ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲು ಸೈಕಲ್‍ನಲ್ಲಿ ಬೆಂಗಳೂರಿಗೆ ಜಾಥಾ ಹೊರಟ ಅಭಿಮಾನಿ

Public TV
1 Min Read
Chitradurga fan

ಚಿತ್ರದುರ್ಗ: ನಟ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಾಗಲಕೋಟೆ ಮೂಲದ ಅಪ್ಪು ಅಭಿಮಾನಿ ರಾಘವೇಂದ್ರ ಗಾಣಿಗೇರ, ಸೈಕಲ್‍ನಲ್ಲಿ ಬೆಂಗಳೂರಿಗೆ ಜಾಥಾ ಹೊರಟಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಾದರದಿನ್ನಿ ಗ್ರಾಮದಿಂದ ಸೈಕಲ್ ಜಾಥಾವನ್ನು ಆರಂಭಿಸಿರುವ ರಾಘವೇಂದ್ರ ಅವರು ಇಂದು ಕೋಟೆನಾಡು ಚಿತ್ರದುರ್ಗ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ಏಕ್ ಲವ್ ಯಾ ಸಿನಿಮಾ ತಂಡದಿಂದ ಅಪ್ಪುಗೆ ಅವಮಾನ- ಶಾಂಪೇನ್ ಚಿಮ್ಮಿಸಿ ಸಂಭ್ರಮ

Puneeth Rajkumar fan

ಪುನೀತ್ ಅವರ ಅಂತ್ಯಸಂಸ್ಕಾರಕ್ಕೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಅವರಿಗೆ ಪ್ರಿಯವಾಗಿದ್ದ ಸೈಕ್ಲಿಂಗ್ ಮೂಲಕ ನಮನ ಸಲ್ಲಿಸಲು ಈ ಸೈಕಲ್ ಜಾಥಾ ನಡೆಸಲಾಗುತ್ತಿದೆ. ಒಂದು ದಿನಕ್ಕೆ 100 ಕಿಲೋಮೀಟರ್ ಸೈಕಲ್ ಸವಾರಿ ಮಾಡಲಿರೋ ಈ ಅಭಿಮಾನಿ, ಸೋಮವಾರ ಬೆಂಗಳೂರು ತಲುಪಲಿದ್ದು, ಭಾವಪೂರ್ಣ ನಮನ ಸಲ್ಲಿಸಲು ಶ್ರಮವಹಿಸಿ ಸೈಕಲ್‍ನಲ್ಲಿ ಧಾವಿಸುತಿದ್ದಾರೆ. ಇದನ್ನೂ ಓದಿ: ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

Puneeth Rajkumar fan 1

ಭಾಗಲಕೋಟೆಯಿಂದ ಸೈಕಲ್ ಜಾಥಾದಲ್ಲಿ ಆಗಮಿಸಿರೋ ರಾಘವೇಂದ್ರನಿಗೆ ಚಿತ್ರದುರ್ಗದ ಅಪ್ಪು ಅಭಿಮಾನಿಗಳಿಂದ ಒನಕೆ ಓಬವ್ವ ವೃತ್ತದಲ್ಲಿ ಸ್ವಾಗತ ಕೋರಲಾಯಿತು. ಅಪ್ಪು ಅಭಿಮಾನಿಯ ಸೈಕಲ್ ಜಾಥಾ ಎಲ್ಲರ ಗಮನ ಸೆಳೆಯಿತು. ಅಭಿಮಾನಿ ರಾಘವೇಂದ್ರಗೆ ಹೂವಿರ ಹಾರ ಹಾಕಿ ಸ್ವಾಗತ ಕೋರಿ, ಬೆಂಗಳೂರಿಗೆ ಕ್ಷೇಮವಾಗಿ ತಲುಪಿ, ಅಪ್ಪು ಅವರಿಗೆ ನಮನ ಸಲ್ಲಿಸುವಂತೆ ಕೋಟೆನಾಡಿನ ಅಪ್ಪು ಫ್ಯಾನ್ಸ್ ಬೀಳ್ಕೊಡುಗೆ ನೀಡಿದರು. ಈ ವೇಳೆ ಚಿತ್ರದುರ್ಗದ ಪರಶುರಾಮ್, ಚಂದ್ರು,ಮುಕೇಶ್ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *