CrimeLatestLeading NewsMain PostNational

ತನ್ನೆದುರೇ ಸೆಕ್ಸ್ ಮಾಡಲು ಜೋಡಿಯನ್ನು ಒತ್ತಾಯಿಸಿದ ಪೂಜಾರಿ – ಫಾಸ್ಟ್ ಗಂ ಸುರಿದು ಇಬ್ಬರ ಹತ್ಯೆ

ಜೈಪುರ: ತನ್ನೆದುರೇ ಜೋಡಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಯಿಸಿದ ಪೂಜಾರಿಯೊಬ್ಬ (Pujari) ಜೋಡಿ ಲೈಂಗಿಕ ಕ್ರಿಯಲ್ಲಿರುವಾಗಲೇ ಅವರ ಮೇಲೆ ಫಾಸ್ಟ್ ಗಂ (Superglue) ಸುರಿದು ಕೊಂದಿರುವ ಘಟನೆ ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ನಡೆದಿದೆ. ಜೋಡಿ ಹತ್ಯೆಯಾದ 3 ದಿನಗಳ ಬಳಿಕ ಅವರಿಬ್ಬರ ಬೆತ್ತಲಾದ ಶವಗಳು ಅರಣ್ಯದಲ್ಲಿ ಪತ್ತೆಯಾಗಿದೆ.

ನವೆಂಬರ್ 18ರಂದು ಉದಯಪುರದ ಕೆಲಬಾವಾಡಿಯ ಅರಣ್ಯ ಪ್ರದೇಶದಲ್ಲಿ ಜೋಡಿಯ ಶವ ಪತ್ತೆಯಾಗಿದೆ. ಆರಂಭದಲ್ಲಿ ಮರ್ಯಾದಾ ಹತ್ಯೆಯೆಂದು ಶಂಕಿಸಲಾಗಿತ್ತು. ಬಳಿಕ ಅವರಿಬ್ಬರನ್ನೂ ಕೊಂದಿರುವ ಆರೋಪದ ಮೇಲೆ ಪೂಜಾರಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಗ್ಗೆ ವಿಚಾರಣೆ ನಡೆಸಿದಾಗ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ.

CRIME 2

ಮೃತರನ್ನು ಶಿಕ್ಷಕ ರಾಹುಲ್ ಮೀನಾ (30) ಮತ್ತು ಸೋನು ಕುನ್ವರ್ (28) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ರಾಹುಲ್ ಮತ್ತು ಸೋನು ಇಬ್ಬರೂ ಪ್ರತ್ಯೇಕ ವ್ಯಕ್ತಿಗಳನ್ನು ಮದುವೆಯಾಗಿದ್ದರು. ಆದರೂ ಇವರಿಬ್ಬರು ಸಂಬಂಧ ಹೊಂದಿದ್ದು, ನಗರದ ಇಚ್ಚಪೂರ್ಣ ಶೇಷನಾಗ್ ಭಾವಜಿ ಮಂದಿರದಲ್ಲಿ ಆಗಾಗ ಭೇಟಿಯಾಗುತ್ತಿದ್ದರು.

ರಾಹುಲ್ ಸೋನು ಜೊತೆ ಸಂಬಂಧ ಹೊಂದುತ್ತಲೇ ತನ್ನ ಪತ್ನಿಯೊಂದಿಗೆ ಆಗಾಗ ಜಗಳವಾಡಲು ಪ್ರಾರಂಭಿಸಿದ್ದ. ಈ ವೇಳೆ ಆಕೆ ಭಲೇಶ್ ಕುಮಾರ್ (55) ಹೆಸರಿನ ಪೂಜಾರಿಯ ಸಹಾಯವನ್ನು ಕೋರಿದ್ದಾಳೆ. ಭಲೇಶ್ ನಗರದಲ್ಲಿ 7-8 ವರ್ಷಗಳಿಂದ ವಾಸವಿದ್ದು, ಜನರಿಗೆ ತಾಯತ ತಯಾರಿಸುತ್ತಿದ್ದ. ಆತನಿಗೆ ಸೋನುವಿನ ಪರಿಚಯವೂ ಇದ್ದು, ಆಕೆಗೆ ರಾಹುಲ್‌ನೊಂದಿಗೆ ಸಂಬಂಧವಿದ್ದ ವಿಚಾರವೂ ತಿಳಿದಿತ್ತು.

