ಚಂಡೀಗಢ: ಭಾರತ ಮತ್ತು ಪಾಕಿಸ್ತಾನ ಜನರು ನಡುವೆ ಸದ್ಯಕ್ಕೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ಪಾಕಿಸ್ತಾನದ ಅಧಿಕಾರಿಗಳು ಸಂಜೋತಾ ಎಕ್ಸ್ ಪ್ರೆಸ್ ರೈಲನ್ನು ಸ್ಥಗಿತಗೊಳಿಸಿದ್ದರು. ಇದರಿಂದ ಪಾಕಿಸ್ತಾನಿಯರು ಭಾರತದ ಪಂಜಾಬ್ ನಲ್ಲಿ ಸಿಲುಕಿಕೊಂಡಿದ್ದರು. ಅವರಿಗೆ ಪಂಜಾಬ್ ಪೊಲೀಸರು ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶಾಂತಿ ಸಂಕೇತವಾಗಿ ಎರಡು ರಾಷ್ಟ್ರಗಳ ನಡುವೆ ಸಂಜೋತಾ ಎಕ್ಸ್ ಪ್ರೆಸ್ ಸಂಚರಿಸುತ್ತದೆ. ಆದರೆ ಪಾಕಿಸ್ತಾನ ಅಧಿಕಾರಿಗಳು ಏಕಾಏಕಿ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದ ಬೇರೆ ದಾರಿ ಇಲ್ಲದೆ ರೈಲಿನಲ್ಲಿದ್ದ ಸುಮಾರು 40-50 ಪಾಕಿಸ್ತಾನಿ ಪ್ರಯಾಣಿಕರು ಪಂಜಾಬ್‍ನ ಅಮೃತ್‍ಸರದ ಅತಾರಿ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
Advertisement
Advertisement
ಪಾಕಿಸ್ತಾನಿಯರು ತುಂಬಾ ಸಮಯದವರೆಗೂ ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ಇದನ್ನು ನೋಡಿದ ಪಂಜಾಬ್ ಪೊಲೀಸರು ಅವರಿಗೆ ತಿನ್ನಲು ಆಹಾರ ಮತ್ತು ಕುಡಿಯಲು ನೀರು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ತವರಿಗೆ ಮರಳಲು ಕಾಯುತ್ತಿದ್ದ ಪಾಕಿಸ್ತಾನಿ ಪ್ರಯಾಣಿಕರನ್ನು ಪಂಜಾಬ್ ಪೊಲೀಸರು ಅತಾರಿ-ವಾಘಾ ಚೆಕ್ ಪೋಸ್ಟ್ ಮೂಲಕ ಅಂತರಾಷ್ಟ್ರೀಯ ಗಡಿಯನ್ನು ದಾಟಿಸಿ ಸಹಾಯ ಮಾಡಿದ್ದಾರೆ.
Advertisement
ಪಾಕಿಸ್ತಾನ ಸರ್ಕಾರ ಗುರುವಾರ ಎರಡು ರಾಷ್ಟ್ರಗಳ ನಡುವಣ ಶಾಂತಿ ಸಂಕೇತದ ರೈಲನ್ನು ಲಾಹೋರ್ ರೈಲು ನಿಲ್ದಾಣದಿಂದ ಹೊರಡಲು ಅವಕಾಶ ಮಾಡಿಕೊಡಲಿಲ್ಲ. ಈ ರೈಲು ಭಾರತ ಮತ್ತು ಪಾಕಿಸ್ತಾನದ ನಡುವೆ ಸೋಮವಾರ ಮತ್ತು ಗುರುವಾರ ಸಂಚರಿಸುತ್ತದೆ. ಇದು ಲಾಹೋರ್ ಮತ್ತು ಅತಾರಿ ಮಧ್ಯೆ ಪಂಜಾಬ್ ಗೆ ಸಂಚರಿಸುತ್ತದೆ. ಭಾರತದ ಇನ್ನೊಂದು ರೈಲು ಅತಾರಿಯಿಂದ ದೆಹಲಿಗೆ ಸಂಪರ್ಕ ಕಲ್ಪಿಸುತ್ತದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv