Bengaluru CityDistrictsKarnatakaLatestLeading NewsMain Post

ಎರಡೂವರೆ ಗಂಟೆ ಸಭೆ – ರಾಜ್ಯದಲ್ಲೂ ಯುವ ಮುಖಗಳಿಗೆ ಮಣೆ?

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಹೇಳಿಕೆಯ ಬೆನ್ನಲ್ಲೇ ಭಾನುವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಿರಿಯ ನಾಯಕರು ಎರಡೂವರೆ ಗಂಟೆಗಳ ಕಾಲ ಮಹತ್ವದ ಸಭೆ ನಡೆಸಿದ್ದಾರೆ.

ಬಿ.ಎಲ್ ಸಂತೋಷ್ ಜೊತೆಗಿನ ಸಭೆ, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾತುಕತೆ ನಡೆಸಿದ್ದಾರೆ.

ಬಿಜೆಪಿ ಗೃಹ ಸಚಿವ ಅಮಿತ್‌ ಶಾ ರಾಜ್ಯ ಪ್ರವಾಸದ ಬಗ್ಗೆ ನಾಯಕರು ಸಭೆ ನಡೆಸಿದ್ದಾರೆ ಎಂದು ನಾಯಕರು ಹೇಳಿದ್ದಾರೆ. ಆದರೆ ಬಿಎಲ್‌ ಸಂತೋಷ್‌ ಮೈಸೂರಿನಲ್ಲಿ ನೀಡಿದ ಹೇಳಿಕೆಯ ಬೆನ್ನಲ್ಲೇ ನಾಯಕರು ಎರಡೂವರೆ ಗಂಟೆ ಸಭೆ ನಡೆಸಿದ್ದರಿಂದ ಸಂಪುಟ ಪುನಾರಚನೆ, ಕೆಲ ಮಹತ್ವದ ಬದಲಾವಣೆ ಬಗ್ಗೆ ಚರ್ಚೆ ನಡೆದಿದ್ಯಾ ಎಂಬ ಪ್ರಶ್ನೆ ಎದ್ದಿದೆ.

ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಸಂಬಂಧ ಮೈಸೂರಿನಲ್ಲಿ ಶನಿವಾರ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಪಕ್ಷದ ಕಾರ್ಯಕರ್ತರಿಗೆ, ಹೊಸ ಮುಖಗಳಿಗೆ ಅವಕಾಶ ನೀಡುವ ಪ್ರಯೋಗ ನಡೆಸುವ ಧೈರ್ಯವನ್ನು ಬಿಜೆಪಿ ತೋರುತ್ತಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಕ್ಯಾಂಪಸ್‌ ಪ್ರವೇಶಕ್ಕೆ ರಾಹುಲ್‌ಗೆ ಅನುಮತಿ ನೀಡದ ವಿವಿ – ಉಸ್ಮಾನಿಯಾ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಸಂಪುಟ ಪುನರ್‌ರಚನೆ ಸರ್ಕಸ್‌ ನಡೆಯುತ್ತಿರುವಾಗಲೇ , ಸಂಘಟನೆಗಾಗಿ ದುಡಿದ ಹೊಸ ಮುಖಗಳಿಗೆ ಹೆಚ್ಚು ಅವಕಾಶ ನೀಡುತ್ತಿರುವುದಾಗಿ ಬಿಎಲ್‌ ಸಂತೋಷ್‌ ನೀಡಿರುವ ಹೇಳಿಕೆ ಕಮಲ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ಬೆಂಗಳೂರಿಗೆ ಅಮಿತ್ ಷಾ ಆಗಮಿಸುವ ಎರಡು ದಿನ ಮೊದಲೇ ಸಂತೋಷ್ ಅವರ ಮಾತುಗಳ ಹಿಂದಿನ ಮರ್ಮ ಏನು ಎಂಬುದರ ಬಗ್ಗೆ ನಾನಾ ದೃಷ್ಟಿಕೋನಗಳಿಂದ ಬಿಜೆಪಿ ಒಳಗೆ ಚರ್ಚೆಗಳು ಶುರುವಾಗಿವೆ. ಸಂಘಟನೆಯ ನಾಯಕತ್ವದಲ್ಲಿ ಬದಲಾವಣೆ ತರಬಹುದಾ? ಸರ್ಕಾರದ ನಾಯಕತ್ವದಲ್ಲಿ ಬದಲಾವಣೆ ತರಬಹುದಾ? ಮುಂದಿನ ಚುನಾವಣೆಯ ಭವಿಷ್ಯದ ನಾಯಕತ್ವದಲ್ಲಿಬದಲಾವಣೆ ತರುವ ಮಾತುಗಳ ಎಂಬುದಕ್ಕೆ ಸ್ಪಷ್ಟತೆ ಸಿಗುತ್ತಿಲ್ಲ. ಕುಟುಂಬ ರಾಜಕಾರಣ ವಿರೋಧಿಸಿ ಸಿಎಂ ಕುರ್ಚಿಗೆ ವಯಸ್ಸಿನ ಮಿತಿಯನ್ನ ಫಿಕ್ಸ್ ಮಾಡಿ ಸಂತೋಷ್ ಆಡಿರುವ ಮಾತುಗಳು ಹೆಚ್ಚು ಮಹತ್ವವನ್ನ ಪಡೆದುಕೊಂಡಿವೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಜತೆ ಕಂಗನಾ ರಣಾವತ್ ಮೀಟಿಂಗ್?

ಈಗಾಗಲೇ ಗುಜರಾತ್‌ ಮತ್ತು ಉತ್ತರ ಪ್ರದೇಶದಲ್ಲಿ ಹಿರಿಯ ನಾಯಕರನ್ನು ಕೈ ಬಿಟ್ಟು ಯುವ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ನೀಡಿದ ಈ ಪ್ರಯೋಗ ಯಶಸ್ವಿಯಾಗಿದ್ದು ಎರಡೂ ಕಡೆಯೂ ಬಿಜೆಪಿ ಜಯಗಳಿಸಿದೆ. ಮುಂದೆ ಕರ್ನಾಟಕದಲ್ಲೂ ಚುನಾವಣೆ ನಡೆಯಲಿರುವ ಕಾರಣ ಇಲ್ಲೂ ಈ ಪ್ರಯೋಗ ನಡೆಯುತ್ತಾ ಎನ್ನುವುದೇ ಕುತೂಹಲ.

Leave a Reply

Your email address will not be published.

Back to top button