CricketLatestMain PostSports

ತವರಿನಲ್ಲಿ ಅತಿ ಹೆಚ್ಚು ವಿಕೆಟ್ – ದಾಖಲೆ ಬರೆದ ಅಜಾಜ್ ಪಟೇಲ್

ಮುಂಬೈ: ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಮುಂಬೈ ಮೂಲದ ಅಜಾಜ್ ಪಟೇಲ್ ಭಾರತ ವಿರುದ್ಧ ತವರಿನಲ್ಲಿ ನಡೆದ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ತಮ್ಮ ತವರು ನೆಲ ಮುಂಬೈನಲ್ಲಿ 47.5 ಓವರ್ ಎಸೆದ ಅಜಾಜ್ ಪಟೇಲ್ 12 ಓವರ್ ಮೇಡನ್ ಎಸೆದು 119 ರನ್ ನೀಡಿ 10 ವಿಕೆಟ್ ಪಡೆದಿದ್ದಾರೆ. ಈ ಮೂಲಕ ತವರಿನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಆಟಗಾರರ ಪೈಕಿ ಮೊದಲಿಗರಾಗಿದ್ದಾರೆ. ಅಜಾಜ್ ಪಟೇಲ್ 1988ರಲ್ಲಿ ಮುಂಬೈನಲ್ಲಿ ಜನಿಸಿದ್ದರು. ಇದೀಗ ನ್ಯೂಜಿಲೆಂಡ್ ಪರ ಕ್ರಿಕೆಟ್ ಆಡುವ ಪಟೇಲ್ 11 ಟೆಸ್ಟ್ ಪಂದ್ಯಗಳಿಂದ 39 ವಿಕೆಟ್ ಮತ್ತು 7 ಟಿ20 ಪಂದ್ಯದಿಂದ 11 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: 10 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಅಜಾಜ್‌ ಪಟೇಲ್‌

ಈ ಹಿಂದೆ 2002ರಲ್ಲಿ ಶ್ರೀಲಂಕಾ ತಂಡದ ಮುತ್ತಯ್ಯ ಮುರಳೀಧರನ್ ತಮ್ಮ ತವರು ನೆಲ ಕ್ಯಾಂಡಿಯದಲ್ಲಿ 51 ರನ್‍ಗೆ 9 ವಿಕೆಟ್ ಪಡೆದಿದ್ದರು. ಇದಕ್ಕೂ ಮೊದಲು 1987ರಲ್ಲಿ ಪಾಕಿಸ್ತಾನ ತಂಡದ ಅಬ್ದುಲ್ ಖಾದಿರ್ ತಮ್ಮ ತವರೂರು ಲಾಹೋರ್‌ನಲ್ಲಿ 56 ರನ್‍ಗಳಿಗೆ 9 ವಿಕೆಟ್ ಸಾಧನೆ ಮಾಡಿದ್ದರು. ಇದನ್ನೂ ಓದಿ: ಆರ್​ಸಿಬಿ ಪರ ಮಾತ್ರ ಆಡುತ್ತೇನೆ ಎಂದಿದ್ದ ಚಹಲ್ ಐಪಿಎಲ್ ಭವಿಷ್ಯವೇನು?

ಅಜಾಜ್ ಪಟೇಲ್ ಭಾರತದಲ್ಲಿ ನೆಲದಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ಭಾರತದ ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಅಜಾಜ್ ಬೌಲಿಂಗ್‍ನಲ್ಲಿ ಭಾರತದ 5 ಮಂದಿ ಆಟಗಾರರು ಕ್ಯಾಚ್ ನೀಡಿ ಔಟಾಗಿದ್ದರೆ, 3 ಮಂದಿ ಎಲ್‍ಬಿಡಬ್ಲ್ಯೂ ಮತ್ತು ಇಬ್ಬರನ್ನು ಬೌಲ್ಡ್ ಮಾಡುವ ಮೂಲಕ 10 ವಿಕೆಟ್ ಕಿತ್ತು ಸಂಭ್ರಮಿಸಿದರು. ಇದನ್ನೂ ಓದಿ: ಓಮಿಕ್ರಾನ್ ನಡುವೆಯೂ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ

ಅಜಾಜ್ ಪಟೇಲ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲಾ 10 ವಿಕೆಟ್ ಪಡೆದ ಮೂರನೇ ಬೌಲರ್. ಈ ಮೊದಲು 1956ರಲ್ಲಿ ಇಂಗ್ಲೆಂಡ್‍ನ ಆಫ್ ಸ್ಪಿನ್ನರ್ ಜಿಮ್ ಲೇಕರ್, ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್ ಕಿತ್ತಿದ್ದರು. 1999ರಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ದೆಹಲಿಯ ಫಿರೋಜ್ ಶಾ ಕೋಟ್ಲಾ(ಅರುಣ್ ಜೇಟ್ಲಿ ಮೈದಾನ) ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಎಲ್ಲಾ 10 ವಿಕೆಟ್ ಕಬಳಿಸಿ ಭಾರತದ ಪರ ದಾಖಲೆ ನಿರ್ಮಿಸಿದ್ದರು.

Leave a Reply

Your email address will not be published.

Back to top button