ಧಾರವಾಡ: ಕಲಬುರಗಿಯ ಕೋರ್ಟ್ (Kalaburagi) ವೃತ್ತದ ಬಳಿ ಪ್ರತಿಷ್ಠಾಪಿಸಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೂರ್ತಿ ತೆರವುಗೊಳಿಸಿದ್ದನ್ನು ವಿರೋಧಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ವತಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಸಿದ್ದರಾಮಯ್ಯ ಅವರು ಅಹಿಂದ ಹಾಗೂ ಹಾಲುಮತದ ನಾಯಕರು. ಸಿದ್ದರಾಮಯ್ಯ ಅವರ ಶಕ್ತಿ ಏನೆಂಬುದು ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ಹೈಕಮಾಂಡ್ಗೆ ಗೊತ್ತಿದೆ. ಜನನಾಯಕರಾಗಿರುವ ಸಿದ್ದರಾಮಯ್ಯ ಅವರ ಮೂರ್ತಿಯನ್ನು ಅಭಿಮಾನದಿಂದ ಕಲಬುರಗಿಯ ಕೋರ್ಟ್ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿತ್ತು ಎಂದು ಪ್ರತಿಭಟನಾಕಾರರು ಹೇಳಿದರು. ಆದರೆ, ಪಾಲಿಕೆಯ ವಾಹನದಲ್ಲಿ ಮೂರ್ತಿಯನ್ನು ತೆರವು ಮಾಡಿ ತೆಗೆದುಕೊಂಡು ಹೋಗಿರುವುದು ಹಾಲುಮತಕ್ಕೆ ಮಾಡಿದ ಅನ್ಯಾಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಯೋಗ್ಯ, ನಾಲಾಯಕ್, ಮುಟ್ಠಾಳ, ಬಾಯಿ ತೆವಲಿಗೆ ಮಾತು : ಪ್ರತಾಪ್ ವಿರುದ್ಧ ಪ್ರದೀಪ್ ಆಕ್ರೋಶ
ಕೂಡಲೇ ಅದೇ ಜಾಗದಲ್ಲಿ ಸಿದ್ದರಾಮಯ್ಯ ಅವರ ಮೂರ್ತಿಯನ್ನು ಮರಳಿ ಪ್ರತಿಷ್ಠಾಪಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದನ್ನೂ ಓದಿ: ಕುತೂಹಲ ಮೂಡಿಸುವ ಗೌರಿ ಶಂಕರ್ ನಟನೆಯ ಕಾಮನ್ ಮ್ಯಾನ್ ಟ್ರೈಲರ್

