ಸುದೀಪ್-ಕುಮಾರ್ ಕಾಲ್‌ಶೀಟ್ ಕದನದ ನಡುವೆ ಚಂದ್ರಚೂಡ್‌ಗೆ ಸೂರಪ್ಪ ಬಾಬು ಕ್ಲಾಸ್

Public TV
3 Min Read
soorappa babu 1

ಸ್ಯಾಂಡಲ್‌ವುಡ್ ನಟ ಸುದೀಪ್- ನಿರ್ಮಾಪಕ ಕುಮಾರ್ (Kumar) ಕಾಲ್‌ಶೀಟ್ ಕದನ ಸಂಧಾನದ ಹಂತದಲ್ಲಿದೆ. ಜುಲೈ 21ರ ಶುಕ್ರವಾರದಿಂದ ಸುದೀಪ್- ಕುಮಾರ್ ಸಂಧಾನಕ್ಕೆ ರವಿಚಂದ್ರನ್ ಎಂಟ್ರಿಯಾಗಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ರವಿಚಂದ್ರನ್ ಪ್ರಕಟಿಸುವ ನಿರ್ಧಾರಕ್ಕೆ ಇಬ್ಬರು ಬದ್ಧರಾಗ್ತಾರಾ ಎಂಬ ಪ್ರಶ್ನೆಯ ನಡುವೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ‘ಕೋಟಿಗೊಬ್ಬ’ (Kotigobba) ನಿರ್ಮಾಪಕ ಸೂರಪ್ಪ ಬಾಬು (Soorappa Babu) ಅವರು ಪ್ರತಿಕಾಗೋಷ್ಠಿ ನಡೆಸಿ, ಚಂದ್ರಚೂಡ್ ಅವರ ವಿರುದ್ಧ ಕಿಡಿಕಾರಿದ್ದಾರೆ.  ಇದನ್ನೂ ಓದಿ:ಮನೀಷ್ ಮಲ್ಹೋತ್ರಾ ನಿರ್ದೇಶನದಲ್ಲಿ ಮೀನಾ ಕುಮಾರಿ ಬಯೋಪಿಕ್- ಕೃತಿ ಸನೋನ್ ನಾಯಕಿ?

N.Kumar and sudeep

ಸುದೀಪ್ ವಿರುದ್ಧ ಕುಮಾರ್ ಮಾಡಿರುವ ಆರೋಪದ ಹಿಂದೆ ನಿರ್ಮಾಪಕ ಸೂರಪ್ಪ ಬಾಬು ಕೈವಾಡವಿದೆ ನಟ ಚಂದ್ರಚೂಡ್‌ ಅವರು ಈ ಹಿಂದೆ ಹೇಳಿದ್ದರು. ಸೂರಪ್ಪ ಬಾಬು ಒಬ್ಬ ಶಿಖಂಡಿ. ಕೋಟಿಗೊಬ್ಬ 2 ಸಿನಿಮಾದ ಸಂಭಾವನೆ 2.50 ಕೋಟಿ ರೂಪಾಯಿ, ಜಾಕ್ ಮಂಜು ಅವರಿಗೆ ಒಂದೂವರೆ ಕೋಟಿ ರೂಪಾಯಿ, ಕೋಟಿಗೊಬ್ಬ 3 ಸಿನಿಮಾದ 3.5 ಕೋಟಿ ಸೇರಿ ಒಟ್ಟು ಏಳು ಕೋಟಿ ಬಾಕಿ ಹಣವನ್ನು ಸೂರಪ್ಪ ಬಾಬು ಕೊಡಬೇಕಿದೆ ಎಂದು ಚಕ್ರವರ್ತಿ ಚಂದ್ರಚೂಡ್ ಈ ಹಿಂದೆ ಆರೋಪಿಸಿದ್ದರು. ಕೋಟಿಗೊಬ್ಬ 3 ಸಿನಿಮಾ ರಿಲೀಸ್ ತಡವಾದಾಗ ಸೂರಪ್ಪ ಅವರ ಮಗಳು ಸುದೀಪ್‌ಗೆ ವಿನಂತಿಸಿದ್ದರು. ಅಂದು ನಾನು ಜೊತೆ ಇದ್ದೆ ಎಂದು ಚಂದ್ರಚೂಡ್ ಅವರು ಮಾತನಾಡಿದ್ದರು. ಈ ವಿಚಾರಕ್ಕೆ ನಿರ್ಮಾಪಕ ಸೂರಪ್ಪ ಬಾಬು ಪ್ರತಿಕ್ರಿಯೆ ನೀಡಿದ್ದಾರೆ.

