-ಹಣ, ಗೆಲುವು ಮುಖ್ಯವಲ್ಲ, ಅಪ್ಪು ಹೆಸರಿನ ಕಪ್‍ಗಾಗಿ ಕಾದಾಟ
ಚಿಕ್ಕಮಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೆಸರಿನ ರಾಜ್ಯದ ಮೊದಲ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆಯುತ್ತಿದೆ.
Advertisement
ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿ ಯುವಕರು ಈ ಪಂದ್ಯಾವಳಿಯನ್ನು ನಡೆಸುತ್ತಿದ್ದಾರೆ. ಡಿಸೆಂಬರ್ 3 ರಿಂದ ನಡೆಯುತ್ತಿರುವ ಈ ಕ್ರಿಕೆಟ್ ಟೂರ್ನಮೆಂಟ್ ಮೂರು ದಿನಗಳ ಕಾಲ ನಡೆಯಲಿದೆ. ತರೀಕೆರೆ ಪಟ್ಟಣದ ಎಸ್.ಜೆ.ಎಂ. ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಗೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿವೆ. ಹಾಸನ, ಅರಸೀಕೆರೆ, ಹೊಸದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಸಾಗರ, ಶಿಕಾರಿಪುರ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಊರುಗಳ ತಂಡಗಳು ಹೆಸರನ್ನು ನೊಂದಾಯಿಸಿವೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ರಾಜ್ಯಾದ್ಯಂತ ಕ್ರಿಕೆಟ್ ಪಂದ್ಯಾವಳಿ ನಡೆದಿರೋದು ತೀರಾ ವಿರಳ. ಇದೀಗ ಅಪ್ಪು ಹೆಸರಿನಲ್ಲಿ ನಡೆಯುತ್ತಿರುವ ಈ ಅಪ್ಪು ಕಪ್ ಕ್ರಿಕೆಟ್ ಪಂದ್ಯಾವಳಿಗೆ ಸಾಕಷ್ಟು ತಂಡಗಳು ನೋಂದಾಯಿಸಿದ್ದು, ಮತ್ತುಷ್ಟು ಜನ ಫೋನ್ ಮಾಡುತ್ತಿದ್ದಾರೆ ಎಂದು ಕ್ರಿಕೆಟ್ ಟೂರ್ನಮೆಂಟ್ ಆಯೋಜಕರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 10 ವಿಕೆಟ್ ಕಿತ್ತು ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಅಜಾಜ್ ಪಟೇಲ್
Advertisement
Advertisement
ತರೀಕೆರೆ ಪಟ್ಟಣದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯದೆ ವರ್ಷಗಳೇ ಕಳೆದಿದ್ದು, ಅಪ್ಪು ಹೆಸರಿನ ಕಪ್‍ಗೆ ಸ್ಥಳೀಯ ಎರಡ್ಮೂರು ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ತಂಡಗಳಿಗೆ ಪಂದ್ಯ ಗೆಲ್ಲೋದು, ಹಣ ಗೆಲ್ಲೋದು ಮುಖ್ಯವಾಗಿಲ್ಲ. ಅಪ್ಪು ಕಪ್ ಎಂಬ ಹೆಸರಿನ ಕಪ್‍ಗಾಗಿ ತಂಡಗಳು ಹೋರಾಡುತ್ತಿವೆ. ಈ ಟೂರ್ನಮೆಂಟ್‌ಗೆ ಸ್ಥಳೀಯ ಸಮಾಜ ಸೇವಕ ಗೋಪಿಕೃಷ್ಣ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ ಬಹುಮಾನದ ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ತವರಿನಲ್ಲಿ ಅತಿ ಹೆಚ್ಚು ವಿಕೆಟ್ – ದಾಖಲೆ ಬರೆದ ಅಜಾಜ್ ಪಟೇಲ್
Advertisement