ನನ್ನ ಲೈಫ್‌ನಲ್ಲಿ ವಿಜಯ್ ಎಲ್ಲರಿಗಿಂತ ಹೆಚ್ಚಾಗಿ ಬೆಂಬಲಿಸಿದ್ದಾರೆ- ರಶ್ಮಿಕಾ

Public TV
1 Min Read
rashmika mandanna 1 2

ಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarakonda) ಜೋಡಿ ತೆರೆಯ ಮೇಲೆ ಮ್ಯಾಜಿಕ್ ಮಾಡ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ರೀಲ್ ಜೋಡಿ ರಿಯಲ್ ಲೈಫ್‌ನಲ್ಲೂ ಒಂದಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಇದರ ನಡುವೆ ವಿಜಯ್ ದೇವರಕೊಂಡ ತಮ್ಮ ಬದುಕಿನಲ್ಲಿ, ಸ್ಪೆಷಲ್ ವ್ಯಕ್ತಿ ಎಂದು ರಶ್ಮಿಕಾ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ‘ವಿಜು’ (Viju) ಎಂದು ಪ್ರೀತಿಯಿಂದ ಕರೆದಿದ್ದಾರೆ.

Rashmika Mandanna 1

ನಾನು ಮತ್ತು ವಿಜು ಒಂದು ರೀತಿಯಲ್ಲಿ ಒಟ್ಟಿಗೆ ಬೆಳೆದವರು. ಈಗ ನಾನು ಮಾಡುತ್ತಿರುವ ಎಲ್ಲದರಲ್ಲೂ ಅವರ ಕೊಡುಗೆ ಇದೆ. ಎಲ್ಲ ಕೆಲಸದಲ್ಲೂ ನಾನು ಅವರ ಸಲಹೆ ಪಡೆಯುತ್ತೇನೆ. ಅವರ ಅಭಿಪ್ರಾಯ ನನಗೆ ಬೇಕು. ಎಲ್ಲದಕ್ಕೂ ಹೌದು ಎನ್ನುವ ವ್ಯಕ್ತಿ ಅವರಲ್ಲ. ಯಾವುದೇ ವಿಚಾರ ಆಗಿರಲಿ ನನಗೆ ಹೀಗೆ ಅನಿಸುತ್ತಿದೆ ಅಂತ ಅವರು ತಮ್ಮ ಅಭಿಪ್ರಾಯ ನೇರವಾಗಿ ತಿಳಿಸುತ್ತಾರೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.ಇದನ್ನೂ ಓದಿ:ಐಷಾರಾಮಿ ಮನೆಯಲ್ಲಿ ಸಮಸ್ಯೆ, ಕೋರ್ಟ್ ಮೆಟ್ಟಿಲು ಏರಿದ ಪ್ರಿಯಾಂಕಾ

rashmika mandanna 9

ನನ್ನ ಬದುಕಿನಲ್ಲಿ ವಿಜಯ್ ದೇವರಕೊಂಡ ಅವರು ಎಲ್ಲರಿಗಿಂತ ಹೆಚ್ಚಾಗಿ ಬೆಂಬಲ ನೀಡಿದ್ದಾರೆ. ಹಾಗಾಗಿ ನಾನು ಅವರನ್ನು ನಿಜವಾಗಿಯೂ ಗೌರವಿಸುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಜೊತೆಯಾಗಿ ನಟಿಸಿದರು. ಅಲ್ಲಿಂದ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು. ಅದಷ್ಟೇ ಅಲ್ಲ, ಕುಟುಂಬದ ಜೊತೆ ಕೂಡ ಉತ್ತಮ ಒಡನಾಟವಿದೆ. ಇಬ್ಬರೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಳ್ತಿದ್ದಾರೆ.

ಇಬ್ಬರ ಕೆಮಿಸ್ಟ್ರಿ ಸಿನಿಮಾದಲ್ಲಿ ಚೆನ್ನಾಗಿರುವ ಕಾರಣ ನಿಜ ಜೀವನದಲ್ಲೂ ಮದುವೆಯಾಗಿ ಜೊತೆಯಾಗಿ ಜೀವನ ಮಾಡಿದ್ರೆ ಚೆನ್ನಾಗಿರುತ್ತೆ ಎಂಬುದು ಅಭಿಮಾನಿಗಳ ಆಶಯ.

Share This Article