ಪರೀಕ್ಷೆ ಶುಲ್ಕ ಪಾವತಿಸದ್ದಕ್ಕೆ ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷೆ!

Public TV
1 Min Read
karwar school

ಕಾರವಾರ: ಪೋಷಕರು ಶಾಲೆಯ ಡೊನೇಷನ್ ಶುಲ್ಕ (Examination Fees) ಪಾವತಿಸದ್ದಕ್ಕೆ ವಿದ್ಯಾರ್ಥಿಗಳಿಗೆ (Students) ಪರೀಕ್ಷೆ ಬರೆಯಲು ನಿರಾಕರಿಸಿ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯ ಬಳಿ ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷೆ ನೀಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ (Karwar) ನಗರದ ಸರ್ಕಾರಿ ಅನುದಾನಿತ ಸೈಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ನಡೆದಿದೆ.

ಕ್ರಿಶ್ಚಿನ ಜೋಸೆಫ್ ಮಕ್ಕಳಿಗೆ ಪರೀಕ್ಷೆ ನಿರಾಕರಿಸಿದ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದು ಫಾರ್ಮೆಟಿವ್ ಅಸೈನ್ಮೆಂಟ್ ಎಂಬ ಪರೀಕ್ಷೆ ಬರೆಯಲು 6, 7 ಮತ್ತು 8ನೇ ತರಗತಿಯ ಶುಲ್ಕ ಪಾವತಿಸದ ಮಕ್ಕಳಿಗೆ ನಿರಾಕರಣೆ ಮಾಡಿ ಶಿಕ್ಷೆ (Punishment) ನೀಡಲಾಗಿದೆ. ಇದನ್ನೂ ಓದಿ: ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದ ಬಳ್ಳಾರಿ ಐಸಿಸ್‌ ಟೀಂ – ದಾಳಿಯಲ್ಲಿ ಏನು ಸಿಕ್ಕಿದೆ?

ಪ್ರತಿ ಮಕ್ಕಳಿಗೆ ವರ್ಷಕ್ಕೆ 20 ಸಾವಿರ ಡೊನೇಷನ್ ಅನ್ನು ಶಾಲಾ ಆಡಳಿತ ಮಂಡಳಿಯು ಪೋಷಕರಿಂದ ಸಂಗ್ರಹಿಸುತ್ತದೆ. ಹಲವು ಜನ ಕಂತಿನ ಮೂಲಕ ನೀಡುವುದರಿಂದ ಕೆಲವು ಪೋಷಕರು ಸಂಪೂರ್ಣ ಹಣ ತುಂಬಿರಲಿಲ್ಲ. ಈ ಹಿನ್ನೆಲೆಯಲ್ಲಿ 6, 7, 8ನೇ ತರಗತಿಯ ಶುಲ್ಕ ಭರಿಸದ ಮಕ್ಕಳಿಗೆ ಪರೀಕ್ಷೆ ನಿರಾಕರಣೆ ಮಾಡಿ ದೌರ್ಜನ್ಯ ಎಸಗಲಾಗಿದೆ. ಇದನ್ನೂ ಓದಿ: ಮಾರತಹಳ್ಳಿ, ಮಲ್ಲೇಶ್ವರಂನಲ್ಲಿ ಅಗ್ನಿ ದುರಂತ – ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿ

Share This Article