ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಗೆ ‘ಆಯ್ಕೆ’ಗಳನ್ನು ಬದಲಿಸಿಕೊಳ್ಳಲು, ತೆಗೆದುಹಾಕಲು ಹಾಗೂ ಕ್ರಮಾಂಕ ಬದಲಿಸಿಕೊಳ್ಳಲು ಇದುವರೆಗೂ ನೀಡಿದ್ದ ಅವಕಾಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಶುಕ್ರವಾರ ಕೊನೆಗೊಳಿಸಿದೆ.ಇದನ್ನೂ ಓದಿ: ನಾಗಮಂಗಲ ಗಲಭೆ ಬೆನ್ನಲ್ಲೇ ಗುಪ್ತಚರ ವಿಭಾಗದ ಎಡಿಜಿಪಿ ಶರತ್ ಚಂದ್ರ ಎತ್ತಂಗಡಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ (H.Prasanna) ಮಾತನಾಡಿ, ಈ ಸಲುವಾಗಿ ತೆರೆದಿದ್ದ ಕೆಇಎ (KEA) ಪೋರ್ಟಲ್ ಅನ್ನು ಸ್ಥಗಿತಗೊಳಿಸಿದ್ದು, ಯಾವ ಬದಲಾವಣೆಗೂ ಅವಕಾಶ ಇರುವುದಿಲ್ಲ. ಈ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಗೆ ಪೂರ್ವ ತಯಾರಿ ಆರಂಭಿಸಿದಂತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿರೋದು ತಾಲಿಬಾನ್ ಸರ್ಕಾರ- ಹಿಂದೂ ಯುವಕರ ಮೇಲೆ ಕೇಸ್ ದಾಖಲಿಸಿದ್ದಕ್ಕೆ ಅಶೋಕ್ ಕಿಡಿ