ಸುದೀಪ್ ಜೊತೆ ಕಾಣಿಸಿಕೊಂಡ ನಿರ್ಮಾಪಕ ಸಂದೇಶ್

Public TV
1 Min Read
Sudeep with N. Sandesh

ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ ನಿರ್ಮಾಪಕ ಎನ್.ಸಂದೇಶ್ (N. Sandesh). ಭೇಟಿಯ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಭೇಟಿಗೆ ನಾನಾ ಅರ್ಥವನ್ನು ಕಲ್ಪಿಸಿಕೊಳ್ಳಲಾಗುತ್ತಿದೆ. ಸುದೀಪ್ ಅಭಿಮಾನಿಗಳಂತೂ ಹೊಸ ಸಿನಿಮಾದ ಯೋಚನೆ ಏನಾದರೂ ಇದೆಯಾ ಎಂದು ಕೇಳುತ್ತಿದ್ದಾರೆ.

sudeep

ಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮಹಾಬಲಿಪುರಂನಲ್ಲಿ (Mahabalipuram) ನಡೆಯುತ್ತಿದೆ. ಸಿನಿಮಾದ ಪ್ರಮುಖ ಸಾಹಸ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿದ್ದು, ಈ ಸನ್ನಿವೇಶದ ಶೂಟಿಂಗ್ ನಲ್ಲಿ ಕಿಚ್ಚ ಭಾಗಿಯಾಗಿದ್ದಾರೆ. ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಇದಾದ ನಂತರ ಕಿಚ್ಚ ಯಾವ ಸಿನಿಮಾಗೆ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಹಾಗಾಗಿ ಸಂದೇಶ್ ಭೇಟಿ ಮಹತ್ವ ಪಡೆದುಕೊಂಡಿದೆ.

sudeep 1

‘ಮ್ಯಾಕ್ಸ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ತಮಿಳು ನಾಡಿನ (Tamil Nadu) ಮಹಾಬಲಿಪುರಂನಲ್ಲಿ ನಡೆಯುತ್ತಿದೆ. ಕಿಚ್ಚ ಸುದೀಪ್ ಸೇರಿದಂತೆ ಹಲವು ಕಲಾವಿದರು ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಮಾಹಿತಿಯನ್ನೂ ಸ್ವತಃ ಕಲಾವಿದರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

ಮೊನ್ನೆಯಷ್ಟೇ ಸುದೀಪ್ (Sudeep) ಮ್ಯಾಕ್ಸ್ ಚಿತ್ರದ ಬಗ್ಗೆ ಹೊಸ ಅಪ್ ಡೇಟ್ ನೀಡಿದ್ದರು. 15 ದಿನಗಳ ಕಾಲ ಶೂಟಿಂಗ್ ಮುಗಿಸಿದರೆ, ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗತ್ತೆ. ನಂತರ ಮೇ ತಿಂಗಳಿನಲ್ಲಿ ಚಿತ್ರ ರಿಲೀಸ್ (Release) ಆಗಬಹುದು ಅಂದಿದ್ದರು.

Share This Article