ನವದೆಹಲಿ: 2018-19 ನೇ ಸಾಲಿನ ಬಜೆಟ್ ಮಂಡನೆ ಮಾಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳ ಸಂಬಳವನ್ನು ಏರಿಕೆ ಮಾಡಿದ್ದಾರೆ.
ರಾಷ್ಟ್ರಪತಿಗಳ ವೇತನವನ್ನು ಪ್ರತಿ ತಿಂಗಳಿಗೆ 5 ಲಕ್ಷ ರೂಪಾಯಿ, ಉಪರಾಷ್ಟ್ರಪತಿಗಳ ವೇತನವನ್ನು 4.5 ಲಕ್ಷ ರೂಪಾಯಿ ಮತ್ತು ರಾಜ್ಯಪಾಲರುಗಳ ವೇತನವನ್ನು 3.5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
Advertisement
ಇದೇ ವೇಳೆ ಸಂಸದರ ವೇತನವನ್ನು ಅಧಿಕ ಮಾಡಲಾಗುವುದು. ಪ್ರತಿ 5 ವರ್ಷಕ್ಕೊಮ್ಮೆ ಹಣದುಬ್ಬರವನ್ನು ಆಧರಿಸಿ ವೇತನ ಪರಿಷ್ಕರಣೆ ಮಾಡುವ ಹೊಸ ಕಾನೂನನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸದನದಲ್ಲಿ ತಿಳಿಸಿದ್ದಾರೆ.
Advertisement
Advertisement
ಈವರೆಗೆ ರಾಷ್ಟ್ರಪತಿ ತಿಂಗಳಿಗೆ 1.5 ಲಕ್ಷ ರೂ. ವೇತನ ಪಡೆಯುತ್ತಿದ್ದರು. ಈಗ 1.5 ಲಕ್ಷ ರೂ. ಯಿಂದ 5 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಉಪರಾಷ್ಟ್ರ ಪತಿಯ ವೇತನವನ್ನು ತಿಂಗಳಿಗೆ 1.10 ಲಕ್ಷ ರೂ. ನಿಂದ 4.5 ಲಕ್ಷ ರೂ. ಗೆ ಏರಿಸಲಾಗಿದೆ.
Advertisement
ಒಂದು ವೇಳೆ ವೇತನ ಹೆಚ್ಚಾಗುವ ಮುನ್ನ ರಾಷ್ಟ್ರಪತಿ ನಿವೃತ್ತರಾದರೆ ಅವರಿಗೆ ತಿಂಗಳಿಗೆ 30 ಸಾವಿರ ರೂ. ಬಡ್ತಿ ಬರುತ್ತಿತ್ತು. 2008ರಲ್ಲಿ ರಾಷ್ಟ್ರಪತಿ ಸಂಬಳ 50,000 ರೂ. ಯಿಂದ 1.5 ಲಕ್ಷ ರೂ. ಗಳಿಗೆ ಏರಿಸಲಾಗಿತ್ತು. ಇದನ್ನು ಓದಿ: ನಮ್ಮ ಸಂಸದರಿಗೆ ಈಗ ಎಷ್ಟು ಸಂಬಳ? ಭತ್ಯೆ ಎಷ್ಟು ಸಿಗುತ್ತೆ?