‘ಕಿರಿಕ್ ಪಾರ್ಟಿ’ (Kirik Party) ಚೆಲುವೆ ರಶ್ಮಿಕಾ ಮಂದಣ್ಣ (Rashmika Mandanna) ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿದ್ದಾರೆ. ಸಿನಿಮಾಗಷ್ಟೇ ಡಿಮ್ಯಾಂಡ್ ಅಲ್ಲ, ಪ್ರತಿಷ್ಠಿತ ಜಾಹೀರಾತುಗಳಿಗೂ ರಾಯಭಾರಿಯಾಗಿ ರಶ್ಮಿಕಾ ಕಾಣಿಸಿಕೊಳ್ತಿದ್ದಾರೆ. ಇತ್ತೀಚಿನ ಚಿಕನ್ ಬರ್ಗರ್ ಜಾಹೀರಾತಿನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ನಾನ್ ವೆಜ್ (Non Veg) ತಿನ್ನಲ್ಲ ಎಂದು ಜಾಹೀರಾತಿಗಾಗಿ ಮಾಂಸಹಾರವನ್ನ ನಟಿ ಸೇವಿಸಿರುವುದು ಟ್ರೋಲಿಗರ ಬಾಯಿಗೆ ಆಹಾರವಾಗಿದೆ.
‘ಪುಷ್ಪ’ (Pushpa) ಸಿನಿಮಾದ ಸಕ್ಸಸ್ ನಂತರ ಬಾಲಿವುಡ್- ಸೌತ್ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಬ್ಯುಸಿಯಾಗಿದ್ದಾರೆ. ಇದರ ಜೊತೆ ನಾನ್ ವೆಜ್ ತಿಂದಿರುವ ವಿಷ್ಯವಾಗಿ ಸಖತ್ ಟ್ರೋಲ್ ಆಗ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಹೊಸ ಜಾಹೀರಾತಿನಲ್ಲಿ ನಾನ್ ವೆಜ್ ತಿಂದಿದ್ದಾರೆ. ಆದರೆ ತಮ್ಮನ್ನು ತಾವು ಸಸ್ಯಾಹಾರಿ ಎಂದು ಹೇಳಿಕೊಂಡಿದ್ದರು. ಜನರಿಗೆ ಇದು ಇಷ್ಟ ಆಗಿಲ್ಲ. ನಮ್ಮನ್ನು ಮೂರ್ಖರನ್ನಾಗಿಸೋದು ನಿಲ್ಲಿಸಿ ಅಂತ ಜನರು ಕಾಮೆಂಟ್ ಮಾಡಿದ್ದಾರೆ. ಜನರ ಪ್ರತಿಕ್ರಿಯೆ ನೋಡಿದ ಜಾಹೀರಾತಿನ ಕಾಮೆಂಟ್ ಆಯ್ಕೆಯನ್ನೇ ನಿಷ್ಕ್ರಿಯಗೊಳಿಸಲಾಗಿದೆ.
ಈ ವಿಚಾರದಲ್ಲಿ ನೆಟ್ಟಿಗರು ಪರ-ವಿರೋಧ ಚರ್ಚೆ ಮಾಡಿದ್ದಾರೆ. ಕೆಲವರು ರಶ್ಮಿಕಾಗೆ ಚಾಟಿ ಬೀಸಿದ್ದರೆ, ಇನ್ನೂ ಕೆಲವರು ನಟಿಯ ಪರವಾಗಿ ವಾದ ಮಾಡಿದ್ದಾರೆ. ಸಿನಿಮಾ ತಾರೆಯರು ತಾವು ಪ್ರಚಾರ ಮಾಡುವ ವಸ್ತುಗಳನ್ನು ಬಳಸುವುದಿಲ್ಲ. ಅವರು ಕೇವಲ ಪ್ರಚಾರ ರಾಯಭಾರಿ ಮಾತ್ರ ಎಂದು ಕೆಲವರು ಬೆಂಬಲ ಸೂಚಿಸಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಅವರು ನಟ ವಿಕ್ಕಿ ಕೌಶಲ್ (Vicky Kaushal) ಜೊತೆ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ನಟಿಸಿದ್ದಾಗಲೂ ವಿವಾದ ಸೃಷ್ಟಿ ಆಗಿತ್ತು. ಇದೀಗ ನಾನ್ ವೆಜ್ ಸಖತ್ ಸದ್ದು ಮಾಡ್ತಿದೆ. ಇಷ್ಟೆಲ್ಲಾ ಚರ್ಚೆ ಆಗ್ತಿದ್ದರು ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ:ಮಗು ಬಡಿದ ಪ್ರಕರಣ : ಪತಿಯ ವಿರುದ್ಧ ದೂರು ನೀಡಿದ ಕಿರುತೆರೆ ನಟಿ
View this post on Instagram
ರಶ್ಮಿಕಾ ಅವರು ಪುಷ್ಪ 2, ಅನಿಮಲ್, ರೈನ್‌ಬೋ, ವಿಕ್ಕಿ ಕೌಶಲ್ ಜೊತೆ ಹೊಸ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಬಗೆಯ ಪಾತ್ರಗಳ ಮೂಲಕ ನಟಿ ಸೌಂಡ್ ಮಾಡ್ತಿದ್ದಾರೆ.