crime

ಪೂಜಾರಿ ತನ್ನ ಹಾಗೂ ಸೋನು ಜೊತೆಗಿನ ಸಂಬಂಧವನ್ನು ತನ್ನ ಪತ್ನಿಗೆ ಹೇಳಿದ್ದಾನೆ ಎಂದು ತಿಳಿದ ರಾಹುಲ್, ಸುಳ್ಳು ಕಿರುಕುಳ ಪ್ರಕರಣ ದಾಖಲಿಸಿ, ಮಾನಹಾನಿ ಮಾಡುವುದಾಗಿ ಭಲೇಶ್‌ಗೆ ಬೆದರಿಕೆ ಹಾಕಿದ್ದಾನೆ. ಇಲ್ಲಿಯವರೆಗೆ ತಾನು ಗಳಿಸಿದ್ದ ಕೀರ್ತಿ ಈ ಸುಳ್ಳು ಆರೋಪದಿಂದ ಹಾಳಾಗಬಾರದೆಂಬ ಕಾರಣಕ್ಕೆ ಭಲೇಶ್ ರಾಹುಲ್ ಹಾಗೂ ಸೋನು ಅಕ್ರಮ ಸಂಬಂಧವನ್ನು ರೆಡ್ ಹ್ಯಾಂಡ್ ಆಗಿ ಎಲ್ಲರ ಮುಂದೆ ತೋರಿಸಲು ಹಾಗೂ ತನ್ನ ಸೇಡನ್ನು ತೀರಿಸಲು ಕ್ರಿಮಿನಲ್ ಪ್ಲಾನ್ ಮಾಡಿದ್ದ.

ಭಲೇಶ್ ಸುಮಾರು 50 ಟ್ಯೂಬ್ ಫಾಸ್ಟ್ ಗಂ ಖರೀದಿಸಿ, ಅದನ್ನು ಬಾಟಲಿಗೆ ಸುರಿದು ಇಟ್ಟುಕೊಂಡಿದ್ದ. ನವೆಂಬರ್ 15ರಂದು ಸಂಜೆ ರಾಹುಲ್ ಹಾಗೂ ಸೋನು ಅವರನ್ನು ಕಾಡಿಗೆ ಕರೆದುಕೊಂಡು ಹೋಗಿ, ಏಕಾಂತದಲ್ಲಿರುವಾಗ ತನ್ನೆದುರೇ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ. ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿದ್ದಾಗ ಅವರ ಮೇಲೆ ಫಾಸ್ಟ್ ಗಂ ಅನ್ನು ಸುರಿದಿದ್ದಾನೆ. ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ಎಲ್ಲರೆದುರು ಕಂಡುಬಂದರೆ ತಾನು ತಪ್ಪಿಸಿಕೊಳ್ಳಬಹುದು ಎಂಬುದು ಭಲೇಶ್‌ನ ಉದ್ದೇಶವಾಗಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಬರ್ಬರ ಕೊಲೆ- ನಾಲ್ವರು ಕುಟುಂಬಸ್ಥರನ್ನು ಕತ್ತು ಸೀಳಿ ಕೊಲೆಗೈದ ಮಾದಕ ವ್ಯಸನಿ

ಪೂಜಾರಿ ರಾಹುಲ್ ಹಾಗೂ ಸೋನು ಮೇಲೆ ಫಾಸ್ಟ್ ಗಂ ಸುರಿದಾಗ ಇಬ್ಬರೂ ಸ್ವಲ್ಪ ಸಮಯ ಅಂಟಿಕೊಂಡಿದ್ದರು. ಬಳಿಕ ಇಬ್ಬರೂ ತಮ್ಮನ್ನು ತಾವು ಬೇರ್ಪಡಿಸಲು ಪ್ರಯತ್ನಿಸಿದ್ದು, ಅವರಿಬ್ಬರ ಚರ್ಮಗಳು ಕಿತ್ತು ಬರಲು ಪ್ರಾರಂಭಿಸಿವೆ. ಇಬ್ಬರೂ ಬೇರ್ಪಡುವುದನ್ನು ಕಂಡು ಪೂಜಾರಿ ಅವರಿಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ರಾಹುಲ್‌ನ ಕತ್ತು ಸೀಳಿ, ಸೋನುಗೆ ಚಾಕುವಿನಿಂದ ಇರಿದು ಹತ್ಯೆ ನಡೆಸಿದ್ದಾನೆ. ಕೃತ್ಯ ಎಸಗಿದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ಪೊಲೀಸರು 3 ದಿನಗಳ ಬಳಿಕ ಇಬ್ಬರ ಶವಗಳನ್ನು ಪತ್ತೆಹಚ್ಚಿದ್ದಾರೆ. ಸುತ್ತ ಮುತ್ತಲಿನ ಪ್ರದೇಶದ ಸುಮಾರು 50 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, 200 ಜನರನ್ನು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ದೊರೆತ ಸಾಕ್ಷಿಗಳ ಆಧಾರದ ಮೇಲೆ ಜೋಡಿಯ ಸಾವಿನ ಹಿಂದೆ ಭಲೇಶ್ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತನನ್ನು ವಶಕ್ಕೆ ಪಡೆಸು ವಿಚಾರಣೆ ನಡೆಸಿದಾಗ ಆತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಮದುವೆಯಾದ ಒಂದೇ ವರ್ಷಕ್ಕೆ ಆತ್ಮಹತ್ಯೆಗೆ ಶರಣಾದ ಟೆಕ್ಕಿ

Live Tv

Leave a Reply

Your email address will not be published. Required fields are marked *

Back to top button