ಬೇರೆ ಬೇರೆ ರೀತಿಯ ಉಂಡೆಗಳನ್ನು ನೀವು ತಿಂದಿರಬಹುದು. ಆದರಲ್ಲೂ ಬಹಳಷ್ಟು ಜನರಿಗೆ ನೆಲಗಡಲೆ ಉಂಡೆ ಅಂದ್ರೆ ಬಹಳ ಅಚ್ಚುಮೆಚ್ಚು. ಹಲವು ಜನರ ಪ್ರಿಯವಾಗಿರುವ ನೆಲಗಡಲೆ ಉಂಡೆ ಮಾಡುವುದು ಸಹ ಅಷ್ಟೇನು ಕಷ್ಟದ ಕೆಲಸವಲ್ಲ. ಮನೆಯಲ್ಲೇ ಉಂಡೆ ಮಾಡಬಹುದು. ಹೇಗೂ ಮನೆಗೆ ನೆಂಟರು ಬಂದಿರುತ್ತಾರೆ. ಬಂದವರ ಜೊತೆ ಸೇರಿ ಉಂಡೆ ಮಾಡಿ ತಿಂದರೆ ಹಬ್ಬದ ಸಂಭ್ರಮವೇ ಬೇರೆ. ಹೀಗಾಗಿ ಇಲ್ಲಿ ನೆಲಗಡಲೆ ಉಂಡೆ ಮಾಡುವ ಸರಳ ವಿಧಾನವನ್ನು ವಿವರಿಸಲಾಗಿದೆ.
ಬೇಕಾಗುವ ಸಾಮಾಗ್ರಿಗಳು
1. ಕಡಲೆಬೀಜ – 1 ಕಪ್
2. ತುರಿದ ಕೊಬ್ಬರಿ – 1/4 ಕಪ್
3. ಬೆಲ್ಲ – 3/4 ಕಪ್
4. ಎಳ್ಳು – 1/4 ಕಪ್
5. ಏಲಕ್ಕಿ – ಚಿಟಿಕೆ
Advertisement
Advertisement
ಮಾಡುವ ವಿಧಾನ:
1. ದಪ್ಪ ತಳದ ಪ್ಯಾನ್ ಗೆ ಮಧ್ಯಮ ಉರಿಯಲ್ಲಿ ಕಡಲೆಬೀಜಗಳನ್ನ ಹುರಿದುಕೊಳ್ಳಿ.
2. ಯಾವಾಗ ಕಡಲೆಬೀಜಗಳು ಕಂದು ಬಣ್ಣಕ್ಕೆ ತಿರುಗುತ್ತದೆಯೋ, ಆಗ ಅದಕ್ಕೆ ಎಳ್ಳನ್ನ ಸೇರಿಸಿ ಹುರಿದುಕೊಳ್ಳಿ
3. ಎಳ್ಳು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಮೇಲೆ, ಸಣ್ಣ ಉರಿಯಲ್ಲಿ ಕೊಬ್ಬರಿ ತುರಿಯನ್ನ ಗರಿ ಗರಿಯಾಗುವವರೆಗೆ ಹುರಿದುಕೊಳ್ಳಿ. ನಂತರ ಸ್ಟವ್ ಆಫ್ ಮಾಡಿ.
4. ಹುರಿದ ಕೊಬ್ಬರಿ, ಕಡಲೆಬೀಜ, ಎಳ್ಳು ಎಲ್ಲಾ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ.
5. ಪುಡಿಯು ಆದಷ್ಟು ತರಿ ತರಿಯಾಗಿ ಮತ್ತು ದಪ್ಪವಾಗಿರಲಿ.
6. ಅದಕ್ಕೆ ಬೆಲ್ಲವನ್ನ ಹಾಕಿ ಪುಡಿ ಮಾಡಿಕೊಳ್ಳಿ.
7. ಸುಮಾರು 3-4 ಸುತ್ತು ಮಿಕ್ಸಿಯಲ್ಲಿ ಪುಡಿ ಮಾಡಿ. ಅದಕ್ಕಿಂತ ಹೆಚ್ಚು ಮಾಡದಿರಿ
8. ಈ ಪುಡಿಯನ್ನ ಒಂದು ತಟ್ಟೆಗೆ ಹಾಕಿ, ಅದಕ್ಕೆ ಏಲಕ್ಕಿ ಪುಡಿಯನ್ನ ಮಿಶ್ರ ಮಾಡಿರಿ
9. ಸಣ್ಣ ಸಣ್ಣ ಉಂಡೆಗಳನ್ನ ಮಾಡಿ, ಗಾಳಿ ಆಡದಂತ ಡಬ್ಬಿಗೆ ಆ ಉಂಡೆಗಳನ್ನ ಹಾಕಿ, ವಾರಗಟ್ಟಲೆ ಶೇಖರಿಸಿ ಇಡಬಹುದು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv