ಚಂಡೀಗಢ: ಪಂಜಾಬ್ (Panjab) ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು ತಮ್ಮ ಬೆಂಗಾವಲಿಗಾಗಿ 42 ಕಾರುಗಳನ್ನು (Car) ಹೊಂದಿರುವ ಮಾಹಿತಿ ಬಹಿರಂಗವಾಗಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಮ್ಮ ಬೆಂಗಾವಲಿಗಾಗಿ 42 ಕಾರುಗಳನ್ನ ಹೊಂದಿರುವ ಮಾಹಿತಿ ಆರ್‌ಟಿಐನಿಂದ (RTI) ಬಹಿರಂಗವಾಗಿದ್ದು, ಇದು ವಿಐಪಿ ಸಂಸ್ಕೃತಿಯನ್ನು ಸೂಚಿಸುತ್ತದೆ ಎಂದು ಕಾಂಗ್ರೆಸ್ (Congress) ಕಿಡಿಕಾರಿದೆ. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆಗೆ ರಾಜ್ಯಪಾಲರಿಂದ ಅಂಕಿತ
Advertisement
Shocking revelation-
CM Badal had 33 vehicles when he was CM from 2007-17 in his cavalcade & there was no change in number of vehicles when Captain Amarinder S became the CM but it has been revealed through RTI that CM Mann “The so called Aam Aadmi” has 42 cars in his cavalcade. pic.twitter.com/lEFt6Ve3xm
— Partap Singh Bajwa (@Partap_Sbajwa) September 28, 2022
Advertisement
ಈ ಕುರಿತು ಆರ್‌ಟಿಐನಿಂದ ಪಡೆದ ಮಾಹಿತಿಯನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಪ್ರತಾಪ್‌ಸಿಂಗ್ ಬಾಜ್ವಾ (Pratap Singh Bajwa), ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ತಮ್ಮ ಬೆಂಗಾವಲು ಪಡೆಯಲ್ಲಿ 42 ಕಾರುಗಳನ್ನು ಹೊಂದಿದ್ದಾರೆ. ಇದು ಹಿಂದಿನ ಮುಖ್ಯಮಂತ್ರಿಗಳಾದ ಪ್ರಕಾಶ್ ಸಿಂಗ್ ಬಾದಲ್, ಅಮರೀಂದರ್ ಸಿಂಗ್ (Amarinder Singh) ಮತ್ತು ಚರಣ್‌ಜಿತ್ ಸಿಂಗ್ ಚನ್ನಿ (Charanjit Singh Channi) ಅವರ ಬೆಂಗಾವಲು ಪಡೆಗಿಂತಲೂ ಹೆಚ್ಚಿನದ್ದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: T20ಯಲ್ಲಿ 11 ದೇಶಗಳ ವಿರುದ್ಧ ಅರ್ಧಶತಕದಾಟ – ವಿಶೇಷ ದಾಖಲೆ ಬರೆದ ಕನ್ನಡಿಗ
Advertisement
Advertisement
2007ರಿಂದ 2017ರ ವರೆಗೆ ಸಿಎಂ ಆಗಿದ್ದ ಪ್ರಕಾಶ್ ಸಿಂಗ್ ಬಾದಲ್ ಬೆಂಗಾವಲು ಪಡೆಗೆ 33 ವಾಹನ, ಅಮರೀಂದರ್ ಸಿಂಗ್ ಸಹ 33 ವಾಹನ ಹೊಂದಿದ್ದರು. 2021ರ ಸೆ. 20ರಿಂದ 2022ರ ಮಾರ್ಚ್ 16ರವರೆಗೆ ಸಿಎಂ ಆಗಿದ್ದ ಚರಣ್‌ಜಿತ್ ಸಿಂಗ್ ಚನ್ನಿ 39 ವಾಹನಗಳನ್ನು ಹೊಂದಿದ್ದರು. ಆದರೆ ಭಗವಂತ್ ಮಾನ್ ಅವರು, ತಮ್ಮ ಬೆಂಗಾವಲು ಪಡೆಯಲ್ಲಿ 42 ಕಾರುಗಳನ್ನು ಹೊಂದಿದ್ದಾರೆ ಎಂಬುದನ್ನು ಆರ್‌ಟಿಐ ಬಹಿರಂಗಪಡಿಸಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
My letter to Honourable Speaker @Sandhwan ji regarding substantive motion under rule 71 censuring the conduct of Punjab CM Bhagwant Mann. pic.twitter.com/d1mjvewcho
— Partap Singh Bajwa (@Partap_Sbajwa) September 28, 2022
ಭಗವಂತ್ ಮಾನ್ ಅವರು ಸಿಎಂ ಆಗುವ ಮುನ್ನ ಉಪದೇಶ ಮಾಡುತ್ತಿದ್ದಕ್ಕೂ, ಈಗ ನಡೆದುಕೊಳ್ಳುತ್ತಿರುವುದಕ್ಕೂ ವ್ಯತ್ಯಾಸವಿದೆ. ಇಷ್ಟು ದೊಡ್ಡ ವಾಹನಗಳ ಬೆಂಗಾವಲಿನಿಂದ ಏನನ್ನು ಪಂಜಾಬ್ ಜನತೆಗೆ ಕೊಡುತ್ತೇನೆ ಎಂದು ಅವರು ಹೇಳುತ್ತಾರೆಯೇ? ಅಷ್ಟು ಬೆಂಗಾವಲು ಹೊಂದಲು ಹೇಗೆ ಸಾಧ್ಯ? ತೆರಿಗೆದಾರರ ಹಣವನ್ನೇಕೆ ಮನಬಂದಂತೆ ವ್ಯಯಿಸುತ್ತಿದ್ದಾರೆ? ಇದು ವಿಐಪಿ ಸಂಸ್ಕೃತಿ ಸೂಚಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.