ಉಡುಪಿ: ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರ ಆರೋಪಗಳಿಗೆ ಇಂಧನ ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ. ಅಂದು ಬಿಟ್ ಕಾಯಿನ್, ಇಂದು ಪಿಎಸ್‌ಐ. ಪ್ರಿಯಾಂಕ್ ಖರ್ಗೆಗೆ ಕೇವಲ ಪ್ರಚಾರದ ಹುಚ್ಚು ಎಂದಿದ್ದಾರೆ.
ಪ್ರಿಯಾಂಕ್ ಗಂಭೀರ ಆರೋಪಗಳನ್ನು ಯಾವತ್ತೂ ಮಾಡಿಲ್ಲ. ಬಿಟ್‌ಕಾಯಿನ್ ವಿಷಯದಲ್ಲೂ ಕೋಟ್ಯಂತರ ರೂ. ಅವ್ಯವಹಾರ ಆಗಿದೆ ಎಂದು ದೂರಿದ್ದಾರೆ. ಆದರೆ ಯಾವುದೇ ದಾಖಲೆಗಳನ್ನೂ ಕೊಟ್ಟಿಲ್ಲ. ಪ್ರತಿಯೊಂದು ವಿಷಯಕ್ಕೂ ಗಾಳಿಯಲ್ಲಿ ತೇಲಿಸಿ ದಾಖಲೆಗಳಿಲ್ಲದೆ ಮಾತನಾಡುತ್ತಾರೆ. ಅವರಿಗೆ ಪ್ರಚಾರದ ಹುಚ್ಚು ಇರುವುದರಿಂದ ನಿರಂತರ ಆರೋಪ ಮಾಡುತ್ತಾರೆ ಎಂದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಇಲ್ಲದಿರುವ ವಿಷಯವನ್ನು ಸೃಷ್ಟಿಸಿಲು ಪ್ರಯತ್ನಿಸ್ತಿದ್ದಾರೆ: ಡಾ.ಕೆ.ಸುಧಾಕರ್
Advertisement
Advertisement
ಬಿಟ್‌ಕಾಯಿನ್ ವಿಚಾರದಲ್ಲಿ ಸಾಧಿಸಿದ್ದೇನು? ತನ್ನ ಮೇಲೆ ಬಂದ ಆರೋಪಗಳನ್ನು ಅಲ್ಲಗೆಳೆಯಲು ಈ ರೀತಿ ಮಾತನಾಡುತ್ತಾರೆ. ಪೊಲೀಸರಿಗೆ ಸಿಗದ ವಾಯ್ಸ್ ರೆಕಾರ್ಡ್ ಇವರಿಗೆ ಹೇಗೆ ಸಿಗುತ್ತದೆ? ಇವರ ಹುನ್ನಾರ ಇಲ್ಲದೇ ಇಷ್ಟೆಲ್ಲಾ ನಡೆಯಲು ಸಾಧ್ಯವಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ಗೆ 20 ಕಡೆ ಒಬ್ಬರನ್ನೇ ಚುನಾವಣೆಗೆ ನಿಲ್ಲಿಸುವ ದಾರಿದ್ರ್ಯ ಬಂದಿದೆ: ಸುನಿಲ್ ಕುಮಾರ್
Advertisement
Advertisement
ಪ್ರಿಯಾಂಕ್ ಖರ್ಗೆಗೆ ತನಿಖೆಯಾಗಬೇಕು ಎಂದು ಹೇಳಿದ್ದೇನೆ. ನೋಟಿಸ್ ಕೊಟ್ಟರೆ ಅವರು ಉತ್ತರ ಕೊಡುವುದಿಲ್ಲ ಎನ್ನುತ್ತಾರೆ. ಇದು ಪಲಾಯನವಾದ ಅಲ್ಲದೇ ಮತ್ತೇನು? ತಲೆಮರೆಸಿಕೊಂಡ ಆರೋಪಿಗಳ ರೀತಿಯಲ್ಲೇ ಇವರೂ ವರ್ತಿಸುತ್ತಾರೆ ಎಂದು ಸುನಿಲ್ ಕುಮಾರ್ ನೇರ ಆರೋಪ ಮಾಡಿದರು.