಕೊಡಗಿನ ಕುವರಿ ರಶ್ಮಿಕಾ- ಶ್ರೀಲೀಲಾ (Sreeleela) ನಡುವೆ ಸಿನಿಮಾಗಾಗಿ ಪೈಪೋಟಿ ಶುರುವಾಗಿದೆ. ತೆಲುಗಿನ ಸ್ಟಾರ್ ನಟನ ಸಿನಿಮಾದಿಂದ ರಶ್ಮಿಕಾ ಮಂದಣ್ಣ (Rashmika Mandann) ಹೊರನಡೆದಿದ್ದಾರೆ. ರಶ್ಮಿಕಾ ಜಾಗಕ್ಕೆ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ.

rashmika mandanna 6

‘ಪುಷ್ಪ’ ಸಿನಿಮಾದ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ರಶ್ಮಿಕಾ ಮಂದಣ್ಣ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಶ್ರೀವಲ್ಲಿ ಕೈಯಲ್ಲಿ ಐದು ಬಿಗ್ ಬಜೆಟ್ ಚಿತ್ರಗಳಿವೆ. ಇನ್ನೂ ‘ಧಮಾಕಾ’ (Dhamaka) ಬ್ಯೂಟಿ ಶ್ರೀಲೀಲಾ ಅವರು 8ಕ್ಕೂ ಹೆಚ್ಚು ಚಿತ್ರಗಳಿಗೆ ಬುಕ್ ಆಗಿದ್ದಾರೆ. ಸ್ಟಾರ್ ನಟರಿಗೆ ಕಿಸ್ ನಟಿಗೆ ಬೇಕು ಅನ್ನೋವಷ್ಟರ ಮಟ್ಟಿಗೆ ಬ್ಯುಸಿಯಾಗಿದ್ದಾರೆ.

rashmika mandanna

‘ಭೀಷ್ಮ’ (Bheeshma) ಚಿತ್ರದ ಸಕ್ಸಸ್ ನಂತರ ರಶ್ಮಿಕಾ ಮತ್ತೆ ನಿತಿನ್ (Nithin) ಜೊತೆ ಸಿನಿಮಾ ಮಾಡಲು ಕೈಜೋಡಿಸಿದ್ದರು. ಅದ್ದೂರಿಯಾಗಿ ಮುಹೂರ್ತ ಕೂಡ ನೆರವೇರಿತ್ತು. ಈಗ ಶೂಟಿಂಗ್ ಶುರುವಾಗುವ ಸಂದರ್ಭದಲ್ಲಿ ರಶ್ಮಿಕಾ ಈ ಚಿತ್ರವನ್ನು ಕೈಬಿಟ್ಟಿದ್ದಾರೆ. ವಿಧಿಯಿಲ್ಲದೇ ಬೇರೇ ನಟಿಯನ್ನ ಸಿನಿಮಾತಂಡ ಆಯ್ಕೆ ಮಾಡಿಕೊಂಡಿದೆ. ರಶ್ಮಿಕಾ ಕೈಯಲ್ಲಿ ದೊಡ್ಡ ನಿರ್ಮಾಣ ಸಂಸ್ಥೆಗಳ ಸಿನಿಮಾಗಳಿವೆ ಈ ಚಿತ್ರಕ್ಕೆ ಡೇಟ್ ಹೊಂದಾಣಿಕೆ ಆಗದ ಕಾರಣ, ನಿತಿನ್ ನಟನೆಯ ಪ್ರಾಜೆಕ್ಟ್‌ನಿಂದ ನಟಿ ಹೊರಬಂದಿದ್ದಾರೆ.

sreeleela

ಹಾಗಾಗಿ ರಶ್ಮಿಕಾ ಮಂದಣ್ಣ ಕೈಯಲ್ಲಿದ್ದ ಅದೃಷ್ಟ ಈಗ ಶ್ರೀಲೀಲಾ ಕೈ ಸೇರಿದೆ. ನಿತಿನ್ ಜೊತೆ ರೊಮ್ಯಾನ್ಸ್ ಮಾಡಲು ಭರಾಟೆ ನಟಿ ಕೂಡ ಓಕೆ ಎಂದಿದ್ದಾರೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಭಾಗಿಯಾಗುತ್ತಿದ್ದಾರೆ.

sreeleela

ರಣ್‌ಬೀರ್ ಜೊತೆ ಅನಿಮಲ್ (Animal) ಚಿತ್ರ ತೆರೆಗೆ ಬರೋದ್ದಕ್ಕೆ ರೆಡಿಯಾಗಿದೆ. ಪುಷ್ಪ 2, ರೈನ್‌ಬೋ, ಟೈಗರ್ ಶ್ರಾಫ್ ಜೊತೆಗಿನ ಹೊಸ ಸಿನಿಮಾ, ಬಾಲಿವುಡ್ ಮತ್ತೊಂದು ಹೊಸ ಪ್ರಾಜೆಕ್ಟ್‌ಗೆ ರಶ್ಮಿಕಾ ಆಯ್ಕೆಯಾಗಿದ್ದಾರೆ. ಹಾಗಾಗಿ ಕೈತುಂಬಾ ಸಿನಿಮಾಗಳು, ಡೇಟ್ ಹೊಂದಾಣಿಕೆ ಆಗದೇ ಇರುವ ಕಾರಣ ನಟಿ ಚಿತ್ರವನ್ನ ಕೈಚೆಲ್ಲಿದ್ದಾರೆ. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸಿಕ್ರೇಟ್ ಬಿಟ್ಟುಕೊಟ್ಟ ವಿಜಯ್ ದೇವರಕೊಂಡ

ಶ್ರೀಲೀಲಾ ಕೂಡ ಪೂಜಾ ಹೆಗ್ಡೆ (Pooja Hegde), ಕೃತಿ ಶೆಟ್ಟಿ(Krithi Shetty), ರಶ್ಮಿಕಾ ಮಂದಣ್ಣಗೆ ಟಕ್ಕರ್ ಕೊಡುವ ಹಾಗೇ ಅವಕಾಶಗಳನ್ನ ಬಾಚಿಕೊಳ್ತಿದ್ದಾರೆ. ತೆಲುಗಿನಲ್ಲೇ ಶ್ರೀಲೀಲಾ ನೆಲೆ ನಿಲ್ಲುವ ಲಕ್ಷಣವಿದೆ.

Share This Article