ಮೈಸೂರು: ತಾಯಾಣೆಗೂ ನಾನು ಮತ್ತು ಅಪ್ಪು ಎಂದಿಗೂ ಜಗಳವಾಡಿಲ್ಲ ಎಂದು ನಟ ಶಿವರಾಜ್‍ಕುಮಾರ್ ಹೇಳಿದರು.
Advertisement
ನಗರದ ಶಕ್ತಿಧಾಮಕ್ಕೆ ಇಂದು ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್‍ಕುಮಾರ್, ಅವನ ಪ್ರತಿಭೆ ನೋಡಿ ಬಹಳ ಸಂತೋಷಪಟ್ಟಿದ್ದೇವೆ. ಅಪ್ಪುದು ನಿಷ್ಕಳಂಶ ಆತ್ಮ ಎಂದು ನೆನದರು.
Advertisement
ನೋವಿನ ಜೊತೆ ತಮ್ಮನನ್ನು ಜೀವಂತವಾಗಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಅಳುವುದರಿಂದ ಅಪ್ಪುವನ್ನು ಕಳೆದುಕೊಂಡು ಬಿಡುತ್ತೇವೆ. ಅವನನ್ನು ಜೊತೆಯಲ್ಲಿಟ್ಟುಕೊಂಡು ಬದುಕಬೇಕು. ಅಪ್ಪು ಕಣ್ಣುಗಳು ಇವತ್ತು ಸಮಾಜ ನೋಡುತ್ತಿವೆ. ಇಡೀ ಕರುನಾಡಿನ ನೈತಿಕ ಬೆಂಬಲ ನಮ್ಮ ಕುಟುಂಬಕ್ಕೆ ಸಿಕ್ಕಿದೆ. ನೋವಿನ ಜೊತೆ ಬದುಕುವುದು ಅನಿವಾರ್ಯ ಎಂದು ಭಾವುಕವಾಗಿ ನುಡಿದರು. ಇದನ್ನೂ ಓದಿ: ಶಕ್ತಿಧಾಮಕ್ಕೆ ಭೇಟಿಕೊಟ್ಟ ಶಿವರಾಜ್‍ಕುಮಾರ್ ದಂಪತಿ
Advertisement
ಶಕ್ತಿಧಾಮವನ್ನು ಇನ್ನೂ ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಎರಡು ಮೂರು ವಾರದಲ್ಲಿ ಶಕ್ತಿಧಾಮದಲ್ಲಿ ಶಾಲೆ ನಿರ್ಮಾಣದ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Advertisement
ಪೈರಸಿ ಕುರಿತು ಮಾತನಾಡಿ, ಪೈರಿಸಿ ನಿಯಂತ್ರಿಸುವ ಪ್ರಯತ್ನ ಸಾಗಿದೆ. ಮನುಷ್ಯ ಅರ್ಥ ಮಾಡಿಕೊಳ್ಳಬೇಕು. ಜೆಮ್ಸ್‍ಗೆ ಒಳ್ಳೆಯ ವಾಯ್ಸ್ ನೋಡಿ ಅಂತಾ ಹೇಳಿದ್ದಾರೆ. ನನ್ನ ವಾಯ್ಸ್ ಅಪ್ಪುಗೆ ಸರಿಹೊಂದಲ್ಲ. ಅನಿವಾರ್ಯ ಅನ್ನುವುದಾದರೆ ವಾಯ್ಸ್ ಕೊಡುತ್ತೇನೆ ಎಂದರು. ಇದನ್ನೂ ಓದಿ: ಹೇಗೆ ಬದುಕ್ಬೇಕು, ಹೇಗೆ ಸಾಮಾಜಿಕ ಕಾರ್ಯಗಳನ್ನು ಮಾಡ್ಬೇಕು ಅನ್ನೋದಕ್ಕೆ ಪುನೀತ್ ಮಾದರಿ: ರಾಜಮೌಳಿ
ಮನುಷ್ಯ ಮುಖ್ಯವಲ್ಲ ಮನುಷ್ಯತ್ವ ಮುಖ್ಯ ಎನ್ನುವುದು ಭಜರಂಗಿ 2 ಸಿನಿಮಾ ಸಂದೇಶ. ಈ ಸಂದೇಶಕ್ಕೆ ಅಪ್ಪು ಬದುಕು ಬಹಳ ಹತ್ತಿರವಾಗಿದೆ ತಿಳಿಸಿದರು.