ಬೆಂಗಳೂರು: ದೇಶದಲ್ಲಿ ತೃತೀಯ ರಂಗದ ಸದ್ದು ಮತ್ತೊಮ್ಮೆ ಪ್ರಾರಂಭವಾಗಿದೆ. ಇದಕ್ಕೆ ವೇದಿಕೆ ಎಂಬಂತೆ ಇಂದು ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು.
ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿ ಸುಮಾರು ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ಇಬ್ಬರು ನಾಯಕರು ಚರ್ಚೆ ನಡೆಸಿದರು. ಚರ್ಚೆಯಲ್ಲಿ ತೃತೀಯ ರಂಗದ ಬಗ್ಗೆ ಚರ್ಚೆ ಆಗಿರೋದನ್ನ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಒಪ್ಪಿಕೊಂಡರು. ಇದನ್ನೂ ಓದಿ: ಹಣಕಾಸಿನ ವಿಷಯಕ್ಕೆ ಗೆಳೆಯನನ್ನೆ ಕೊಲೆ ಮಾಡಿಸಿದ ಕಿಡಿಗೇಡಿ
ಸಭೆ ಬಳಿಕ ಮಾತನಾಡಿದ ಚಂದ್ರಶೇಖರ್ ರಾವ್, ದೇಶದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಯುವ ಶಕ್ತಿ ದೇಶದಲ್ಲಿದೆ. ದೇಶದಲ್ಲಿ ಹಲವು ಸಂಪನ್ಮೂಲಗಳಿವೆ. ಇವತ್ತಿಗೂ ಹಲವು ಸಮಸ್ಯೆ ಬಗ್ಗೆ ಚರ್ಚೆಯಾಗಿಲ್ಲ. ಈ ಬಗ್ಗೆ ಚರ್ಚೆ ಮಾಡಲಾಗಿದೆ. ದೇಶದಲ್ಲಿ ರೈತರು, ದಲಿತರು, ಆದಿವಾಸಿಗಳು ಕಷ್ಟದಲ್ಲಿ ಇದ್ದಾರೆ. ಭರವಸೆಗಳನ್ನ ಸಾಕಷ್ಟು ಕೊಡಬಹುದು. ಆದರೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಅನ್ನೋದು ಮುಖ್ಯ ಎಂದು ಹೆಸರು ಹೇಳದೆ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಿಡಿಕಾರಿದರು.
Chief Minister Sri K. Chandrashekar Rao met with former Prime Minister Sri @H_D_Devegowda and former Chief Minister of Karnataka Sri @HD_Kumaraswamy in Bangalore today. pic.twitter.com/lWvpLCzW9e
— Telangana CMO (@TelanganaCMO) May 26, 2022
ಇವತ್ತು ದೇಶಕ್ಕೆ ಅಪಮಾನ ಮಾಡೋ ಕೆಲಸ ಆಗುತ್ತಿದೆ. ಸರ್ಕಾರ ಮಾಡೋದು ಮುಖ್ಯ ಅಲ್ಲ. ಸಮಸ್ಯೆ ಪರಿಹಾರ ಆಗಿದೆಯಾ ಅನ್ನೋದು ಮುಖ್ಯ. 75 ವರ್ಷಗಳ ಅಮೃತ ಮಹೋತ್ಸವದಲ್ಲಿ ನಾವು ಇದ್ದೇವೆ. ಆದರೂ ಕೂಡ ದೇಶ ನೀರಿನ ಸಮಸ್ಯೆ ಎದುರಿಸುತ್ತಿದೆ. ಅಷ್ಟೇ ಅಲ್ಲ ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದೆ ಎಂದರು.
ಕಾಂಗ್ರೆಸ್-ಬಿಜೆಪಿ ಸರ್ಕಾರ ಮಾಡೋದು ಮುಖ್ಯ ಅಲ್ಲ. ಉಜ್ವಲ ಭಾರತ ಆಗೋದು ನಮಗೆ ಮುಖ್ಯ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡ್ತಿದ್ದೇವೆ. ಮಾಧ್ಯಮಗಳು ಈ ನಿಟ್ಟಿನಲ್ಲಿ ನಮ್ಮ ಜೊತೆ ಸಹಕಾರ ಕೊಡಿ. ಸೆನ್ಸೇಷನಲ್ ಸುದ್ದಿಗಳನ್ನ ಬಿಡಿ. ದೇಶದ ಧನಾತ್ಮಕ ದಾರಿಯಲ್ಲಿ ಹೋಗುವಂತ ನಿಟ್ಟಿನಲ್ಲಿ ಸುದ್ದಿಗಳನ್ನ ಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ತಲೆಗೆ 25 ಲಕ್ಷ ಬಹುಮಾನ ಘೋಷಣೆಗೆಯಾಗಿದ್ದ ನಕ್ಸಲ್ ನಾಯಕ ಶವವಾಗಿ ಪತ್ತೆ
Hon'ble CM of Telangana Shri K. Chandrashekhar Rao visited me at my residence, today. We exchanged views on various topics of national importance. It was a candid and cordial meeting. pic.twitter.com/zoaWd10nIt
— H D Devegowda (@H_D_Devegowda) May 26, 2022
ದೇಶದಲ್ಲಿ ಇಂದು ಯಾವ ವರ್ಗಗಳು ಸಂತೋಷವಾಗಿ ಇಲ್ಲ. ಡಾಲರ್ ಬೆಲೆ ಇವತ್ತು ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಕುಸಿದಿದೆ. ಇದೆಲ್ಲವೂ ಸರಿ ಹೋಗಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡ್ತಿದ್ದೇವೆ. ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಭಾರತ ಬದಲಾವಣೆ ಖಂಡಿತ ಆಗಲಿದ್ದು, 2-3 ತಿಂಗಳಲ್ಲಿ ನಿಮಗೆ ಒಂದು ಉತ್ತಮ ಸುದ್ದಿಕೊಡ್ತೀವಿ ಎಂದು ತಿಳಿಸಿದರು.