ನವದೆಹಲಿ: ಪ್ರತಿಭಟನೆಗೂ ಮುನ್ನ ನನ್ನ ಅರೆಸ್ಟ್ ಮಾಡಲು ಬಂದ ಬಿಜೆಪಿ ನಾಯಕರುಗಳೇ ಶಿಖಂಡಿಗಳು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ವಾಗ್ದಾಳಿ ನಡೆಸಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿಭಟನೆ ತಡೆಯಲು ಪೊಲೀಸ್ ಹಾಕಿದ ಭದ್ರತೆ ಬಗ್ಗೆ ಬಿಜೆಪಿ ಮಾತನಾಡಲಿ. ಕಾಂಗ್ರೆಸ್ ನಾಯಕರಿಗೆ ಹೆದರಿ ಬಾರಿ ಭದ್ರತೆ ನಿಯೋಜನೆ ಮಾಡಿದ್ದಾರೆ. ಈ ಭದ್ರತೆ ಅರುಣಾಚಲ ಪ್ರದೇಶ, ಲಡಾಕ್ ನಲ್ಲಿ ಹಾಕಿದ್ದರೇ ಚೀನಾ ದೇಶದ ಒಳಗೆ ಬರುತ್ತಿರಲಿಲ್ಲ ಎಂದರು.
ಸಿ.ಟಿ ರವಿ ಒಬ್ಬ ಸಮಾಜಘಾತುಕ. ಅವನೊಬ್ಬ ಮೆಂಟಲ್ ಗಿರಾಕಿ. ಬಿಜೆಪಿಯವರು 130ಕ್ಕೂ ಹೆಚ್ಚು ಕೇಸ್ ನನ್ನ ಮೇಲೆ ಹಾಕಿದ್ದಾರೆ. ಆದರೆ ನಾನು ಯಾವುದಕ್ಕೂ ಹೆದರಿಲ್ಲ. ಪ್ರತಿಭಟನೆ ನಡೆಸುವ ವೇಳೆ ನಾನು ಭಾಗಿಯಾಗಬೇಕಿತ್ತು. ಅದಕ್ಕೂ ಮುನ್ನ ನನ್ನ ಬಂಧಿಸಲು ಪ್ರಯತ್ನಿಸಿದರು ಎಂದು ಹೇಳಿದರು. ಇದನ್ನೂ ಓದಿ: ಪೊಲೀಸರನ್ನು ನೋಡುತ್ತಲೇ ಎದ್ನೋ ಬಿದ್ನೋ ಓಟಕ್ಕಿತ್ತ ಶ್ರೀನಿವಾಸ್ ಬಿವಿ
ನನ್ನ ಮೇಲಿನ ಭಯಕ್ಕೆ ನಿನ್ನೆಯಿಂದ ಬಂಧಿಸಲು ಪ್ರಯತ್ನ ಮಾಡಿದ್ದಾರೆ. ನಾನು ಜೈಲಿನಲ್ಲಿ ಕೂತರೆ ಕಾರ್ಯಕರ್ತರ ಕಥೆ ಏನು..?. ನಾನು ಯೂಥ್ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಬೇಕಿತ್ತು. ಪ್ರತಿಭಟನೆಗೂ ಮುನ್ನ ನನ್ನ ಅರೆಸ್ಟ್ ಮಾಡಲು ಬಂದ ಬಿಜೆಪಿ ನಾಯಕರು ಶಿಖಂಡಿಗಳು ಎಂದು ಕಿಡಿಕಾರಿದರು. ಇದನ್ನೂ ಓದಿ: ಮೋದಿಜೀ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಂಡಿಗೆ ಹೆದರದ ಕಾಂಗ್ರೆಸ್ ನಿಮ್ಮ ಸರ್ಕಾರಕ್ಕೆ ಹೆದರುತ್ತಾ?: ಸಿದ್ದರಾಮಯ್ಯ
ಸಿ.ಟಿ ರವಿಯವರೇ ನನ್ನ ಇತಿಹಾಸ ತೆಗೆದು ನೋಡಿ. ದೆಹಲಿಯಲ್ಲಿ ನನಗೆ ಏನು ಹೆಸರಿದೆ ಗೊತ್ತಾ?. ನನ್ನ ಆಕ್ಸಿಜನ್ ಮ್ಯಾನ್ ಅಂತಾ ಕರೆಯುತ್ತಾರೆ. ನ್ಯೂಯಾರ್ಕ್ ಟೈಮ್ಸ್ ತೆಗೆದು ಸಿ.ಟಿ ರವಿ ಓದಲಿ. ಬೇಕಾದ್ರೆ ಸಿ.ಟಿ ರವಿಗೆ ಪತ್ರಿಕೆ ಕಳಿಸುವೆ. ಸಿ.ಟಿ ರವಿಗೆ ಲೂಟಿ ರವಿ ಅಂತಾ ಕರಿತಾರೇ. ಯಾರ ಹಿನ್ನೆಲೆ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಗರಂ ಆದರು.