ಚಂದ್ರ ಚೂಡ್ (Chandrachud) ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಹಕ್ಕಿಲ್ಲದೇ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ನಾನು ಉತ್ತರ ಕೊಡಬೇಕಾಗಿರೋದು ನನಗೆ ಹಣ ಕೊಟ್ಟವರಿಗೆ ಹಾಗೂ ನನ್ನ ಮನೆಯವರಿಗೆ ಮಾತ್ರ. ನೀವು ಸತ್ಯ ಹರಿಶ್ಚಂದ್ರನ ತುಂಡು ಅಂತ ಅಂದ್ಕೊಂಡಿದ್ದಾರಾ ಅಂತಾ ಚಂದ್ರಚೂಡ್‌ಗೆ ಸೂರಪ್ಪ ಬಾಬು ಟಾಂಗ್ ಕೊಟ್ಟಿದ್ದಾರೆ.

soorappa babu

ನನ್ನ ಶಿಖಂಡಿ ಅಂತ ಚಂದ್ರಚೂಡ್ ಹೇಳ್ತಿದ್ದಾರೆ. ನನಗೆ ಹೆಂಡತಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ನಾನು 34 ವರ್ಷ ಆಯ್ತು ಚಿತ್ರರಂಗಕ್ಕೆ ಬಂದು. ಚಿತ್ರರಂಗಕ್ಕೆ ಬರುವ ಮುಂಚೆ ನಾನು ಕಾಫಿ ಲೋಟ ತೊಳೀತಿದ್ದೆ, ಈಗ ಕೋಟಿ ಕೋಟಿ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡ್ತಿದ್ದಿನಿ ಅಂತ ಹೆಮ್ಮೆ ಇದೆ. ವೀರ ಸ್ವಾಮಿ ಅವರು ಮೊದಲು ಒಂದು ಆಫೀಸಲ್ಲಿ ಕೆಲಸ ಮಾಡ್ತಿದ್ರು. ನಂತರ ಅವರೂ ದೊಡ್ಡ ನಿರ್ಮಾಪಕರಾಗಿದ್ರು. ಹಾಗೆ ನಾವೂ ಬೆಳೆದು ಬಂದ ದಾರಿ ಇತ್ತು.

ಕುಮಾರ್ ಅವರ ಆರೋಪದ ಹಿಂದೆ ನಾನಿದ್ದೀನಿ ಅಂತಾ ಸುಳ್ಳು ಆರೋಪ ಮಾಡ್ತಿದ್ದಾರೆ. ಎಲ್ಲೋ ಕುತ್ಕೊಂಡು ಮನೆ ಹಾಳು ಮಾಡ್ತೀರಾ. ಕುಮಾರ್ ಅವರು ನನ್ನ ಸ್ನೇಹಿತ. 8 ತಿಂಗಳು ಅವೈಡ್ ಮಾಡಿದ್ದೆ, ಕುಮಾರ್ 2 ಸಲ ಸುಸೈಡ್ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಅವರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ಯಾರಿಗಾದ್ರು ಗೊತ್ತಾ? ದೇವರ ಮೇಲೆ ಭಾರ ಹಾಕಿ ಎಲ್ಲಾ ಸರಿ ಹೋಗುತ್ತೆ ಅಂತಾ ಹೇಳಿದ್ದೆ, ಇಂಡಸ್ಟ್ರಿಯಲ್ಲಿ ಈಗಾಗಲೇ ಸಿನಿಮಾ ಇಲ್ಲದೇ ಸಾಯುತ್ತಾ ಇದ್ದೀವಿ? ಅದನ್ನ ಮತ್ತಷ್ಟು ಹಾಳು ಮಾಡಬೇಡಿ ಎಂದು ಸೂರಪ್ಪ ಬಾಬು ಹೇಳಿದ್ದಾರೆ. ಸುದೀಪ್ ಅವರು ನನ್ನ ಬಗ್ಗೆ ಏನೂ ಮಾತನಾಡಿಲ್ಲ. ಆದರೆ ನಮ್ಮ ಮಧ್ಯೆ ತಂದು ಇಡುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ:ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್- ತೆಲುಗು ನಟಿಯರ ಬಗ್ಗೆ ಅಲ್ಲು ಅರ್ಜುನ್ ಬೇಸರ

ಇನ್ನೂ ಕುಮಾರ್- ಸುದೀಪ್ (Sudeep) ಸಂಧಾನದ ಬಗ್ಗೆ ಮೀಟಿಂಗ್ ನಡೆದಿದೆ. ಕಾಲ್‌ಶೀಟ್ ಕದನದಲ್ಲಿ ಇಬ್ಬರ ದಾಖಲೆಗಳನ್ನ ರವಿಚಂದ್ರನ್ ಅವರು ಪರಿಶೀಲನೆ ನಡೆಸಿದ್ದಾರೆ. ಕಳೆದ 3 ದಿನಗಳ ಸತತ ಮೀಟಿಂಗ್ ನಂತರ ರವಿಚಂದ್ರನ್ (Ravichandran) ಅವರ ಮಾತಿಗೆ ಸುದೀಪ್- ಕುಮಾರ್ ಇಬ್ಬರೂ ಆಲ್‌ಮೋಸ್ಟ್ ಓಕೆ ಅಂದಿದ್ದಾರೆ ಎಂಬುದು ಇನ್‌ಸೈಡ್ ಸ್ಟೋರಿ.

Share This Article