ಜೈಪುರ: ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi), ರಾಬರ್ಟ್ ವಾದ್ರಾ (Robert Vadra) ಹಾಗೂ ಅವರ ಪುತ್ರಿ ಪಾಲ್ಗೋಂಡಿದ್ದರು.
ರಾಜಸ್ಥಾನದ ಬುಂದಿ ಜಿಲ್ಲೆಯಿಂದ ಭಾರತ್ ಜೋಡೋ ಯಾತ್ರೆ (Bharat Jodo Yatra) ಪುನಾರಂಭಗೊಂಡಿದ್ದು, ಈ ವೇಳೆ ನೂರಾರು ಜನರು ಭಾಗವಹಿಸಿದ್ದರು. ಅಷ್ಟೇ ಅಲ್ಲದೇ ಈ ದಿನವನ್ನು ಕಾಂಗ್ರೆಸ್‍ನಿಂದ ಮಹಿಳಾ ಸಬಲೀಕರಣದ ದಿನವಾಗಿ ಆಚರಿಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಹಿಳೆಯರು ಸೇರಿದಂತೆ ಹೆಚ್ಚಿನ ಜನರು ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಕೋಟಾ-ಲಾಲ್ಸೋಟ್ ಮೆಗಾ ಹೆದ್ದಾರಿಯಲ್ಲಿ ಬಾಬಾಯಿಯಿಂದ ಸ್ವೈಮಾಧೋಪುರ ಜಿಲ್ಲೆಯ ಪಿಪಾಲ್ವಾಡಕ್ಕೆ ಹೆಜ್ಜೆ ಹಾಕಿದರು.
Advertisement
Advertisement
ಸೆ. 7ರಂದು ಆರಂಭವಾದ ಭಾರತ್ ಜೋಡೋ ಯಾತ್ರೆಯ 96ನೇ ದಿನದಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಬಾಬಾಯಿ ಗ್ರಾಮದ ತೇಜಾಜಿ ಮಹಾರಾಜ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ನಾರಿ ಶಕ್ತಿ ಪಾದಯಾತ್ರೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಮತ್ತು ಮೆರವಣಿಗೆಯಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯ ಮಹಿಳೆಯರು ರಸ್ತೆಬದಿಯಲ್ಲಿ ನಿಂತಿದ್ದರು. ಇದನ್ನೂ ಓದಿ: ಮುದ್ದಿನ ಸಾಕು ನಾಯಿಗೆ ಸೀಮಂತ ಮಾಡಿದ ಮಹಿಳೆ – ಹೃದಯಸ್ಪರ್ಶಿ ವೀಡಿಯೋ ವೈರಲ್
Advertisement
आज #BharatJodoYatra महिला शक्ति के नाम रही… pic.twitter.com/3ryBfGs0r1
— Congress (@INCIndia) December 12, 2022
Advertisement
ಬಿಜೆವೈ ರಾಜ್ಯ ಸಹ-ಸಂಯೋಜಕ ಕಪಿಲ್ ಯಾದವ್ ಮಾತನಾಡಿ, ಬಿಜೆವೈಯ 96ನೇ ದಿನವು ಮಹಿಳಾ ಸಬಲೀಕರಣವನ್ನು ಮೀಸಲಿಟ್ಟಿದೆ. ಅದಕ್ಕಾಗಿಯೇ ಈ ದಿನವನ್ನು ನಾರಿ ಶಕ್ತಿ ಪಾದ ಯಾತ್ರೆ ಎಂದು ಕರೆಯಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಅಧಿಕಾರಿಗೆ ಹಲ್ಲೆ ನಡೆಸಲು ಮಚ್ಚು ಹಿಡಿದು ಬಂದ ಮಹಿಳೆ