Bengaluru CityDistrictsKarnatakaLatestLeading NewsMain Post

ಮತಾಂತರ ನಿಷೇಧ ಮಸೂದೆಗೆ ರಾಜ್ಯಪಾಲರಿಂದ ಅಂಕಿತ

ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ (Prohibition of Conversion Act) ಅನುಷ್ಠಾನಗೊಳಿಸಲು, ಮತಾಂತರ ನಿಷೇಧ ಮಸೂದೆಗೆ ರಾಜ್ಯಪಾಲರು ಇಂದು ಅಂಕಿತ ಹಾಕಿದ್ದಾರೆ.

ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ ವಿಧೇಯಕಕ್ಕೆ ಇಂದು ರಾಜ್ಯಪಾಲರಾದ ಥಾವರ್ ಚಂದ್‌ಗೆಹ್ಲೋಟ್ (Thawar Chand Gehlot) ಅಂಕಿತ ಹಾಕಿದ್ದಾರೆ. ಈ ಮೂಲಕ ಬಲವಂತದ ಮತಾಂತರ ನಿಷೇಧಕ್ಕೆ ಇಂದಿನಿಂದ ಕಾಯಿದೆ ರೂಪ ನೀಡಲಾಗಿದೆ. ಇದನ್ನೂ ಓದಿ: ವಿರೋಧದ ಮಧ್ಯೆ ಮತಾಂತರ ನಿಷೇಧ ಮಸೂದೆ ಅಂಗೀಕಾರ

ಧಾರ್ಮಿಕ ಸ್ವಾತಂತ್ರ‍್ಯ ಹಕ್ಕಿನ ರಕ್ಷಣೆಗಾಗಿ, ತಪ್ಪು ನಿರೂಪಣೆ, ಬಲವಂತ ಹಾಗೂ ಇತರ ಯಾವುದೇ ವಂಚನೆ ವಿಧಾನಗಳ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನು ಬಾಹಿರವಾಗಿ ಮತಾಂತರ ಮಾಡುವುದನ್ನು ತಡೆಯಲು ಈ ನಿಯಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿಧೇಯಕದಲ್ಲಿ ಹೇಳಲಾಗಿದೆ. ಇದನ್ನೂ ಓದಿ: ವಿಧಾನ ಪರಿಷತ್‍ನಲ್ಲಿಂದು ಮತಾಂತರ ನಿಷೇಧ ವಿಧೇಯಕ ಮಂಡನೆ

ಕರ್ನಾಟಕ ಧಾರ್ಮಿಕ ಸ್ವಾತಂತ್ರ‍್ಯ ಹಕ್ಕು ಸಂರಕ್ಷಣಾ ವಿಧೇಯಕ 2022ನ್ನು ಈಚೆಗಷ್ಟೇ ವಿಧಾನ ಪರಿಷತ್ತಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಂಡಿಸಿದ್ದರು. ವಿಪಕ್ಷಗಳ ತೀವ್ರ ವಿರೋಧದ ಮಧ್ಯೆ ವಿಧಾನ ಪರಿಷತ್ತಿನಲ್ಲಿ ಮತಾಂತರ ನಿಷೇಧ ಮಸೂದೆ ಧ್ವನಿಮತದ ಮೂಲಕ ಅಂಗೀಕಾರಗೊಂಡಿತ್ತು. ಈ ಬಿಲ್ ಪಾಸ್ ಆಗುವ ಹಂತದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರು ಸಭಾತ್ಯಾಗ ಮಾಡಿದ್ದರು.

Live Tv

Leave a Reply

Your email address will not be published. Required fields are marked *

Back to top button