ಮಾಡಲ್ ಪ್ರೋತಿಮಾ ಬೇಡಿ ಅವರದ್ದು ವರ್ಣರಂಜಿತ ಬದುಕು. ಮಾಡಲ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರು, ಸಡನ್ನಾಗಿ ನೃತ್ಯ ಲೋಕಕ್ಕೆ ಕಾಲಿಟ್ಟರು. ಒಡಿಸ್ಸಾ ನೃತ್ಯವನ್ನು ಕರಗತ ಮಾಡಿಕೊಂಡು, ಸುಪ್ರಸಿದ್ಧ ಒಡಿಸ್ಸಾ ನೃತ್ಯಗಾರ್ತಿ ಆದರು. ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಸಂಸಾರದ ಜಂಜಡ ತೊರೆದು ಸನ್ಯಾಸಿನಿ ಆದರು. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ
ಇಂತಹ ಪ್ರೋತಿಮಾ ಬೇಡಿ ಅವರ ಬಯೋಪಿಕ್ ಮಾಡಲು ಬಾಲಿವುಡ್ ರೆಡಿಯಾಗಿದೆ. ಈ ಸಿನಿಮಾವನ್ನು ಬಾಲಾಜಿ ಅವರ ಮೋಷನ್ ಪಿಚರ್ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಪ್ರೋತಿಮಾ ಬೇಡಿ ಕುಟುಂಬವನ್ನು ಸಂಪರ್ಕಿಸಿ ಹಕ್ಕುಗಳನ್ನೂ ಪಡೆದಿದ್ದಾರೆ. ಇದನ್ನೂ ಓದಿ : ನಾಳೆ ಫಿಲ್ಮ್ ಚೇಂಬರ್ ಚುನಾವಣೆ: ಅಖಾಡಕ್ಕೆ ಇಳಿದ ದೊಡ್ಮನೆ ಕುಟುಂಬ
ಪ್ರೋತಿಮಾ ಜೀವನ ಅಂದುಕೊಂಡಷ್ಟು ಸುಲಭವಾಗಿಲ್ಲ. ಸಾಕಷ್ಟು ಅಡೆತಡೆಗಳನ್ನು ಅವರು ಎದುರಿಸಿದ್ದಾರೆ. ಎರಡು ಮಕ್ಕಳಾದ ನಂತರ ಡಿವೋರ್ಸ್ ಪಡೆದು, ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಿದ್ದಾರೆ. ಖಾಸಗಿ ಬದುಕಿನಲ್ಲಿ ಸಾಕಷ್ಟು ಬಿರುಗಾಳಿಗಳು ಎದ್ದಿವೆ. ಇವೆಲ್ಲವನ್ನೂ ಒಟ್ಟಾಗಿಸಿ ಅವರ ಬಯೋಗ್ರಫಿ ಕೂಡ ಟೈಂಪಾಸ್ ಹೆಸರಿನಲ್ಲಿ ಪ್ರಿಂಟ್ ಆಗಿದೆ. ಈಗ ಅದನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಬರಲಿದೆ. ಇದನ್ನೂ ಓದಿ: ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು
ಪ್ರೋತಿಮಾ ಬೇಡಿ ಅವರ ಪುತ್ರ ಪೂಜಾ ಬೇಡಿ ಸಿನಿಮಾ ನಟಿ. ಹಲವಾರು ಚಿತ್ರಗಳನ್ನು ಮಾಡಿದ್ದಾರೆ. ಅವರೇ ಪ್ರೋತಿಮಾ ಬೇಡಿ ಅವರ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಸುದ್ದಿಯಿದೆ. ಆದರೆ, ಇನ್ನೂ ಆ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.