ನವದೆಹಲಿ: ಟೀಂ ಇಂಡಿಯಾ (Team India) ಆಟಗಾರ ಪೃಥ್ವಿ ಶಾ (Prithvi Shaw) ಅವರು ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಗಾಯಗೊಂಡ ಕಾಲಿನ ಚಿತ್ರ ಹಂಚಿಕೊಂಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ರಾಯಲ್ ಲಂಡನ್ ಕಪ್ ಟೂರ್ನಿಯಲ್ಲಿ ಪೃಥ್ವಿ ಶಾ ನಾಥಾರ್ಂಪ್ಟನ್ ಶೈರ್ ತಂಡದ ಪರವಾಗಿ ಆಡುತ್ತಿದ್ದರು. ಆ.13ರ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಮೊಣಕಾಲಿನ ತೀವ್ರ ಗಾಯಕ್ಕೆ ಒಳಗಾಗಿದ್ದರು. ಸ್ಕ್ಯಾನಿಂಗ್ ವರದಿಯಲ್ಲಿ ಆರಂಭದಲ್ಲಿ ಊಹಿಸಿದ್ದಕ್ಕಿಂತಲೂ ಗಾಯದ ತೀವ್ರತೆ ಹೆಚ್ಚಾಗಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್‍ನ ಅಧಿಕಾರಿಗಳು ಮಾಹಿತಿ ನೀಡಿದ್ದು ಮುಂದಿನ ವರ್ಷಾರಂಭದಲ್ಲಿ ಪೃಥ್ವಿ ಶಾ ಮತ್ತೆ ಕಣಕ್ಕಿಳಿಯಬಹುದು ಎಂದಿದ್ದರು. ಇದನ್ನೂ ಓದಿ: ಉರಿವ ಕೆಂಡದ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ಬಾಂಗ್ಲಾ ಸ್ಟಾರ್ ಕ್ರಿಕೆಟಿಗ
ಪೃಥ್ವಿ ಶಾ ರಾಯಲ್ ಲಂಡನ್ ಕಪ್ ಟೂರ್ನಿಯಲ್ಲಿ ಉನ್ನತ ಫಾರ್ಮ್‍ನಲ್ಲಿದ್ದು ನಾಲ್ಕು ಪಂದ್ಯಗಳ ಅಂತ್ಯಕ್ಕೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್‍ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ನಾಲ್ಕು ಇನ್ನಿಂಗ್ಸ್‍ಗಳಲ್ಲಿ ಶಾ ಭರ್ಜರಿ 429 ರನ್‍ಗಳನ್ನು ಗಳಿಸಿದ್ದು ಸೋಮರ್ಸೆಟ್ ತಂಡದ ವಿರುದ್ಧ ದಾಖಲೆಯ 244 ರನ್ ಕೂಡ ಇದರಲ್ಲಿ ಸೇರಿದೆ. ಅಲ್ಲದೆ ಡರ್ಹಮ್ ವಿರುದ್ಧ 125 ರನ್‍ಗಳನ್ನು ಕುಡ ಬಾರಿಸಿ ಸಂಚಲನ ಮೂಡಿಸಿದ್ದರು. ಆದರೆ ಮೊಣಕಾಲಿನ ಗಾಯಕ್ಕೆ ತುತ್ತಾಗುವ ಮೂಲಕ ನಾಥಾರ್ಂಪ್ಟನ್ ಶೈರ್ ಜೊತೆಗಿನ ಈ ಬಾರಿಯ ಅಬ್ಬರ ಕೊನೆಗೊಂಡಿದೆ.
ಆಗಸ್ಟ್ 13ರ ಪಂದ್ಯದಲ್ಲಿ 76 ಎಸೆತಗಳಲ್ಲಿ ಅಜೇಯ 125 ರನ್ ಗಳಿಸಿದ್ದರು. ಈ ಮೂಲಕ ಡರ್ಹಾಮ್ ವಿರುದ್ಧ ನಾಥಾರ್ಂಪ್ಟನ್‍ಶೈರ್ ಆರು ವಿಕೆಟ್‍ಗಳ ಗೆಲುವು ಸಾಧಿಸಿತ್ತು.
ಐಪಿಎಎಲ್‍ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಅವರು ಉತ್ತಮ ಪ್ರದರ್ಶನದಿಂದ ಫಾರ್ಮ್ ಕಂಡು ಕೊಂಡಿದ್ದರು. ಆ ವೇಳೆಗಾಗಲೇ ಗಾಯಗೊಂಡು ಮತ್ತೆ ಹಿನ್ನೆಡೆ ಅನುಭವಿಸಿದ್ದಾರೆ. ಇದನ್ನೂ ಓದಿ: WorldCup 2023: ಬಿಸಿಸಿಐಗೆ ಹೊಸ ತಲೆನೋವು – ವೇಳಾಪಟ್ಟಿ ಬದಲಾವಣೆಗೆ ಹೈದರಾಬಾದ್ ಅಧಿಕಾರಿಗಳಿಂದ ಮನವಿ
Web Stories