ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’, ಅಪ್ಪು ನಟನೆಯ ಕೊನೆಯ ಸಿನಿಮಾವಾಗಲಾರದು. ಅವರನ್ನು ಮತ್ತೆ ಮತ್ತೆ ಸಿನಿಮಾದಲ್ಲಿ ತೋರಿಸುವ ತವಕ ಸ್ಯಾಂಡಲ್ ವುಡ್ ನಿರ್ದೇಶಕರದ್ದು. ಆದರೆ, ಆಯಾ ಸಿನಿಮಾದಲ್ಲಿ ಅಪ್ಪು ಹೇಗಿರುತ್ತಾರೆ ಎನ್ನುವುದೇ ಕುತೂಹಲ. ಇದನ್ನೂ ಓದಿ : ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?
ಅನುಮಾನವೇ ಇಲ್ಲ, ಪುನೀತ್ ರಾಜ್ ಕುಮಾರ್ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ನಟಿಸಿರುವ ಕೊನೆಯ ಸಿನಿಮಾ ಜೇಮ್ಸ್. ಆದರೆ, ಅವರು ಮತ್ತೊಂದು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜತೆ ನಟಿಸಲಿದ್ದಾರೆ. ಅದು ಗ್ರಾಫಿಕ್ಸ್ ರೂಪದಲ್ಲ ಅಥವಾ ಮತ್ತ್ಯಾವ ರೂಪದಲ್ಲಿ ಇರುತ್ತಾರೆ ಎನ್ನುವುದೇ ಕುತೂಹಲಕಾರಿ ಸಂಗತಿ. ಇದನ್ನೂ ಓದಿ : ಸಂಭಾವನೆ ಹೆಚ್ಚಿಸ್ಕೊಂಡ್ರಂತೆ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಬೆಡಗಿ
ಸದ್ಯ ಶಿವರಾಜ್ ಕುಮಾರ್ ತಮ್ಮದೇ ಬ್ಯಾನರ್ ನ ‘ವೇದ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಪ್ಪು ಇರಲಿದ್ದಾರೆ ಎಂದು ಸ್ವತಃ ಶಿವಣ್ಣನೇ ಹೇಳಿಕೊಂಡಿದ್ದಾರೆ. ಅದು ಹೇಗೆ ಎನ್ನುವುದನ್ನು ತೆರೆಯ ಮೇಲೆ ನೋಡಿ ಎಂದಿದ್ದಾರೆ. ಇದನ್ನೂ ಓದಿ : ಭಾರತ ಗುಪ್ತಚರ ಇಲಾಖೆ ಸೇರಿಕೊಂಡ ಸನ್ನಿ ಲಿಯೋನ್
ಪುನೀತ್ ಮತ್ತು ಶಿವರಾಜ್ ಕುಮಾರ್ ಒಟ್ಟಾಗಿ ನಟಿಸಬೇಕು ಎನ್ನುವುದು ಸ್ವತಃ ಪುನೀತ್ ಆಸೆಯಾಗಿತ್ತು. ಅದರಲ್ಲೂ ಶಿವಣ್ಣನಿಗೆ ನಿರ್ದೇಶನ ಮಾಡಬೇಕು ಎಂದು ಪುನೀತ್ ಕನಸು ಕಂಡಿದ್ದರು. ಅಪ್ಪು ಅವರ ಒಂದು ಆಸೆ ಮಾತ್ರ ಈಡೇರಿದೆ. ಮತ್ತೊಂದು ಆಸೆ ಕನಸಾಗಿಯೇ ಉಳಿದಿದೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಸಿಂಡ್ರೆಲಾ ಹೊಸ ನ್ಯೂಸ್ ಕೊಡ್ತಾರಾ?
ಜೇಮ್ಸ್ ಸಿನಿಮಾದಲ್ಲೂ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ನಟಿಸಿದ್ದಾರೆ. ನಂತರ ಶಿವಣ್ಣನ ಜತೆ ಅಪ್ಪು ವೇದದಲ್ಲೂ ಇರಲಿದ್ದಾರೆ ಎನ್ನುವುದೇ ಅಭಿಮಾನಿಗಳ ಪಾಲಿಗೆ ದೊಡ್ಡ ಸುದ್ದಿ.