ಲಕ್ನೋ: ಅಕ್ಟೋಬರ್ 3 ರಂದು ಲಖೀಂಪುರ್ ಖೇರಿಯಲ್ಲಿ ನಡೆದ ಹಿಂಸಚಾರದಲ್ಲಿ ಮೃತಪಟ್ಟಿದ್ದ, ನಾಲ್ವರು ರೈತರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಅಂತಿಮ ಗೌರವ ಸಲ್ಲಿಸಿದ್ದಾರೆ.
ಲಿಖೀಂಪುರ್ ಖೇರಿಯಲ್ಲಿ ಇಂದು ಆಂಟಿಮ್ ಅರ್ದಾಸ್ (ಕೊನೆಯ ಪ್ರಾರ್ಥನೆ)ಯನ್ನು ಆಯೋಜಿಸಲಾಗಿತ್ತು. ಮೃತ ರೈತರಿಗೆ ಗೌರವ ಸಲ್ಲಿಸಲು ಪಂಜಾಬ್ ಹರಿಯಾಣ ಉತ್ತರಾಖಂಡನಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. ಇದೇ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗವಹಿಸಿದ್ದರು. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ
Advertisement
Congress leader Priyanka Gandhi Vadra attends the ‘antim ardas’ of farmers who were killed in the October 3 Lakhimpur Kheri violence. pic.twitter.com/4TCpahQCOV
— ANI UP (@ANINewsUP) October 12, 2021
Advertisement
ಅಕ್ಟೋಬರ್ 3 ರಂದು, ಲಖಿಂಪುರ್ ಖೇರಿಯ ಟಿಕೊನಿಯಾದಲ್ಲಿ ಪ್ರತಿಭಟನಾ ನಿರತ ರೈತರ ಗುಂಪಿನ ಮೇಲೆ ಬೆಂಗಾವಲು ವಾಹನಗಳನ್ನು ಹರಿಸಲಾಗಿತ್ತು. ಈ ಘಟನೆಯಲ್ಲಿ ನಾಲ್ವರು ರೈತರು ಸಾವನ್ನಪ್ಪಿದ್ದರು. ರೈತರ ಮೇಲೆ ಹರಿಸಿದ ವಾಹನವನ್ನು ಕೇಂದ್ರ ಗೃಹ ಸಚಿವಲಾಯದ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಪುತ್ರ ಆಶಿತ್ ಮಿಶ್ರಾ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಮಗನ ಆರೋಗ್ಯ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟ ಶಾರೂಖ್ ದಂಪತಿ!
Advertisement
Congress General Secretary Priyanka Gandhi Vadra takes part in the ‘antim ardas’ of the farmers who were killed in Lakhimpur Kheri violence.
(Pics source: UP Congress Twitter account) pic.twitter.com/1bEhHyD5Bm
— ANI UP (@ANINewsUP) October 12, 2021
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಶಿಶ್ ಮಿಶ್ರಾರನ್ನ ಬಂಧಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 14 ದಿನಗಳ ನ್ಯಾಯಂಗ ಬಂಧನಕ್ಕೆ ನೀಡಿರುವ ನಡುವೆಯೇ ಕಸ್ಟಡಿಗೆ ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದು, ಸುಪ್ರೀಂಕೋರ್ಟ್ ವಿಚಾರಣೆ ಬಳಿಕ ತೀವ್ರ ಗಂಭೀರತೆ ಪಡೆದುಕೊಂಡಿದೆ. ಇನ್ನು ಘಟನೆ ಸಂಬಂಧ ವಾಸ್ತವ ವರದಿಯನ್ನು ಸಿದ್ದಪಡಿಸಿರುವ ಕಾಂಗ್ರೆಸ್ ನಾಳೆ ರಾಷ್ಟ್ರಪತಿ ರಾಮನಾಥ್ ಕೊವೀಂದ್ ಅವರಿಗೆ ಸಲ್ಲಿಸಲಿದೆ. ಇಂದು ಲಖೀಂಪುರ್ ಖೇರಿಗೆ ಪ್ರಿಯಾಂಕಾ ಗಾಂಧಿ ಭಾರಿ ಭದ್ರತೆ ನಡುವೆ ತೆರಳಿ ಮೃತ ರೈತರಿಗೆ ಗೌರವ ಸಲ್ಲಿಸಿದ್ದಾರೆ.