ವಿಜಯಪುರ: ನಗರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ನೇತೃತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆ ನಾಲ್ಕು ದಿನಗಳ ಬಳಿಕ ಅಂತ್ಯಗೊಂಡಿದೆ.
Advertisement
ವಕ್ಫ್ ವಿವಾದವನ್ನು ಖಂಡಿಸಿ ಯತ್ನಾಳ್, ಶೋಭಾ ಕರಂದ್ಲಾಜೆ (Shobha Karandlaje) ಅವರು ಬೆಂಬಲಿಗರ ಜೊತೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಇಂದು ಕೇಂದ್ರದ ಜೆಪಿಸಿ ಕಮಿಟಿ ಜಿಲ್ಲೆಗೆ ಬಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟವನ್ನು ಅಂತ್ಯಗೊಳಿಸಲಾಯಿತು.ಇದನ್ನೂ ಓದಿ: ಸಂಸತ್‌ನಲ್ಲಿ ಯಾಸಿನ್ ಬಗ್ಗೆ ಚರ್ಚಿಸಿ: ರಾಹುಲ್‌ಗೆ ಪತ್ನಿ ಮುಶಾಲ್ ಹುಸೈನ್ ಪತ್ರ
Advertisement
Advertisement
ವಿಜಯಪುರ (Vijayapura) ಜಿಲ್ಲೆಯಲ್ಲಿ ವಕ್ಫ್ ಅದಾಲತ್ ನಡೆಸಿದ್ದ ಸಚಿವ ಜಮೀರ್ ಅಹ್ಮದ್ ವಕ್ಫ್ ಆಸ್ತಿ ವಶಪಡಿಸಕೊಳ್ಳಲು ಡಿಸಿ ಅವರಿಗೆ ಮೌಖಿಕ ಆದೇಶ ನೀಡಿ ತೆರಳಿದ್ದರು. ಬಳಿಕ ರೈತರ ಪಹಣಿಯಲ್ಲಿ ರಾತ್ರೋರಾತ್ರಿ ವಕ್ಫ್ ಆಸ್ತಿ ಸೇರ್ಪಡೆಯಾಗಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಅಹೋರಾತ್ರಿ ಹೋರಾಟವನ್ನು ಡಿಸಿ ಕಚೇರಿ ಮುಂಭಾಗ ಆರಂಭಿಸಿದ್ದರು.
Advertisement
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಹತ್ತಿರ ವಕ್ಫ್ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಅನಿರ್ಧಿಷ್ಟ ಅವಧಿ ಅಹೋರಾತ್ರಿ ಧರಣಿಯ ನಾಲ್ಕನೇ ದಿನವಾದ ಇಂದು ಜೆಪಿಸಿ ಅಧ್ಯಕ್ಷರು ಹಾಗೂ ಸಂಸದರಾದ ಶ್ರೀ ಜಗದಂಬಿಕಾ ಪಾಲ್ ಜಿ ಅವರಿಗೆ ವಕ್ಫ್ ನ ನಿರಂಕುಶ ನಡೆಯನ್ನು ಸವಿವರವಾಗಿ ವಿವರಿಸಿ ವಿಜಯಪುರವೂ ಸೇರಿದಂತೆ ಕರ್ನಾಟಕದ ಹಲವು ಕಡೆಗಳಲ್ಲಿ ರೈತರ,… pic.twitter.com/69ZsaJ21C3
— Basanagouda R Patil (Yatnal) (@BasanagoudaBJP) November 7, 2024
ಆದರೆ ಕಳೆದ ಒಂದು ತಿಂಗಳ ಹಿಂದೆ ರೈತರಿಗೆ ನೋಟಿಸ್ ನೀಡಿದ್ದ ಪಹಣಿಯನ್ನು ಮಾತ್ರ ರಾಜ್ಯ ಸರ್ಕಾರ ವಾಪಸ್ ಪಡೆದಿತ್ತು. ಇದರಿಂದ ರೈತ ಸಂಘಟನೆಗಳು ಪ್ರತಿಭಟನೆ ವಾಪಸ್ ಪಡೆದಿದ್ದರು. ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಭಾರತ್ ಕಿಸಾನ್ ಸಂಘದ ನೇತೃತ್ವದಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜೀ ಸಾನಿಧ್ಯದಲ್ಲಿ ಹಲವಾರು ಮಠಾಧೀಶರು ಸೇರಿ ಬೃಹತ್ ರ‍್ಯಾಲಿ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆಗ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಪ್ರಾರಂಭಿಸಲಾಗಿತ್ತು.ಇದನ್ನೂ ಓದಿ: ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಕಾಣಿಸಿಕೊಂಡ ಮಸ್ಕ್ – ಟ್ರಂಪ್ ಪತ್ನಿ ಮೆಲಾನಿಯಾ ಮಿಸ್ಸಿಂಗ್
ನಾಲ್ಕನೇ ದಿನ ಇಂದು (ನ.7) ವಿಜಯಪುರಕ್ಕೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕಾ ಪಾಲ್, ಸಂಸದ ತೇಜಸ್ವಿ ಸೂರ್ಯ ತಂಡ ಭೇಟಿ ನೀಡಿ ರೈತರ, ಮಠಾಧೀಶರ, ಹೋರಾಟಗಾರ ಅಹವಾಲು ಕೇಳಿ ಮನವಿ ಸ್ವೀಕರಿಸಿದರು.
