ಬೆಂಗಳೂರು: ಪುನೇರಿ ಪಲ್ಟನ್ ವಿರುದ್ಧದ ಪಂದ್ಯದಲ್ಲಿ ಕಡೆಯ 40 ಸೆಕೆಂಡ್‍ಗಳಲ್ಲಿ ಮಾಡಿದ ತಪ್ಪಿಗೆ ಬೆಂಗಳೂರು ಬುಲ್ಸ್ 35-37 ಪಾಯಿಂಟ್‍ಗಳಿಂದ ಸೋಲು ಕಂಡಿದೆ.
Advertisement
ಅರಂಭದಿಂದಲೂ ತೀವ್ರ ಪೈಪೋಟಿಯಿಂದ ಕೂಡಿದ ಕಾದಾಟ ಕಡೆಯ ನಿಮಿಷದ ವರೆಗೂ ಮುಂದುವರಿಯಿತು. ಕೊನೆಯ 40 ಸೆಕೆಂಡ್ ಇದ್ದಂತಹ ವೇಳೆ ಪವನ್ ಶೆರವತ್ ಮಾಡಿದ ಅನಗತ್ಯ ಡ್ಯಾಶ್‍ನಿಂದ ಅಂಕ ಪಡೆದ ಪುನೇರಿ ಪಲ್ಟನ್ 2 ಅಂಕಗಳ ರೋಚಕ ಜಯ ಸಾಧಿಸಿತು. ಇದನ್ನೂ ಓದಿ: ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ – ಶಾರೂಕ್ ಖಾನ್, ಆವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್ ಪ್ರಿಯರು
Advertisement
Cometh the #SuperhitPanga, cometh Mo-Hit with the nail-biting Panga ????
Puneri Paltan pip the Bulls to stay in the playoffs race ????#BLRvPUN #VIVOProKabaddi #SuperhitPanga @PuneriPaltan pic.twitter.com/ZY9abPSFeE
— ProKabaddi (@ProKabaddi) January 22, 2022
Advertisement
ಬುಲ್ಸ್ ಪರ 5 ರೈಡ್, 5 ಬೋನಸ್ ಅಂಕ ಸಹಿತ ಸೂಪರ್ 10 ಪಾಯಿಂಟ್ ಪಡೆದ ಪವನ್ ಕೊನೆಯ ಗಳಿಗೆಯಲ್ಲಿ ಎಡವಿದರು. ಅತ್ತ ಎದುರಾಳಿ ತಂಡದ ಮೋಹಿತ್ ಗೋಯಟ್ 10 ರೈಡ್, 3 ಟೇಕಲ್ ಸಹಿತ 13 ಅಂಕ ಸಂಪಾದಿಸಿ ಪಲ್ಟನ್ ಗೆಲುವಿನ ರೂವಾರಿಯಾದರು. ಬೆಂಗಳೂರು 24 ರೈಡ್, 8 ಟೇಕಲ್, 3 ಇತರೆ ಸಹಿತ 35 ಅಂಕ ಪಡೆದರೆ, ಪಲ್ಟನ್ 20 ರೈಡ್, 13 ಟೇಕಲ್, 4 ಆಲೌಟ್ ಸಹಿತ 37 ಪಾಯಿಂಟ್ ಪಡೆದು 2 ಅಂಕಗಳ ಜಯ ಸಾಧಿಸಿತು. ಇದನ್ನೂ ಓದಿ: ಪಂತ್ ಸಿಕ್ಸರ್‌ಗೆ ಕೊಹ್ಲಿ ಡ್ಯಾನ್ಸ್ – ವೀಡಿಯೋ ವೈರಲ್
Advertisement