DistrictsKarnatakaLatestLeading NewsMain PostUdupi

ಕಾಂಗ್ರೆಸ್‌ಗೆ 20 ಕಡೆ ಒಬ್ಬರನ್ನೇ ಚುನಾವಣೆಗೆ ನಿಲ್ಲಿಸುವ ದಾರಿದ್ರ್ಯ ಬಂದಿದೆ: ಸುನಿಲ್ ಕುಮಾರ್

ಉಡುಪಿ: 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಬೇಡಿಕೆಯಿದೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ಗೆ 20 ಕಡೆ ಒಬ್ಬನೇ ವ್ಯಕ್ತಿಯನ್ನು ದಾರಿದ್ರ್ಯ ಬಂದಿದೆ ಎಂದು ಟಾಂಗ್ ನೀಡಿದ್ದಾರೆ.

sunil kumar

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಕಳೆದ ಬಾರಿ ಎರಡು ಕಡೆ ಚುನಾವಣೆಗೆ ನಿಂತಿದ್ದರು. ಒಂದು ಕಡೆ ಸೋತು ಮತ್ತೊಂದು ಕಡೆ ಕಷ್ಟಪಟ್ಟು ಗೆದ್ದಿದ್ದರು. ಈಗ 20 ಕಡೆ ನಿಲ್ಲಲು ಯಾರು ಸಲಹೆ ಕೊಡುತ್ತಾರೋ ಗೊತ್ತಿಲ್ಲ. ಎಷ್ಟು ಕಡೆಯಿಂದ ಅವಕಾಶ ಕೊಡಬೇಕು ಎಂದು ಚುನಾವಣಾ ಆಯೋಗ ನಿರ್ಧಾರ ಮಾಡಲಿ ಎಂದಿದ್ದಾರೆ. ಇದನ್ನೂ ಓದಿ: ಈಗ ಸಿಕ್ಕವರು ಕಿಂಗ್‌ಪಿನ್‌ಗಳಲ್ಲ, ಗೃಹ ಸಚಿವರ ಮೇಲೆಯೇ ನನಗೆ ಅನುಮಾನ – ಪ್ರಿಯಾಂಕ್ ಖರ್ಗೆ

H VISHWANSTH SIDDARAMAIAH

20 ಕಡೆ ಒಬ್ಬನೇ ವ್ಯಕ್ತಿಯನ್ನು ನಿಲ್ಲಿಸುವ ದಾರಿದ್ರ‍್ಯತೆ ಕಾಂಗ್ರೆಸ್ಸಿಗೆ ಬಂದಿದೆ. ಅಲ್ಲಿಗೆ ಕಾಂಗ್ರೆಸ್‌ಗೆ ಬೇರೆ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಅಭ್ಯರ್ಥಿಗಳ ಕೊರತೆ ಇದೆ ಎನ್ನುವುದು ಸ್ಪಷ್ಟವಾಗಿದೆ. ಆ ಪಕ್ಷವನ್ನು ಭಗವಂತನೇ ಕಾಪಾಡಬೇಕು ಎಂದು ಸಚಿವ ಸುನಿಲ್‌ಕುಮಾರ್ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?: ಬಿಜೆಪಿ ಆಪರೇಷನ್ ಕಮಲ ಶುರು ಮಾಡುತ್ತಿದ್ದಂತೆಯೇ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರು 20 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬೇಡಿಕೆಯಿದೆ ಎಂಬ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಇದನ್ನೂ ಓದಿ: ಎರಡೂವರೆ ಗಂಟೆ ಸಭೆ – ರಾಜ್ಯದಲ್ಲೂ ಯುವ ಮುಖಗಳಿಗೆ ಮಣೆ?

SIDDARAMAIAH

ಕಳೆದ ಬಾರಿ ಪ್ರತಿಷ್ಠೆಯ ಕಣವಾಗಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಪ್ರತಿಸ್ಪರ್ಧಿಯಾಗಿದ್ದ ಹಾಲಿ ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ 36 ಸಾವಿರ ಮತಗಳ ಅಂತರದಿಂದ ಸೋತು ತೀವ್ರ ಮುಖಭಂಗ ಅನುಭವಿಸಿದ್ದರು. ಅಲ್ಲದೆ, ಸುಮಾರು 1 ಲಕ್ಷ ಮತಗಳ ಅಂತರದಿಂದ ಗೆಲ್ಲುವುದಾಗಿ ಘೋಷಿಸಿದ್ದ ಬಾದಾಮಿ ಕ್ಷೇತ್ರದಲ್ಲಿ ಕೇವಲ 1696 ಮತಗಳ ಅಂತರದಿಂದ ಜಯಗಳಿಸಿದ್ದರು. ಇದರಿಂದ ಆರಂಭದ ಒಂದೂವರೆ ವರ್ಷ ಜೆಡಿಎಸ್‌ನೊಂದಿಗೆ ಮೈತ್ರಿ ಸರ್ಕಾರ ರಚಿಸಬೇಕಾದ ಅನಿವಾರ್ಯತೆ ಉಂಟಾಗಿತ್ತು.

SUNILKUMAR

ಇದೀಗ 2023ರ ಚುನಾವಣೆಗೆ ತಮಗೆ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬೇಡಿಕೆ ಇರುವುದಾಗಿ ಅವರು ಹೇಳಿದ್ದರು. ನನಗೆ ಆಕ್ಷೇತ್ರ, ಈ ಕ್ಷೇತ್ರ ಅಂತಲ್ಲ. ಬಾದಾಮಿ ಇಲ್ವಾ? ಅಲ್ಲಿಂದಲೇ ಮತ್ತೆ ಸ್ಪರ್ಧಿಸಿದರೂ ಸ್ಪರ್ಧಿಸಬಹುದು. ಸುಮಾರು 20 ಕ್ಷೇತ್ರಗಳಲ್ಲಿ ಜನ ಕರೆಯುತ್ತಿದ್ದಾರೆ. ವರುಣಾ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಕೋಲಾರ ಸೇರಿದಂತೆ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ. ಚುನಾವಣೆಗೆ ತುಂಬಾ ದಿನ ಇದೆ. ಹತ್ತಿರ ಬಂದಾಗ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ

ವಿಶ್ವನಾಥ್ ಮತ್ತೆ ಆಹ್ವಾನ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಹ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಹ್ವಾನ ನೀಡಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರ ಕೊಡುಗೆ ಅಪಾರವಾಗಿದೆ. ಅವರು ಸ್ಪರ್ಧಿಸಿದರೆ, ನಾವೇ ಗೆಲ್ಲಿಸುತ್ತೇವೆ ಎಂದು ಇಂದೂ ಮತ್ತೆ ಆಹ್ವಾನ ನೀಡಿದ್ದಾರೆ.

Leave a Reply

Your email address will not be published.

Back to top button