ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಏನ್ ಕೊಟ್ಟಿದ್ದೀವಿ ಅಂತಾ ತಿಂಗಳಿಗೊಮ್ಮೆ ಬರುವುದಾಗಿ ಹೇಳಿದ್ದಾರೆ. ಇಲ್ಲೇನು ಗೊಂಬೆ ಕುಣಿಸಲು ಬರ್ತಾರಾ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮಂಡ್ಯದ ನಾಗಮಂಗಲ ತಾಲೂಕಿನ ದೊಡ್ಡಚಿಕ್ಕನಹಳ್ಳಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏನ್ ಮಾಡೋದಕ್ಕೆ ಮೋದಿ ತಿಂಗಳಿಗೊಮ್ಮೆ ಬರ್ತಾರೆ? ಏನ್ ಕೊಟ್ಟಿದ್ದೀವಿ ಎಂದು ಬರ್ತಾರೆ? ಇಲ್ಲೇನು ಗೊಂಬೆ ಕುಣಿಸಲು ಬರ್ತಾರಾ? ಮೊದಲು ಜನರ ಸಮಸ್ಯೆ ಬಗೆಹರಿಸಿ. ಕಳೆದ ಮೂರು ವರ್ಷಗಳಲ್ಲಿ 35 ರಿಂದ 40 ಸಾವಿರ ಕೋಟಿ ರೈತರ ಬೆಳೆ ನಾಶವಾಗಿದೆ. ಇದ್ಯಾವುದಕ್ಕೂ ಧ್ವನಿ ಎತ್ತದೆ ಇಲ್ಲಿ ಬಂದು ಏನ್ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: CPI(M) ಪಕ್ಷ ವಿರೋಧ ಹಿನ್ನೆಲೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ನಿರಾಕರಿಸಿದ ಕೆ.ಕೆ ಶೈಲಜಾ
Advertisement
Advertisement
ಬೆಂಗಳೂರು – ಮೈಸೂರು ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ಇರೋದ್ರಿಂದ ಬದಲಿ ಮಾರ್ಗ ಸೂಚಿಸಲಾಗಿದೆ. ಪ್ರತಾಪ್ ಸಿಂಹ ಯಾಕೆ ಇಷ್ಟೊಂದು ವಹಿಸಿಕೊಳ್ತಿದ್ದಾರೆ ಎಂದು ಗೊತ್ತಿಲ್ಲ ಎಂದು ಕುಟುಕಿದ್ದಾರೆ.
Advertisement
ಮುರುಘಾ ಶ್ರೀಗಳ ವಿಚಾರವಾಗಿ ಮಾತನಾಡಿ, ಶ್ರೀಗಳ ವಿಚಾರದಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಕಾನೂನು ವ್ಯಾಪ್ತಿಯಲ್ಲಿ ಘಟನೆಯ ಸತ್ಯಾಂಶ ಹೊರತೆಗೆಯಬೇಕು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಚರ್ಚೆ ಮಾಡುವುದು ಅನವಶ್ಯಕ. ಜನರಲ್ಲಿ ಅಪನಂಬಿಕೆ ಬಾರದಂತೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರಾಜಕೀಯಕ್ಕೆ ಸೇರಿ ಅಂದವರಿಗೆ ಕಾಫಿನಾಡು ಚಂದು ಹೇಳಿದ್ದೇನು ಗೊತ್ತಾ?
Advertisement
ಅರವಿಂದ ಲಿಂಬಾವಳಿ ಮಹಿಳೆ ಜೊತೆ ಅನುಚಿತ ವರ್ತನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಲಿಂಬಾವಳಿ ಹೆಣ್ಣುಮಕ್ಕಳಿಗೆ ದೌರ್ಜನ್ಯ ಮಾಡಲ್ಲ. ಅವರು ದೌರ್ಜನ್ಯ ಮಾಡುವುದೇ ಬೇರೆಯವರಿಗೆ. ಈ ಹಿಂದೆ ಅವರು ಕೋರ್ಟ್ ನಲ್ಲಿ ಸ್ಟೇ ತಂದಿದ್ರು. ಆ ಕ್ಯಾಸೆಟ್ ನೋಡಿದ್ರೆ ಅವರು ಯಾರ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂದು ಗೊತ್ತಾಗುತ್ತದೆ. ಅವರು ಹೆಣ್ಣುಮಕ್ಕಳ ಮೇಲೆ ರೇಪ್ ಮಾಡಲು ಹೋಗಿಲ್ಲ ಅಂತಾ ಹೇಳಿದ್ದಾರೆ. ಅವರ ನಡವಳಿಕೆಗಳು ಬೇರೆ ರೀತಿ ಇದೆ. ಜನಪ್ರತಿನಿಧಿಗಳಿಗೆ ಅಹವಾಲನ್ನು ಕೊಡಲು ಬಂದಾಗ ತೆಗೆದುಕೊಳ್ಳಬೇಕು. ಅಗೌರವವಾಗಿ ನಡೆದುಕೊಳ್ಳಬಾರದು. ಈ ವರ್ತನೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವೇಗೌಡರ ಆರೋಗ್ಯ ವಿಚಾರವಾಗಿ ಮಾತನಾಡಿದ ಅವರು, ದೇವರ ದಯೆಯಿಂದ ದೇವೇಗೌಡರ ಆರೋಗ್ಯ ಮತ್ತೆ ಚೇತರಿಸುತ್ತಿದೆ. ಗಣೇಶ ಹಬ್ಬದಂದು ಅವರೇ ಹೇಳಿದ್ದಾರೆ. ಜನತೆಯ ಮುಂದೆ ಬಂತು ಆಶೀರ್ವಾದ ತೆಗೆದುಕೊಳ್ಳುತ್ತಾರೆ. ಪಕ್ಷ ಸಂಘಟನೆ ಮಾಡುವ ಕೆಲಸವನ್ನೂ ಮಾಡ್ತಾರೆ ಎಂದು ಹೇಳಿದ್ದಾರೆ.