BollywoodCinemaDistrictsKarnatakaLatestMain PostSandalwoodSouth cinema

ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?

ಕ್ಷಿಣದ ಖ್ಯಾತ ನಟಿ ಶ್ರೀಯಾ ಶರಣ್ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅವರು ಪುನೀತ್ ರಾಜ್ ಕುಮಾರ್ ನಟನೆಯ ಅರಸು ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು, ನೆನಪಿರಲಿ ಪ್ರೇಮ್ ನಟನೆಯ ಚಂದ್ರ ಚಿತ್ರಕ್ಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಇದೀಗ ಆರ್.ಚಂದ್ರು ನಿರ್ದೇಶನದ ಕಬ್ಜ ಅಡ್ದದಲ್ಲಿ ಶ್ರೀಯಾ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : ಸಂಭಾವನೆ ಹೆಚ್ಚಿಸ್ಕೊಂಡ್ರಂತೆ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಬೆಡಗಿ

ಕಬ್ಜ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಇಬ್ಬರೂ ದಕ್ಷಿಣದ ಖ್ಯಾತ ತಾರೆಯರೇ ಇರಲಿದ್ದಾರೆ ಎಂದು ನಿರ್ದೇಶಕ ಚಂದ್ರು ಹೇಳಿದ್ದರು. ಆ ಮಾತಿನಂತೆ ಇದೀಗ ಶ್ರೀಯಾ ಶರಣ್ ಅವರನ್ನು ಕರೆತಂದಿದ್ದಾರೆ. ಇದನ್ನೂ ಓದಿ : ಭಾರತ ಗುಪ್ತಚರ ಇಲಾಖೆ ಸೇರಿಕೊಂಡ ಸನ್ನಿ ಲಿಯೋನ್

ರವಿವಾರ ಶ್ರೀಯಾ ಅವರ ಫೋಟೋ ಶೂಟ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದು, ಇಡೀ ದಿನ ಫೋಟೋಶೂಟ್ನಲ್ಲಿ ಅವರು ಭಾಗಿಯಾಗಿದ್ದರು. ಇದನ್ನೂ ಓದಿ : ಸ್ಯಾಂಡಲ್ ವುಡ್ ಸಿಂಡ್ರೆಲಾ ಹೊಸ ನ್ಯೂಸ್ ಕೊಡ್ತಾರಾ?

ಕಬ್ಜ ಚಿತ್ರದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರು ಸ್ಟಾರ್ ನಟರಿದ್ದು ಯಾರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಉಪೇಂದ್ರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ಅವರಿಗೆ ಮತ್ತೋರ್ವ ತಾರೆಯನ್ನು ಹುಡುಕಿದ್ದು, ಸದ್ಯದಲ್ಲೇ ಆ ನಟಿಯ ಹೆಸರನ್ನೂ ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ ಚಂದ್ರು. ಇದನ್ನೂ ಓದಿ :  ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್

ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲದೇ ಭಾರೀ ಬಜೆಟ್ ನಲ್ಲೂ ತಯಾರಾಗುತ್ತಿದೆ. ಈಗಾಗಲೇ ಯಶಸ್ಸಿ ಸಿನಿಮಾಗಳನ್ನು ನೀಡಿರುವ ಆರ್.ಚಂದ್ರು ಬಗ್ಗೆ ಈ ಸಿನಿಮಾದಿಂದ ಮತ್ತಷ್ಟು ನಿರೀಕ್ಷೆ  ಹೆಚ್ಚಾಗಿದೆ.

YouTube video

Leave a Reply

Your email address will not be published. Required fields are marked *

Back to top button