– ಮದ್ವೆಯಾಗಲು ಬಯಸಿದ್ದ ಬಾಯ್ಫ್ರೆಂಡ್ಗೆ ಕಳುಹಿಸಿದ್ದ ಫೋಟೋಸ್ ಲೀಕ್; FIR ದಾಖಲು
ಬೆಂಗಳೂರು: ಇಲ್ಲಿನ ಇಂದಿರಾನಗರದ 28 ವರ್ಷದ ಯುವತಿಯೊಬ್ಬಳು ಮದ್ವೆಯಾಗಲು ಬಯಸಿದ್ದ ತನ್ನ ಬಾಯ್ಫ್ರೆಂಡ್ ಜೊತೆ ಸ್ನ್ಯಾಪ್ಚಾಟ್ (Snapchat) ಆ್ಯಪ್ ಮೂಲಕ ಹಂಚಿಕೊಂಡಿದ್ದ ಖಾಸಗಿ ಹಾಗೂ ನಗ್ನ ಫೋಟೋಗಳು ಅಶ್ಲೀಲ ವೆಬ್ಸೈಟ್ನಲ್ಲಿ ಸೋರಿಕೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಯುವತಿ ತನ್ನ ಪ್ರಿಯಕರನ ಮೇಲಿನ ನಂಬಿಕೆಯಿಂದ ಶಾಸಗಿ ಫೋಟೋ (Private Photos) ಮತ್ತು ವಿಡಿಯೋಗಳನ್ನ ಸ್ನ್ಯಾಪ್ ಚಾಟ್ ಮೂಲಕ ಹಂಚಿಕೊಂಡಿದ್ದಳು. ಆದ್ರೆ ಕಿಡಿಗೇಡಿಗಳು ಆ ಸ್ನ್ಯಾಪ್ಚಾಟ್ ಖಾತೆಯನ್ನು ಹ್ಯಾಕ್ ಮಾಡಿ ಫೋಟೋಗಳನ್ನ ಕಳವು ಮಾಡಿದ್ದಾರೆ. ನಂತರ ಆ ಅಸಭ್ಯ ದೃಶ್ಯಗಳನ್ನ ಪೋರ್ನ್ ವೆಬ್ಸೈಟ್ಗಳಲ್ಲಿ ಪ್ರಸಾರ ಮಾಡಿದ್ದಾರೆ.
ಬಳಿಕ ಇಂಟರ್ನೆಟ್ನಲ್ಲಿ ತನ್ನದೇ ಖಾಸಗಿ ಫೋಟೋಗಳನ್ನ ಕಂಡು ತೀವ್ರ ಮಾನಸಿಕ ಆಘಾತಕ್ಕೊಳಗಾದ ಯುವತಿ, ಧೃತಿಗೆಡದೆ ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವೆಬ್ಸೈಟ್ನಿಂದ ತನ್ನ ಖಾಸಗಿ ಫೋಟೋ ಹಾಗೂ ವೀಡಿಯೊಗಳನ್ನ ಕೂಡಲೇ ತೆಗೆದುಹಾಕುವಂತೆ ದೂರಿನಲ್ಲಿ ಮನವಿ ಮಾಡಿರುವ ಯುವತಿ, ಈ ಕೃತ್ಯ ಎಸಗಿರುವ ಸೈಬರ್ ವಂಚಕರನ್ನ ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಸೈಬರ್ ಜಗತ್ತಿನಲ್ಲಿ ಇಂತಹ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುವ ಮುನ್ನ ಯುವತಿಯರು ತೀವ್ರ ಎಚ್ಚರಿಕೆ ವಹಿಸಬೇಕೆಂಬುದಕ್ಕೆ ಈ ಪ್ರಕರಣ ಪ್ರಮುಖ ಎಚ್ಚರಿಕೆಯಾಗಿದೆ.

