LatestMain PostNational

ಪೊಲೀಸರನ್ನು ನೋಡುತ್ತಲೇ ಎದ್ನೋ ಬಿದ್ನೋ ಓಟಕ್ಕಿತ್ತ ಶ್ರೀನಿವಾಸ್ ಬಿವಿ

ನವದೆಹಲಿ: ಜಾರಿ ನಿರ್ದೇಶನಾಲಯದ ಕಚೇರಿ ಹೊರ ಭಾಗ ಕಾಂಗ್ರೆಸ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದು, ಈ ನಡುವೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಪೊಲೀಸರಿಂದ ತಪ್ಪಿಸಕೊಳ್ಳಲು ಎದ್ನೋ ಬಿದ್ನೋ ಎಂಬತೆ ಓಟಕ್ಕಿತ್ತಿರುವ ವೀಡಿಯೋವೊಂದು ಭಾರೀ ವೈರಲ್ ಆಗಿದೆ.

ಶ್ರೀನಿವಾಸ್ ಬಿವಿ ತಮ್ಮ ಕಾರಿನಲ್ಲಿ ಇಡಿ ಕಚೇರಿಗೆ ತೆರಳುತ್ತಿದ್ದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಪೊಲೀಸರು ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ತಕ್ಷಣ ಶ್ರೀನಿವಾಸ್ ಓಟಕ್ಕಿತ್ತಿದ್ದಾರೆ. ಇದೀಗ ರಾಹುಲ್ ಗಾಂಧಿ ಪರವಾಗಿ ಪ್ರತಿಭಟನೆ ನಡೆಸಬೇಕಿದ್ದ ಶ್ರೀನಿವಾಸ್ ಹೆದರಿ ಓಡಿ ಹೋಗಿರುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಮೋದಿಜೀ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಂಡಿಗೆ ಹೆದರದ ಕಾಂಗ್ರೆಸ್ ನಿಮ್ಮ ಸರ್ಕಾರಕ್ಕೆ ಹೆದರುತ್ತಾ?: ಸಿದ್ದರಾಮಯ್ಯ

ವಿಪರ್ಯಾಸವೆಂದರೆ ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶ್ರೀನಿವಾಸ್, ತಾವು ಪೊಲೀಸರಿಗೆ ಎಂದೂ ಹೆದರುವುದಿಲ್ಲ, ಹಣಕಾಸಿನ ವಿಚಾರದಲ್ಲಿ ಇಡಿ ಹಗರಣಕ್ಕೆ ಸಿಲುಕಿರುವ ರಾಹುಲ್ ಗಾಂಧಿಯವರನ್ನು ಬೆಂಬಲಿಸಲು ಕಾಂಗ್ರೆಸ್ ಕಾರ್ಯಕರ್ತರು ಖಂಡಿತವಾಗಿಯೂ ಮೆರವಣಿಗೆ ನಡೆಸಲಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: ED ವಿಚಾರಣೆಗೆ ರಾಹುಲ್ ಹಾಜರ್‌ – ಪಾದಯಾತ್ರೆ ಮೂಲಕ ಕಾರ್ಯಕರ್ತರಿಂದ ಬೆಂಬಲ

Leave a Reply

Your email address will not be published.

Back to top button