ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್ನಲ್ಲೂ ಬ್ಯುಸಿಯಿರೋ ನಟಿ, ಕೈ ತುಂಬಾ ಆಫರ್ಸ್ಗಳ ಮಧ್ಯೆ ಕಥೆಯ ಆಯ್ಕೆಯ ವಿಚಾರದಲ್ಲೂ ಸಖತ್ ಚ್ಯೂಸಿ ಆಗಿದ್ದಾರೆ. ಇನ್ನು ಈಗ ಮಗುವಿನ ಪೋಷಣೆಯಲ್ಲಿ ಬ್ಯುಸಿಯಿರೋ ಪ್ರಿಯಾಂಕಾ, ಕೊಂಚ ಬಿಡುವು ಮಾಡಿಕೊಂಡು ಫಿಲ್ಮಂಫೇರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿರೋ ಪ್ರಿಯಾಂಕಾ ಫೋಟೋ ಸಖತ್ ವೈರಲ್ ಆಗುತ್ತಿದೆ.
ಹಿಂದಿ ಚಿತ್ರರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಪ್ರಿಯಾಂಕ ಚೋಪ್ರಾ, ಬೇಡಿಕೆ ಇರೋವಾಗಲೇ ನಿಕ್ ಜೊನಸ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮನೆಗೆ ಮುದ್ದು ಮಗಳ ಆಗಮನದ ನಂತರ ಪೋಷಣೆಯಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕ ಈಗ ತುಸು ಬಿಡುವು ಮಾಡಿಕೊಂಡು ಫಿಲ್ಮಂಫೇರ್ನಲ್ಲಿ ಭಾಗಿಯಾಗಿದ್ದಾರೆ. ಈ ಸಮಾರಂಭದಲ್ಲಿ ಡಿಫರೆಂಟ್ ಸ್ಟೈಲ್ನಿಂದ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಗಲಿಕೆಗೆ ಎರಡು ವರ್ಷ : ಕುಟುಂಬದಿಂದ ಇಂದು ವಿಶೇಷ ಪೂಜೆ
ಫಿಲ್ಮಂಫೇರ್ನಲ್ಲಿ, ಗೋಲ್ಡನ್ ಕಲರ್ ಗೌನ್ನಲ್ಲಿ ಮಿರ ಮಿರ ಅಂತಾ ಪ್ರಿಯಾಂಕಾ ಚೋಪ್ರಾ ಮಿಂಚಿದ್ದಾರೆ. ಅಮೆರಿಕನ್ ನಟಿಯರಾದ ಆನ್ನೆ ಹ್ಯಾಥ್ವೇ ಮತ್ತು ಲೀಸಾ ಜತೆ ಒಳ್ಳೆಯ ಸಮಯವನ್ನು ಕಳೆದಿದ್ದಾರೆ. ಸದ್ಯ ಪ್ರಿಯಾಂಕ ಅವರ ನಯಾ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.