ಕಾರವಾರ: ಯಾರೋ ಏನೋ ಹೇಳಿದರೂ ಎಂದು ಕೇಳವುದು ಬೇಡ. ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಲ್ಲಿ ಸಾಬೀತಾಗಿದೆ ಎಂದು ತೆಲಗು ನಿರ್ದೇಶಕ ಗೀತಕೃಷ್ಣ ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ತಿರುಗೇಟು ಕೊಟ್ಟರು.
Advertisement
ಸ್ಯಾಂಡಲ್‍ವುಡ್ ಇಂಡಸ್ಟ್ರಿ ಡರ್ಟಿ ಎಂದು ಗೀತಕೃಷ್ಣ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಈ ಹೇಳಿಕೆಯನ್ನು ವಿರೋಧಿಸಿದ ಶಿವರಾಜ್ ಕುಮಾರ್ ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ಕೊಟ್ಟಿದ್ದು, ಕನ್ನಡ ಇಂಡಸ್ಟ್ರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗಿದೆ. ಕೆಜಿಎಫ್-2 ಸಿನಿಮಾದಿಂದ ಅದು ಪ್ರೂ ಆಗಿದೆ. ಯಾರು ಏನೇ ಹೇಳಿದ್ರು ಈ ಕಿವಿಯಲ್ಲಿ ಕೇಳಬೇಕು ಈ ಕಿವಿಯಲ್ಲಿ ಬಿಡಬೇಕು. ಅವರ ಮಾತು ಅವರ ಯೋಗ್ಯತೆಯನ್ನ ತೋರಿಸುತ್ತೆ. ಇಂತವರ ಬಗ್ಗೆ ಪ್ರತಿಕ್ರಿಯೆ ಕೊಟ್ಟಷ್ಟು ಅವರಿಗೆ ಲಾಭ ಆಗುತ್ತೆ ಎಂದು ತಿಳಿಸಿದರು.
Advertisement
Advertisement
ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು. ಅಪ್ಪಾಜಿ ಕಾಲದಿಂದ ಹಿಡಿದು ಇಲ್ಲಿಯವರಗೆ ಎಲ್ಲ ಕಲಾವಿದರು ಇಂಡಸ್ಟ್ರಿಯನ್ನ ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ಇಂತವರ ಕೀಳು ಮಾತಿಗೆ ಕಿವಿ ಕೊಡದೆ, ಅವರು ಯಾರು ಅಂತಾ ನೆಗ್ಲೆಟ್ ಮಾಡಬೇಕು ಎಂದರು. ಇದನ್ನೂ ಓದಿ: ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ
Advertisement
‘ಬೈರಾಗಿ’ ಸಿನಿಮಾ ಕುರಿತು ಮಾತನಾಡಿದ ಅವರು, ನನ್ನ ಮುಂದಿನ ಸಿನಿಮಾ ‘ಬೈರಾಗಿ’ ಯಾವುದೇ ಪ್ಯಾನ್ ಇಂಡಿಯಾವಲ್ಲ. ಭಾವನೆಗಳ ಕಥೆ ಇದು. ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಅರ್ಥವಿದೆ. ನನ್ನ ಪಾಲಿಗೆ ಬಂದ ಸಿನಿಮಾಗಳನ್ನ ಮಾಡುತ್ತಿದ್ದೇನೆ ಎಂದರು.