ಜಗದಂಬಿಕಾ ಪಾಲ್ (Jagadambika Pal) ಮಾತನಾಡಿ, ವಿಜಯಪುರದ ವಕ್ಫ್ ಹೋರಾಟದಿಂದ ವಕ್ಫ್ನ ಸಮಸ್ಯೆಗಳು ಗಮನಕ್ಕೆ ಬಂದಿವೆ. ಇದನ್ನು ಜೆಪಿಸಿ ಸಭೆಯಲ್ಲಿ ಇಟ್ಟು, ಡಿಸಿ ಅವರನ್ನು ಅಲ್ಲಿಗೆ ಕರೆಸುತ್ತೇವೆ. ರೈತರ ಮನವಿಗಳನ್ನು ಸಮಿತಿ ಪರಿಗಣಿಸುತ್ತದೆ. ವಕ್ಫ್ ಕಾಯ್ದೆ ತಿದ್ದುಪಡಿಗೆ ತರುತ್ತೇವೆ ಎಂದು ಪ್ರತಿಭಟನೆಯನ್ನು ಕೈಬಿಡಲು ಮನವಿ ಮಾಡಿದರು.
Submitted a memorandum to Shri @jagdambikapalmp, Chairman of the JPC, during his visit to our protest in Vijayapura against the unjust land Jihad by Waqf. He assured us that he will call farmer leaders and revenue officers to meet the JPC in Delhi, where our voices will be heard. pic.twitter.com/Lqy1MUiqZQ
— Shobha Karandlaje (@ShobhaBJP) November 7, 2024
ಇದೆ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣ ಮಾಡಬೇಕು. ರಾಷ್ಟ್ರೀಯ ಸ್ವತ್ತು ಎಂದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ರೈತರ ಉತಾರಿಯ ಯಾವುದೇ ಕಲಂನಲ್ಲಿ ವಕ್ಫ್ ಎಂದು ನಮೂದಾಗಬಾರದು. ವಕ್ಫ್ ಅದಾಲತ್ ರದ್ದು ಮಾಡಿ, ಇದನ್ನು ಎಲ್ಲಿಯೂ ನಡೆಸಬಾರದು ಎಂದು ಆಗ್ರಹಿಸಿದರು. 1974ರ ಹಾಗೂ ನಂತರದ ಎಲ್ಲ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಬೇಕು ಎಂದು ಹೀಗೆ ಹಲವು ಬೇಡಿಕೆಗಳನ್ನು ಜಿಪಿಸಿ ಮುಂದೆ ಮನವಿ ಮಾಡಿದರು.ಇದನ್ನೂ ಓದಿ: ಕೋಲ್ಕತ್ತಾ ರೇಪ್ ಕೇಸ್ – ಬಂಗಾಳದಿಂದ ಬೇರೆ ರಾಜ್ಯಕ್ಕೆ ಕೇಸ್ ವರ್ಗಾಯಿಸಲು ಸುಪ್ರೀಂ ನಕಾರ
ಒಟ್ಟಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ವಕ್ಫ್ ದಂಗಲ್ ದೆಹಲಿಗೂ ತಲುಪಿದ್ದು, ಜೆಪಿಸಿ ಕಮಿಟಿ ಜಿಲ್ಲೆಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ಈ ವಿಚಾರವಾಗಿ ವಕ್ಫ್ ಕಾಯ್ದೆಯಲ್ಲಿ ಅಮೂಲಾಗ್ರ ಬದಲಾವಣೆ ಜೆಪಿಸಿ ಕಮಿಟಿ ತರುತ್ತಾ ಎಂಬುವುದನ್ನು ಕಾದುನೋಡಬೇಕಿದೆ.