ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿರುವ ಸಂಬಂಧ ನಿಮ್ಮದೇ ಸರ್ಕಾರದ ಇಲಾಖೆ ಮೂವರನ್ನು ಬಂಧಿಸಿದೆ. ಆದರೆ ನೀವು ಕ್ಲೀನ್ ಚಿಟ್ ಕೊಟ್ಟಿದ್ರಿ. ಹೀಗಾಗಿ ನೀವು ಸಾರ್ವಜನಿಕ ಕ್ಷಮೆಯಾಚನೆ ಮೂಲಕ ನಿಮ್ಮ ಗೌರವ ಹೆಚ್ಚಿಸಿಕೊಳ್ಳಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ಸಿ.ಟಿ. ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.
Advertisement
ಪಾಕ್ ಪರ ಘೋಷಣೆ ಆರೋಪದಡಿ ಮೂವರ ಬಂಧನ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನ್ಮಾನ್ಯ ಪ್ರಿಯಾಂಕ್ ಖರ್ಗೆ (Priyank Kharge) ಅವರೇ ತನಿಖಾಧಿಕಾರಿಯಂತೆ ಹೇಳಿಕೆ ಕೊಟ್ಟಿದ್ದರು. ಇಂದು ಖಾಸಗಿ FSL ವರದಿ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ಕ್ಲೀನ್ ಚಿಟ್ ಕೊಡಲು ಸಾಧ್ಯವಾಗಲಿಲ್ಲ ಅಂತಾ ಅನ್ನಿಸುತ್ತದೆ. ಸಮಗ್ರ ತನಿಖೆಗೆ ಪೊಲೀಸರನ್ನು ಒತ್ತಾಯಿಸುತ್ತೇನೆ ಎಂದರು. ಇದನ್ನೂ ಓದಿ: ಆರೋಪಿಗಳ ಪತ್ತೆಗೆ ಭಾರೀ ಕಸರತ್ತು – 15 ಜನರ ಧ್ವನಿ ಪರೀಕ್ಷೆ ನಡೆಸಿದ್ದ ಎಫ್‌ಎಸ್‌ಎಲ್
Advertisement
Advertisement
ಕಾಂಗ್ರೆಸ್ (Congress) ಗೆಲುವನ್ನು ಪಾಕಿಸ್ತಾನದ (Pro-Pakistan Slogan) ಜೊತೆ ಯಾಕೆ ಸಮೀಕರಿಸಿದರು?, ಇದರ ಹಿಂದೆ ಇರುವ ಸಂಘಟನೆ ಯಾವುದು?, ಕೂಗಲು ಪ್ರಚೋದನೆ ಎಲ್ಲಿಂದ ಬಂತು?, ಭಯೋತ್ಪಾದನೆಗೆ ಬೀಜಾಂಕುರ ಆಗುವುದೇ ಮಾನಸಿಕತೆಯಿಂದ, ಮಾನಸಿಕ ಒಲವು ವ್ಯಕ್ತಪಡಿಸುತ್ತಾ ಭಯೋತ್ಪಾದಕರಾಗಿ ಬದಲಾಗುತ್ತಾರೆ. ಮದರಸಾಗಳಿಂದ ತಾಲಿಬಾನ್ ಸೃಷ್ಟಿಯಾಗುತ್ತಿದೆ. ಪಾಕಿಸ್ತಾನ ಪರ ಕೂಗಲು ಎಲ್ಲಿಂದ ಪ್ರಚೋದನೆ ಸಿಕ್ಕಿತು ಎಂಬ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
Advertisement
ಬೇರು ಸಹಿತ ಕಿತ್ತು ಹಾಕಿದಿದ್ರೆ ಸರಣಿ ಸ್ಫೋಟಗಳೂ ಪ್ರಾರಂಭವಾಗಬಹುದು. ದೇಶದ್ರೋಹಿಗಳು ರಕ್ತ ಬೀಜಾಸುರನಂತೆ ಬೆಳೆಯುವ ಸಾಧ್ಯತೆಗಳಿವೆ. ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಈಗೇನು ಹೇಳುತ್ತೀರಿ?. ನೀವು ಸಾರ್ವಜನಿಕ ಕ್ಷಮೆಯಾಚಿಸಬೇಕು. ಎಲ್ಲದಕ್ಕೂ ತನಿಖಾಧಿಕಾರಿಯಾಗುವ ಆತುರದ ಕ್ರಮ ಒಳ್ಳೆಯದಲ್ಲ. ನಿಮ್ಮದೇ ಸರ್ಕಾರದ ಇಲಾಖೆ ಇಂದು ಮೂವರನ್ನು ಬಂಧಿಸಿದೆ, ಆದರೆ ನೀವು ಕ್ಲೀನ್ ಚಿಟ್ ಕೊಟ್ಟಿದ್ರಿ. ಈ ಹಿನ್ನೆಲೆಯಲ್ಲಿ ನೀವು ಸಾರ್ವಜನಿಕವಾಗಿ ಕ್ಷಮೆ ಕೇಳುವ ಮೂಲಕ ನಿಮ್ಮ ಗೌರವ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮಾಧ್ಯಮದಲ್ಲಿ ಪ್ರಸಾರವಾಗಿದ್ದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯಿತು. ಪತ್ರಕರ್ತರನ್ನೇ ಬಳಸಿ ಮುಚ್ಚಿ ಹಾಕುವ ಪ್ರಯತ್ನ ನಡೆಸಿದರು. ಹಾವೇರಿ ಬಿಜೆಪಿ ಘಟಕ ನಾಶಿಪುಡಿ ಮೇಲೆ ದೂರು ನೀಡಿತ್ತು. ಮುಚ್ಚಿ ಹಾಕುವ ಪ್ರಯತ್ನದ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು. ಹಮಾಸ್ ಪರವಾಗಿ ಇಲ್ಲಿ ಪ್ರತಿಭಟನೆ ಆದಾಗ ಅವರ ಮೇಲೆ ಯಾವುದೇ ಕೇಸ್ ಆಗಲಿಲ್ಲ. ಇಂದು ಬಿಜೆಪಿ ತಿರಂಗಾ ಯಾತ್ರೆಗೆ ಅನುಮತಿ ಕೊಡಲಿಲ್ಲ. ಇದೆಲ್ಲವೂ ಸರ್ಕಾರದ ಮೇಲೆ ಅಪನಂಬಿಕೆ ಹುಟ್ಟು ಹಾಕುತ್ತದೆ ಎಂದು ಹೇಳಿದರು.
ಎಫ್ ಎಸ್ ಎಲ್ ವರದಿ ದೊಡ್ಡ ಕಬ್ಬಿಣದ ಕಡಲೆ ಅಲ್ಲ. ನಾಸೀರ್ ಹುಸೇನ್ ವರ್ತನೆಯಲ್ಲಿ ಇಂತಹ ಘಟನೆ ಆಗಬಾರದಿತ್ತು ಎಂಬ ನೋವು ವ್ಯಕ್ತವಾಗಲಿಲ್ಲ. ಪಾಕಿಸ್ತಾನದ ಜೊತೆ ಕಾಂಗ್ರೆಸ್ ಗೆಲುವನ್ನು ಸಮೀಕರಿಸಿದ್ದು ಯಾಕೆ?, ಕಾಂಗ್ರೆಸ್ ಗೆದ್ದಾಗ ಪಾಕಿಸ್ತಾನ ಬೆಂಬಲಿಗರಿಗೆಲ್ಲಾ ಉತ್ಸಾಹ ಬಂದುಬಿಡುತ್ತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು.