ಅಪ್ಪು ಸರ್ ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ: ಇಮ್ರಾನ್ ಸರ್ದಾರಿಯಾ

Public TV
1 Min Read
Choreographer Imran Sardhariya n punneth

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ ಎಂದು ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಹೇಳಿದರು.

ಪುನೀತ್ ನಿಧನದ ನಂತರ ಅವರು ಇಲ್ಲ ಎಂಬುದನ್ನು ಯಾರಿಗೂ ಒಪ್ಪಿಕೊಳ್ಳಲು ಆಗುತ್ತಿಲ್ಲ. ಇಂದು ಕಂಠೀರವ ಸ್ಟುಡಿಯೋಗೆ ಅಪ್ಪು ಸಮಾಧಿ ದರ್ಶನಕ್ಕೆಂದು ಬಂದಿದ್ದ ಇಮ್ರಾನ್ ಮಾಧ್ಯಮಗಳೊಂದಿಗೆ ಮಾತನಾಡಿ, ಇವತ್ತಿಗೂ ಸರ್ ನಿಧನರಾಗಿದ್ದಾರೆ ಎಂಬ ನಡುಕ ಇದೆ. ಅವರು ಇಲ್ಲ ಎಂಬುದನ್ನು ನಾನು ಇವತ್ತಿಗೂ, ಎಂದಿಗೂ ಒಪ್ಪಲ್ಲ. ಏಕೆಂದರೆ ಅವರ ಜೊತೆ ನನ್ನ ಜರ್ನಿ ತುಂಬಾ ದೊಡ್ಡದಾಗಿದೆ. ಅವರೊಂದಿಗೆ ನನ್ನ ಒಡನಾಟ ಬಹಳ ದೊಡ್ಡದು ಎಂದು ನೆನೆದರು.

puneeth rajkumar samadhi 1

ಅಪ್ಪು ಜೊತೆಗಿದ್ದ ಯಾರನ್ನದರೂ ಕೇಳಿ ಅವರು ಎಂದೂ ಯಾರನ್ನೂ ಭೇದ ಭಾವ ಮಾಡಿಲ್ಲ. ಯಾರನ್ನು ಕೂಡಾ ಕೀಳಾಗಿ ನೋಡಿಲ್ಲ. ಅವರ ಬಗ್ಗೆ ಏನು ಹೇಳಬೇಕು ಎಂದೇ ತಿಳಿಯುತ್ತಿಲ್ಲ. ಅವರು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ. ಅವರು ನಮ್ಮ ಒಳಗೆ ಮತ್ತು ನಮ್ಮ ಜೊತೆಗೆ ಇದ್ದೇ ಇರುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ

ಈ ಸುದ್ದಿ ಬರುವ ಒಂದು ವಾರದ ಮುನ್ನ ಅವರ ಜೊತೆ ನಾನು ಮಾತನಾಡಿದ್ದೆ. ನಾನು ಗೋವಾದಲ್ಲಿ ಶೂಟಿಂಗ್‍ಗೆ ಹೋಗುತ್ತಿದ್ದೆ, ಆಗ ಅವರು ಗೋವಾದಿಂದ ಬಂದ ತಕ್ಷಣ ನನ್ನನ್ನು ಭೇಟಿ ಮಾಡು ಎಂದು ಹೇಳಿದ್ದರು. ಆದರೆ ನಾನು ಗೋವಾದಲ್ಲಿ ಇರುವಾಗಲೇ ಈ ಸುದ್ದಿ ಬಂತು. ಸುದ್ದಿ ತಿಳಿದ ತಕ್ಷಣ ನಾವು ಇಲ್ಲಿಗೆ ಬಂದೆವು. ಆದರೆ ಅವರು ಇಲ್ಲ ಎಂದು ನನಗೆ ಅನಿಸುತ್ತಿಲ್ಲ ಎಂದರು.

Share This Article