ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೇಸ್‌; ಪರಪ್ಪನ ಅಗ್ರಹಾರ ಜೈಲು ಸೇರಿದ ನಾಶೀಪುಡಿ

Public TV
1 Min Read
Nashipudi pakistan zindabad

ಬೆಂಗಳೂರು: ವಿಧಾನಸೌಧ ಅವರಣದಲ್ಲಿ ಪಾಕಿಸ್ತಾನ ಜಿಂದಾಬಾದ್ (Pakistan Zindabad) ಘೋಷಣೆ ಕೂಗಿದ ಪ್ರಕರಣದಲ್ಲಿ ಆರೋಪಿ ನಾಶೀಪುಡಿಯನ್ನ ವಿಧಾನಸೌಧ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳಿಸಿಕೊಟ್ಟಿದ್ದಾರೆ.

ಆರೋಪಿ ನಾಶೀಪುಡಿಯನ್ನ (Mohammed Shafi Nashipudi) ಎರಡನೇ ಬಾರಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದರು. ಮೊದಲನೇ ಬಾರಿ ಪಾಕ್ ಪರ ಘೋಷಣೆ ಕೂಗಿದ್ದ ಕಾರಣ ಪ್ರಕರಣ ಸಂಬಂದ ವಿಧಾನಸೌಧ ಪೊಲೀಸರು ಮುನಾವರ್ ಅಹ್ಮದ್‌, ಇಲ್ತಿಯಾಸ್, ನಾಶೀಪುಡಿಯನ್ನ ಬಂಧಿಸಿ ಮೂವರನ್ನ ಎರಡು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ಮಾಡಿದ್ದರು. ನಿನ್ನೆ ಇಲ್ತಿಯಾಸ್ ಹಾಗೂ ಮುನಾವರ್ ಅಹ್ಮದ್‌ನನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಬಿಡಲಾಗಿತ್ತು. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕುರಿತು ಕ್ಲೀನ್‌ ಚಿಟ್‌ ಕೊಟ್ಟ ಪ್ರಿಯಾಂಕ್‌ ಖರ್ಗೆ ಕ್ಷಮೆಯಾಚಿಸ್ಬೇಕು: ಸಿ.ಟಿ ರವಿ ಆಗ್ರಹ

Pakistan Zindabad Naseer Hussain

ಪ್ರಕರಣದ ಎ1 ಆರೋಪಿ ನಾಶೀಪುಡಿಯನ್ನ ಹೆಚ್ಚಿನ ವಿಚಾರಣೆಗೆ ಅವಶ್ಯಕತೆ ಇದೇ ಎನ್ನುವ ಕಾರಣಕ್ಕೆ ಒಂದು ದಿನ ಹೆಚ್ಚುವರಿಯಾಗಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದರು. ಘಟನೆ ಸಂಬಂದ ಆರೋಪಿ ನಾಶೀಪುಡಿಯ ವಿಚಾರಣೆ ಮುಗಿಸಿ ಇಂದು 12 ಗಂಟೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

ವಿಧಾನಸೌಧ ಪೊಲೀಸರ ತನಿಖೆ ಪೂರ್ಣವಾಗಿದ್ದರಿಂದ ಕಸ್ಟಡಿಗೆ ಕೇಳದ ಕಾರಣ ಪ್ರಕರಣದ ಎ1 ಆರೋಪಿ ನಾಶೀಪುಡಿಯನ್ನ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದು ನಿಜ : ಉನ್ನತ ಪೊಲೀಸ್‌ ಮೂಲಗಳು

Share This Article