ದಿಸ್ಪುರ್: ಮದರಸಾಗಳು ತಮ್ಮ ಹಣಕಾಸಿನ ಮೂಲಗಳನ್ನು ಬಹಿರಂಗಪಡಿಸುವಂತೆ ಅಸ್ಸಾಂ ಪೊಲೀಸರು ಇಂದು ಸೂಚಿಸಿದ್ದಾರೆ.
ರಾಜ್ಯದಲ್ಲಿ ಜಿಹಾದಿ ಚಟುವಟಿಕೆಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿರುವ ಭಾಗವಾಗಿ ಈ ನಿರ್ದೇಶನ ನೀಡಲಾಗಿದೆ. ಕಾನೂನುಬಾಹಿರ ಚಟುವಟಿಕೆ ತಡೆಯುವ ಸಲುವಾಗಿ ಶೀಘ್ರದಲ್ಲೇ ಆನ್‌ಲೈನ್ ಪೋರ್ಟಲ್ ತೆರೆಯಲಾಗುತ್ತಿದೆ. ಈ ಪೂರ್ಟಲ್‌ನಲ್ಲೇ ಹಣಕಾಸಿನ ಮೂಲ ಹಾಗೂ ಮದರಸಾದ ವಿವರಗಳನ್ನು ಬಹಿರಂಗಪಡಿಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ತಿಂಗಳಿಗೊಮ್ಮೆ ಗೊಂಬೆ ಕುಣಿಸಲು ಬರ್ತಾರ – ಹೆಚ್‌ಡಿಕೆ ವ್ಯಂಗ್ಯ
Advertisement
Advertisement
ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಇತ್ತೀಚೆಗೆ ಮೂರು ಮದರಸಾಗಳನ್ನು ನೆಲಸಮಗೊಳಿಸಲಾಯಿತು. ಈ ಸಂಬಂಧವಾಗಿ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ ಇಂದು ಮುಸ್ಲಿಂ ಸಾಮಾಜಿಕ-ಧಾರ್ಮಿಕ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು. ಇದನ್ನೂ ಓದಿ: CPI(M) ಪಕ್ಷ ವಿರೋಧ ಹಿನ್ನೆಲೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ನಿರಾಕರಿಸಿದ ಕೆ.ಕೆ ಶೈಲಜಾ
Advertisement
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಹಿತಿ ಪ್ರಕಾರ ರಾಜ್ಯದಲ್ಲಿ 1 ಸಾವಿರ ಖಾಸಗಿ ಮದರಸಾಗಳಿವೆ. ಅವುಗಳಲ್ಲಿ ಕೆಲವು ನೋಂದಾಯಿಸಿಲ್ಲ. ಹಾಗಾಗಿ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳನ್ನು ಹೊಂದಿರುವ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿ ಮದರಸಾಗಳು ತಮ್ಮ ವಿವರ, ಜಮೀನು, ಶಿಕ್ಷಕರು ಮತ್ತು ಹಣಕಾಸಿನ ಮೂಲಗಳ ವಿವರಗಳನ್ನು ಬಹಿರಂಗಪಡಿಸುವಂತೆ ನೋಡಿಕೊಳ್ಳಲಿದೆ. ಇನ್ನು 6 ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆಯೂ ಬಿಜೆಪಿ ನೇತೃತ್ವದ ಸರ್ಕಾರ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ 800 ಮದರಸಾಗಳನ್ನು ಮುಚ್ಚಿಸಿತ್ತು. ಕಳೆದ ಮಾರ್ಚ್ ತಿಂಗಳಿನಿಂದ 37 ಮಂದಿ ಮದರಸಾ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.