ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಬಿತ್ತರಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸಿ ಬ್ಲಾಕ್ ಮುಂಭಾಗದ ಮೂರು ಎಲೆಕ್ಟ್ರಿಕ್ ಕಂಬಗಳಿಗೆ ಕನೆಕ್ಷನ್ ಕೊಡಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯಲ್ಲಿ ವರದಿಯಾಗುತ್ತಿದ್ದಂತೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಅಲ್ಲದೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ. ಉಳಿದ ಕಡೆ ಮುಂದಿನ ನಾಲ್ಕು ದಿನದಲ್ಲಿ ಕಂಪ್ಲೀಟ್ ಆಗಿ ಕರೆಂಟ್ ನೀಡುತ್ತೇವೆ ಎಂದು ಸ್ಮಾರ್ಟ್ ಸಿಟಿ ಕಾಂಟ್ರ್ಯಾಕ್ಟರ್ ರಾಕೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆ ಮನೆಯಲ್ಲೂ MES ಕಿರಿಕ್ – ಕನ್ನಡ ಸಾಂಗ್ ಹಾಕಿದ್ದಕ್ಕೆ ವಧು, ವರ, ಕನ್ನಡಿಗರ ಮೇಲೆ ಹಲ್ಲೆ
Advertisement
Advertisement
ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಜೆ ವೇಳೆ ಕರೆಂಟ್ ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ವಿದ್ಯುತ್ ಇಲ್ಲದೇ ರೋಗಿಗಳು ಮತ್ತು ರೋಗಿ ಸಂಬಂಧಿಕರು ರಾತ್ರಿ ಸಮಯದಲ್ಲಿ ಓಡಾಡಲು ಭಯ ಪಡುತ್ತಿದ್ದಾರೆ. ವಿದ್ಯುತ್ ಕಂಬಗಳಿದ್ದರೂ ಬೆಳಕಿಲ್ಲದೇ ಆರೋಗ್ಯ ಸಿಬ್ಬಂದಿ ಕಗ್ಗತ್ತಲಲ್ಲಿಯೇ ರೋಗಿಗಳನ್ನ ವ್ಹೀಲ್ ಚೇರ್ ನಲ್ಲಿ ಕೂರಿಸಿಕೊಂಡು, ಸ್ಟ್ರೆಚರ್ ಅಲ್ಲಿ ಮಲಗಿಸಿಕೊಂಡು ಟೆಸ್ಟಿಂಗ್, ಸ್ಕ್ಯಾನಿಂಗ್‍ಗೆ ಕರೆದುಕೊಂಡು ಹೋಗುತ್ತಿರುವ ಮತ್ತು ಕತ್ತಲಲ್ಲಿ ರೋಗಿಗಳು, ರೋಗಿಯ ಸಂಬಂಧಿಕರ ನರಳಾಟ ದೃಶ್ಯಗಳನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಇದನ್ನೂ ಓದಿ: ದಾಳಿ ವೇಳೆ ಸಿಬಿಐ ನನ್ನ ವೈಯಕ್ತಿಕ ದಾಖಲೆಗಳನ್ನು ವಶಪಡಿಸಿಕೊಂಡಿದೆ – ಕಾರ್ತಿ ಚಿದಂಬರಂ ಆರೋಪ
Advertisement
ಆಸ್ಪತ್ರೆಯ ಆವರಣದ ವಿದ್ಯುತ್ ಕಂಬಗಳಲ್ಲಿ ಬೆಳಕು ಇಲ್ಲದೇ ಇರುವುದಕ್ಕೆ ರೋಗಿಯ ಸಂಬಂಧಿಕರೊಬ್ಬರು, ಮಧ್ಯರಾತ್ರಿಯಲ್ಲಿ ಔಷಧಿ ತರುವುದಕ್ಕೆ, ಸ್ಕ್ಯಾನಿಂಗ್ ಟೆಸ್ಟಿಂಗ್ ಅಂತ ಹೊರಗಡೆ ಹೋಗುತ್ತೇವೆ. ಆದರೆ ಕರೆಂಟ್ ಇಲ್ಲದೇ ಎಲ್ಲಿ ಬೀಳುತ್ತೇವೋ ಎಂಬ ಭಯದ ಜೊತೆಗೆ ಹಾವು, ಚೇಳು ಕಚ್ಚುತ್ತೇನೋ ಅಂತ ಭಯವಾಗುತ್ತದೆ. ಕೋಟಿ, ಕೋಟಿ ಖರ್ಚು ಮಾಡುತ್ತಾರೆ 250 ರೂಪಾಯಿ ಕೊಟ್ಟು ಬಲ್ಪ್ ಹಾಕಿಸಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು.